ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲಿ

blank

ಹುಕ್ಕೇರಿ: ರಾಜ್ಯ ಸರ್ಕಾರ ಅನಧಿಕೃತ ಸ್ವತ್ತಿನ ಮಾಲೀಕತ್ವ ಅಽಕೃತಗೊಳಿಸಲು ಸುವರ್ಣಾವಕಾಶ ಕಲ್ಪಿಸಿದೆ. ಹೀಗಾಗಿ, ಪುರಸಭೆ ವ್ಯಾಪ್ತಿ ಅನಽಕೃತವಾಗಿ ಕಟ್ಟಡ ಮತ್ತು ನಿವೇಶನ ಹೊಂದಿದವರು ತಕ್ಷಣ ಪುರಸಭೆ ಅಽಕಾರಿಗಳನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ನಿಖಿಲ ಕತ್ತಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸೋಮವಾರ ಯೋಜನೆ ಫಲಾನುಭವಿಗಳಿಗೆ ಬಿ ಖಾತಾ ಉತಾರ ವಿತರಿಸಿ ಮಾತನಾಡಿದ ಅವರು, ಪುರಸಭೆ ಸರ್ವೇ ನಂ.೧೧೬ ಸೇರಿ ಕೆಲ ಜಮೀನುಗಳಲ್ಲಿ ನೂರಾರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆದರೆ, ಕಾನೂನಾತ್ಮಕವಾಗಿ ಅಧಿಕೃತ ನೋಂದಣಿಯಾಗಿಲ್ಲ. ಹೀಗಾಗಿ, ಈಗ ಸರ್ಕಾರದ ಆದೇಶದನ್ವಯ ೨೦೨೪ ಸೆಪ್ಟೆಂಬರ್ ೧೦ರ ಪೂರ್ವದಲ್ಲಿ ಇಂತಹ ನಿವೇಶನ ಮತ್ತು ಕಟ್ಟಡ ಹೊಂದಿರುವ ಮಾಲೀಕರು ನಿಯಮಾವಳಿ ಪ್ರಕಾರ ಹೆಸರು ದಾಖಲಿಸಿಕೊಂಡು ಬಿ ಖಾತಾ ಉತಾರ ಪಡೆದುಕೊಳ್ಳಬೇಕು ಎಂದರು. ನೋಂದಣಿ ಮಾಡಿಕೊಳ್ಳಲು ಯಾವುದೇ ಮಧ್ಯವರ್ತಿ ಅಥವಾ ಏಜೆಂಟರನ್ನು ಸಂಪರ್ಕಿಸದೆ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಕಾರ್ಯ ನಿರ್ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ ಮಾತನಾಡಿ, ಯೋಜನೆ ಕುರಿತಾಗಿ ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್ ಮಾತನಾಡಿದರು.

ಉಪಾಧ್ಯಕ್ಷೆ ಜ್ಯೋತಿ ಬಡಿಗೇರ, ಸ್ಥಾಯಿ ಸಮಿತಿ ಚೇರ್ಮನ್ ಮಹಾಂತೇಶ ತಳವಾರ, ಸದಸ್ಯರಾದ ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಆನಂದ ಗಂಧ, ರೇಖಾ ಚಿಕ್ಕೋಡಿ, ಫರೀದಾ ಮುಲ್ಲಾ, ರೇಣುಕಾ ಹಳಿಜೋಳ, ಸುರೇಖಾ ಗಳತಗಿಮಠ, ಭೀಮಶಿ ಗೋರಖನಾಥ, ರಾಜು ಮುನ್ನೋಳಿ, ಚಂದು ಮುತ್ನಾಳೆ ಇತರರಿದ್ದರು. ಆರ್.ಡಿ.ಭರಮನ್ನವರ ಸ್ವಾಗತಿಸಿದರು. ದೇವಾನಂದ ನವಲೆ ವಂದಿಸಿದರು.

Share This Article

ಬೇಸಿಗೆಯಲ್ಲಿ ಈ 5 ಪದಾರ್ಥಗಳೊಂದಿಗೆ ಅಪ್ಪಿ ತಪ್ಪಿಯೂ ಮೊಸರು ತಿನ್ನಬೇಡಿ! | Yogurt

Yogurt : ಬೇಸಿಗೆಯಲ್ಲಿ, ಮೊಸರು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆದರೆ, ಮೊಸರಿನೊಂದಿಗೆ ಅಥವಾ ಅದರ…

ಬಸ್ಸು ಅಥವಾ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಬರೊದೇಕೆ ಗೊತ್ತೆ!; ತಡೆಗಟ್ಟೊದೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Vomit

Vomit : ಕೆಲವರಿಗೆ ಬಸ್​ ಮತ್ತು ಕಾರಿನಲ್ಲಿ ಪ್ರಯಾಣ ಮಾಬೇಕಾದರೆ ಸಲ್ಪ ದೂರು ಪ್ರಯಾಣಿಸಿದ ಬಳಿಕ…

ನಕಲಿ vs ಅಸಲಿ ಕಲ್ಲಂಗಡಿ ಹಣ್ಣು: ಪತ್ತೆಹಚ್ಚುವುದು ಹೇಗೆ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…