ಸಂಬರಗಿ: ಶಾಂತಿ, ಸೌಹಾರ್ದ ಭಾವನೆ ಮೂಡಿಸಲು ಧಾರ್ಮಿಕತೆ ಸಹಾಯಕಾರಿ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಮದಬಾವಿ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ಮೂರ್ತಿ ಪ್ರತಿಷ್ಠಾಪಿಸಿ ಮಾತನಾಡಿದ ಅವರು, ಭಾರತ ಧರ್ಮ ಪ್ರಧಾನ ದೇಶವಾಗಿದೆ. ಈ ದೇಶದಲ್ಲಿ ಹತ್ತಾರು ಧರ್ಮಗಳು, ಪರಂಪರೆಗಳು ಅಸ್ತಿತ್ವದಲ್ಲಿವೆ. ಎಲ್ಲ ಧರ್ಮ ಹಾಗೂ ಪರಂಪರೆಗಳ ಆಚರಣೆ ಭಿನ್ನವಾಗಿದ್ದರೂ ಭಗವಂತನಲ್ಲಿ ಲೀನವಾಗುವುದೇ ಅಂತಿಮ ಅರ್ಥವಾಗಿದೆ ಎಂದರು.
ಜಾತಿಗಿಂತ ಧರ್ಮ ಶ್ರೇಷ್ಠವಾಗಿದ್ದು, ಧರ್ಮವನ್ನು ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವ ಭಕ್ತ ಸಮೂಹ ಮತ್ತು ಗುರು ಪೀಠದ ಕಾರ್ಯ ಶ್ಲಾಘನೀಯ. ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕ್ಕೆ 25 ವರ್ಷಗಳ ಹಿಂದೆ ಆಗಮಿಸಿದ್ದೆ. ಈಗ ಮತ್ತೆ ಮೂರ್ತಿ ಪ್ರತಿಷ್ಠಾಪನೆಗೆ ಆಗಮಿಸಿರುವೆ. ಇದು ಸಂತೋಷದಾಯಕ ಸಂಗತಿ ಎಂದು ತಿಳಿಸಿದರು.
ಮದಬಾವಿ ಗ್ರಾಮಸ್ಥರು ಹಾಗೂ ಸಿದ್ದೇಶ್ವರ ದೇವಸ್ಥಾನ ಕಮಿಟಿ ವತಿಯಿಂದ ಶ್ರೀಗಳನ್ನು ಲ, ಪುಷ್ಪ ನೀಡಿ ಗೌರವಿಸಲಾಯಿತು. ವೇದ ಘೋಷ ಹೇಳಿದ ಮಲ್ಲಿಕಾರ್ಜುನ ಶಾಸೀ, ಈರಣ್ಣ ಶಾಸಿ, ಸಂಜಯ ಶಾಸಿ, ವಿದ್ವಾನ್ ಚೇತನ ಶಾಸಿ, ಕಿರಣ ಶಾಸಿ ಅವರನ್ನು ರಂಭಾಪುರಿ ಜಗದ್ಗುರುಗಳು ಸತ್ಕರಿಸಿದರು. ಸಿಂಧನೂರು ರಂಭಾಪುರಿ ಮಠದ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಗ್ರಾಮಕ್ಕೆ ಆಗಮಿಸಿದ ರಂಭಾಪುರಿ ಶ್ರೀಗಳನ್ನು ಅಲಂಕತ ರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಸಿದ್ದೇಶ್ವರ ದೇವಸ್ಥಾನ ಆವರಣಕ್ಕೆ ಕರೆತರಲಾಯಿತು. ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.