ಸೌಲಭ್ಯ ಪಡೆಯಲು ದಾಖಲೆ ನೀಡುವುದೇ ತೊಡಕು

ದಾಬಸ್​ಪೇಟೆ: ಕೃಷಿ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ತೆಗೆದುಕೊಳ್ಳಲು ದಾಖಲೆ ನೀಡುವುದೇ ದೊಡ್ಡ ತೊಡಕೆಂದು ದೇವಗಾನಹಳ್ಳಿ ರೈತ ನಂಜೇಗೌಡ ದೂರಿದರೆ, ಎಮ್ಮೆಗೆ ಕಾಯಿಲೆ ಇದೆ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಂಗೆನಪುರದ ರೈತ ಹನುಮಂತೇಗೌಡ ದೂರಿದರು.

ಸೋಂಪುರ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಏರ್ಪಡಿಸಿದ್ದ ಕೃಷಿ ಅಭಿಯಾನ ಸಮಾರೋಪದಲ್ಲಿ ಹಲವು ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಎಲ್ಲ ಇಲಾಖೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಬಿತ್ತನೆ ಬೀಜ ಪಡೆಯಬೇಕಾದರೆ ಆಧಾರ್ ಪಡೆಯುವುದನ್ನು ನಿಲ್ಲಿಸಬೇಕು. ರೈತರಿಗೆ ಸರ್ಕಾರದ ಸವಲತ್ತು ಸಮರ್ಪಕವಾಗಿ ತಲುಪಿಸಬೇಕು ಎಂದರು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗಪ್ಪ ಮಾತನಾಡಿ, ಪಶು ಭಾಗ್ಯ, ನರೇಗಾ ಯೋಜನೆಯಲ್ಲಿ ಕೊಟ್ಟಿಗೆ ನಿರ್ವಣಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ರೇಷ್ಮೆ ಇಲಾಖೆ ಸಹಾಯಕ ಅಧಿಕಾರಿ ಎಸ್.ಶ್ರೀನಿವಾಸಮೂರ್ತಿ ಮಾತನಾಡಿ, ರೇಷ್ಮೆ ಬೆಳೆ ಬೆಳೆಯಲು ಸಬ್ಸಿಡಿ ನೀಡಲಾಗುವುದು. ಹುಳು ಸಾಕಣೆ ಮನೆ, ಹನಿ ನಿರಾವರಿ ಪರಿಕರಗಳಿಗೆ ಸಬ್ಸಿಡಿ ನೀಡಲಾಗುತ್ತದೆ ಎಂದರು.

ಮೀನುಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಎಸ್. ಅಮೃತಾ ಮಾತನಾಡಿ, ಕೆರೆಗಳಲ್ಲಿ ಸಾಕಿದ ಮೀನುಗಳಿಗೆ ಹಿಡಿಯಲು ಬಲೆ ಮತ್ತು ಬೋಟ್ ನೀಡಲಾಗುವುದು. ಕೃಷಿ ಹೊಂಡದಲ್ಲಿ ಮೀನುಗಾರಿಕೆ ಕೈಗೊಂಡರೆ ಬಲೆ ನೀಡಲಾಗುವುದು ಎಂದರು .

ಜಿಪಂ ಮಾಜಿ ಸದಸ್ಯ ಹೊನ್ನಸಿದ್ದಯ್ಯ, ಜಿಪಂ ಸದಸ್ಯ ನಂಜುಂಡಯ್ಯ, ತಾಪಂ ಸದಸ್ಯೆ ಸಿದ್ದಗಂಗಮ್ಮ, ಪ್ರಗತಿ ಪರ ರೈತ ಬಿ.ವಿ. ಶ್ರೀನಿವಾಸ್, ಎಪಿಎಂಸಿ ಸದಸ್ಯ ಗಂಗಣ್ಣ, ನರಸೀಪುರ ಗ್ರಾಪಂ ಅಧ್ಯಕ್ಷ ಗ.ನಾಗರಾಜು, ಹೊನ್ನೇನಹಳ್ಳಿ ಗ್ರಾಪಂ ಉಪಾಧ್ಯಕ್ಷ ನಾರಾಯಣ್, ತಾಲೂಕು ಕೃಷಿಕ ಸಮಾಜದ ಖಜಾಂಚಿ ಗುರುರಾಜ್, ತಾಲೂಕು ಸಾವಯವ ಸಮಾಜದ ಅಧ್ಯಕ್ಷ ಸಿದ್ದಪ್ಪ. ಸಂಪನ್ಮೂಲ ಅಧಿಕಾರಿ ನಾಗಣ್ಣ, ಕೃಷಿ ಇಲಾಖೆ ಸಹಾಯಕ ಅಧಿಕಾರಿ ಕೆ.ಟಿ.ಕುಮಾರ್ ಇದ್ದರು.

Leave a Reply

Your email address will not be published. Required fields are marked *