ಸ್ಟೇಶನ್ ಈಗಲ್ಸ್​ಗೆ ಸುಲಭ ಜಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ನ ಬುಧವಾರದ ಪಂದ್ಯದಲ್ಲಿ ಸ್ಟೇಶನ್ ಈಗಲ್ಸ್, ಐವಾನ್-ಈ- ಶಾಹಿ ರಾಯಲ್ಸ್ ತಂಡಗಳು ಗೆಲುವಿನ ನಗೆ ಬೀರಿವೆ.

ನಗರದ ಸೈಯದ್ ಅಕ್ಬರ್ ಹುಸೇನಿ ಮೈದಾನದಲ್ಲಿ ಕೆಬಿಎನ್ ಹೌಸ್ ಆಪ್ ಸ್ಪೋರ್ಟ್​ ಕ್ಲಬ್ನಿಂದ ಆಯೋಜಿಸಿದ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸ್ಟೇಶನ್ ಈಗಲ್ಸ್ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ಗಳಿಸಿತು. ಶ್ರೀನಿವಾಸ ಕಾಂತಿ (53 ರನ್), ನಿತೀಶ್ ವಣಿಕ್ಯಾಳ (29 ರನ್) ಉತ್ತಮ ಬ್ಯಾಟಿಂಗ್ ಮಾಡಿ ತಂಡಕ್ಕೆ ನೆರವಾದರು. ಮೋಮಿನಪುರ ವಾರಿಯರ್ಸ್ ಪರ ಬೌಲಿಂಗ್ನಲ್ಲಿ ಶಿವರಾಜ, ಆಸಿಫ್ ಖಾನ್ ತಲಾ 2 ವಿಕೆಟ್ ಪಡೆದರು.

133 ರನ್ಗಳ ಗುರಿ ಬೆನ್ನಟ್ಟಿದ ಮೋಮಿನಪುರ ವಾರಿಯರ್ಸ್ 20 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 114 ರನ್ಗಳಿಸಿ ಸೋಲನುಭವಿಸಿತು. ಅನಿಲಕುಮಾರ (33 ರನ್), ಇರ್ಷಾದ್ ಅಹ್ಮದ್ (23 ರನ್) ಕೆಲಕಾಲ ಬ್ಯಾಟಿಂಗ್ ಮಾಡಿದರು. ಆದರೆ ಇನ್ನುಳಿದ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದರಿಂದ ತಂಡ ಸೋಲನುಭವಿಸಿತು. ಸ್ಟೇಶನ್ ಈಗಲ್ಸ್ ಪರ ಬೌಲಿಂಗ್ನಲ್ಲಿ ಶರಣ ಪಾಟೀಲ್ (3 ವಿಕೆಟ್), ಶ್ರೀನಿವಾಸ ಕಾಂತಿ (2 ವಿಕೆಟ್) ಭರ್ಜರಿ ಬೌಲಿಂಗ್ ಪ್ರದರ್ಶಿಸಿ ತಂಡವನ್ನು ಗೆಲ್ಲಿಸಿದರು.
ಶ್ರೀನಿವಾಸ ಕಾಂತಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.

ಐವಾನ್ ಶಾಹಿಗೆ ಜಯ ತಂದ ಬೌಲರ್ಸ್

ಮಧ್ಯಾಹ್ನ 1.10ಕ್ಕೆ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಐವಾನ್-ಈ- ಶಾಹಿ ರಾಯಲ್ಸ್ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 138 ರನ್ಗಳಿಸಿತು. ಶರಣಕುಮಾರ ಟೆಂಗಳಿ (64 ರನ್) ಆಕರ್ಷಕ ಅರ್ಧಶತಕ ಗಳಿಸಿದರೆ, ಅಕ್ಷಯ ಪಾಟೀಲ್ (30 ರನ್) ಉತ್ತಮ ಸಾಥ್ ನೀಡಿದರು. ಎಂಎಸ್ಕೆ ಮಿಲ್ ಟೈಟನ್ಸ್ ಪರ ಬೌಲಿಂಗ್ನಲ್ಲಿ ಸೈಯದ್ ಮೊಹ್ಮದ್ ಹಬೀಬ್ (3 ವಿಕೆಟ್), ರೈಸ್ ಶೇಖ್ (2 ವಿಕೆಟ್) ಕರಾರುವಕ್ಕಾದ ಬೌಲಿಂಗ್ ಮಾಡಿದರು. 139ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಎಂಎಸ್ಕೆ ಮಿಲ್ ಟೈಟಾನ್ಸ್ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ಗಳಿಸಿ 12 ರನ್ಗಳ ಅಂತರದಿಂದ ಸೋಲನುಭವಿಸಿತು. ಮಿರ್ಜಾ ಬೇಗ್, ಸೈಯದ್ ಹಬೀಬ್ ತಲಾ 25 ರನ್ಗಳಿಸಿದರೆ, ಸುಧೀರ್ ಚವಾಣ್ 16 ರನ್ಗಳಿಸಿ ತಂಡಕ್ಕೆ ಕೆಲಕಾಲ ನೆರವಾದರು. ಆದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಐವಾನ್- ಈ- ಶಾಹಿ ರಾಯಲ್ಸ್ ತಂಡದ ಪರ ಬೌಲರ್ಗಳು ಎಂಡಿ ಫಯಾಜುದ್ದೀನ್ (3 ವಿಕೆಟ್), ನಿತಿಶ್ (2 ವಿಕೆಟ್) ಭರ್ಜರಿ ಬೌಲಿಂಗ್ ಮಾಡಿದರು. ಇದರೊಂದಿಗೆ ಐವಾನ್-ಈ- ಶಾಹಿ ಬೌಲರ್ಗಳು ಮೇಲುಗೈ ಸಾಧಿಸಿ, ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.