ಸ್ಟೇಶನ್ ಈಗಲ್ಸ್ಗೆ`ಶ್ರೀನಿವಾಸ’ ಕೃಪಾಕಟಾಕ್ಷ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಕೆಬಿಎನ್ ಟರ್ಫ್ ಮೈದಾನದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಾಮೆಂಟ್-2019 ಕೊನೆಯ ಹಂತಕ್ಕೆ ತಲುಪಿದ್ದು, ಫೆ.6ರಿಂದ ಕ್ವಾಲಿಫೈಯರ್ ಪಂದ್ಯಗಳು ಜರುಗಲಿವೆ.

ಸೋಮವಾರದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಂಎಸ್ಕೆ ಮಿಲ್ ಟೈಟಾನ್ಸ್ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 102 ರನ್ಗಳಿಸಿತು. ಮಿರ್ಜಾ ವಾಸೀಂ (23 ರನ್), ಹಸನೈನ್ ರಾಜಾ (22 ರನ್) ಉತ್ತಮ ಬ್ಯಾಟಿಂಗ್ ಮಾಡಿದರು. ಸ್ಟೇಶನ್ ಈಗಲ್ಸ್ಪರ ಶ್ರೀನಿವಾಸ ಕಾಂತಿ 4 ವಿಕೆಟ್ ಕಬಳಿಸುವ ಮೂಲಕ ಆಕ್ರಮಣಕಾರಿ ಬೌಲಿಂಗ್ ಮಾಡಿದರು.

103 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಸ್ಟೇಶನ್ ಈಗಲ್ಸ್ 17.2 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 104 ರನ್ಗಳಿಸಿ ಗೆಲುವಿನ ನಗೆ ಬೀರಿತು. ಆಕ್ರಮಣಕಾರಿ ಬೌಲಿಂಗ್ ಮಾಡಿ 4 ವಿಕೆಟ್ ಪಡೆದಿದ್ದ ಶ್ರೀನಿವಾಸ ಕಾಂತಿ (ಅಜೇಯ 67 ರನ್) ಆಕರ್ಷಕ ಅರ್ಧಶತಕದೊಂದಿಗೆ ಏಕಾಂಗಿ ಹೋರಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಟೂರ್ನಿಯಲ್ಲಿ ತಂಡದ ಹೋರಾಟವನ್ನು ಜೀವಂತವಾಗಿಸಿದರು. ಎಂಎಸ್ಕೆ ಮಿಲ್ ಟೈಟಾನ್ಸ್ ಪರ ಬೌಲಿಂಗ್ನಲ್ಲಿ ರೈಸ್ ಶೇಖ್ 2 ವಿಕೆಟ್ ಪಡೆದರು. ಶ್ರೀನಿವಾಸ ಕಾಂತಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.

ರಾಯಲ್ಸ್ಗೆ ರೋಚಕ ಗೆಲುವು

ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಐವಾನ್-ಈ- ಶಾಹಿ- ರಾಯಲ್ಸ್ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 93 ರನ್ಗಳಿಸಿತು. ಎಂಡಿ ಫಯಾಜುದ್ದಿನ್ (27 ರನ್), ಶರಣಕುಮಾರ ಟೆಂಗಳಿ (20 ರನ್) ಸಾಧಾರಣ ಬ್ಯಾಟಿಂಗ್ ಮಾಡಿದರೆ, ಬರೋಬ್ಬರಿ 9 ಆಟಗಾರರು ಎರಡಂಕಿ ಮೊತ್ತ ದಾಟುವಷ್ಟರಲ್ಲಿಯೇ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ಸಂತ್ರಾಸವಾಡಿ ಸ್ಟ್ರೈಕರ್ಸ್ ಪರ ಬೌಲಿಂಗ್ನಲ್ಲಿ ಶೀತಲಕುಮಾರ ಕಾಸರ್ (3 ವಿಕೆಟ್), ಪ್ರಶಾಂತ ವಾಡಿ, ಸೈಯದ್ ತಮೀಮ್ ಪಾಶಾ ತಲಾ 2ವಿಕೆಟ್ ಪಡೆದರು. 94 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಸಂತ್ರಾಸವಾಡಿ ಸ್ಟ್ರೈಕರ್ಸ್ 16.1 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 83 ರನ್ಗಳಿಸಿ 10 ರನ್ಗಳ ಅಂತರದಿಂದ ಸೋಲನುಭವಿಸಿದರು. ಸೈಯದ್ ತಮೀಮ್ ಹುಸೇನ್ (23 ರನ್), ಯಾಸೀನ್ (18 ರನ್), ಪ್ರಶಾಂತ ವಾಡಿ (15 ರನ್) ಸಾಧಾರಣ ಬ್ಯಾಟಿಂಗ್ ಮಾಡಿದರು. ಇಲ್ಲಿ ಅಬ್ದುಲ್ ಕರೀಮ್ ಗಾಯಗೊಂಡು ನಿವೃತ್ತಿಯಾಗಿರುವುದರಿಂದ ತಂಡ ಸೋಲಿನ ದವಡೆಗೆ ಸಿಲುಕುವಂತಾಯಿತು. ಐವಾನ್-ಈ- ಶಾಹಿ- ರಾಯಲ್ಸ್ ಪರ ಬೌಲಿಂಗ್ನಲ್ಲಿ ಫಾಜಿಲ್ ಅಹ್ಮದ್ (3 ವಿಕೆಟ್), ವೆಂಕಟೇಶ ಪವಾರ್ (2 ವಿಕೆಟ್) ಭರ್ಜರಿ ಬೌಲಿಂಗ್ ಮಾಡಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಫೆ.6ರಿಂದ ಕ್ವಾಲಿಫೈಯರ್ ಪಂದ್ಯ

ನಗರದ ಕೆಬಿಎನ್ ಟರ್ಫ್ ಮೈದಾನದಲ್ಲಿ ಜ.22ರಿಂದ ನಡೆಯುತ್ತಿರುವ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಟೂರ್ನಾಮೆಂಟ್- 2019 ಅಂತಿಮ ಹಂತ ತಲುಪಿದೆ. ಫೆ.6ರಂದು ಮಾರ್ಕೆಟ್ ಸೂಪರ್ಕಿಂಗ್ಸ್- ರೌಜ್ ಸ್ಟಾರ್ಸ್ ಮಧ್ಯ ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಫೆ. 7ರಂದು ಸಂತ್ರಾಸವಾಡಿ ಸ್ಟ್ರೈಕರ್ಸ್- ಸ್ಟೇಶನ್ ಈಗಲ್ಸ್ ಪರ ಎಲಿಮಿನೇಟರ್ ಮ್ಯಾಚ್ ಜರುಗಲಿದೆ. ಫೆ.8ಕ್ಕೆ ಎಲಿಮಿನೇಟರ್ ವಿನ್ನರ್ ಹಾಗೂ ಕ್ವಾಲಿಫೈಯರ್-1 ಲಾಸರ್ ಮಧ್ಯೆ ಕ್ವಾಲಿಫೈಯರ್- 2 ಪಂದ್ಯ ಜರುಗಲಿದೆ. ಫೆ.10ರಂದು ಕ್ವಾಲಿಫೈಯರ್-2 ವಿನ್ನರ್ ಹಾಗೂ ಕ್ವಾಲಿಫೈಯರ್-1 ಮಧ್ಯೆ ಫೈನಲ್ ಕಾದಾಟ ಜರುಗಲಿದೆ.