ಸೌಲಭ್ಯ ಪಡೆದು ಇಳುವರಿ ಹೆಚ್ಚಿಸಿ


ಸೇಡಂ: ಇನ್ನೇನು ಮುಂಗಾರು ಬಿತ್ತನೆ ಆರಂಭವಾಗಲಿದ್ದು, ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ಬೆಳೆ ಬೆಳೆಯುವಲ್ಲಿ ಮುತುವರ್ಜಿವಹಿಸಬೇಕು ಎಂದು ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಅಭಿಯಾನದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಇದೀಗ ಅಲ್ಪಾವಧಿ ಬೆಳೆಗೆ ಹೆಚ್ಚಿನ ಬೆಲೆ ಸಿಗುತ್ತಿದೆ. ಆದರೆ ಹೈದರಾಬಾದ್ ಕನರ್ಾಟಕ ಭಾಗದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ದೀಘರ್ಾವಧಿ ಬೆಳೆಯಾಗಿದ್ದರೂ ಸಮರ್ಪಕ ಬೆಲೆ ಸಿಗುತ್ತಿಲ್ಲ ಎನ್ನುವ ನೋವು ನಮ್ಮ ರೈತರಲ್ಲಿದೆ. ಇದನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಸಕರ್ಾರದಿಂದ ಸಿಗುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ತಾಲೂಕಿನ ರೈತರು ಕೇಂದ್ರ ಸಕರ್ಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಇದರ ಕುರಿತು ಅಧಿಕಾರಿಗಳು ಸಹ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಕೃಷಿ ಪರಿಕರಗಳ ಬಳಕೆ ಹೆಚ್ಚಾದಾಗ ಹೆಚ್ಚಿನ ಇಳುವರಿ ತೆಗೆಯಲು ಸಾಧ್ಯ. ಹೀಗಾಗಿ ರೈತರು ಅಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ತಿಳಿಸಿದರು. ತಾಪಂ ಅಧ್ಯಕ್ಷೆ ಇಂದ್ರಾದೇವಿ ಬಸವರಾಜಪ್ಪಗೌಡ, ಸದಸ್ಯ ಮಲ್ಲಿಕಾಜರ್ುನರೆಡ್ಡಿ ಕೋಲಕುಂದಾ, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಗಣಪತರಾವ ಚಿಮ್ಮನಚೋಡಕರ್, ಜಿಲ್ಲಾ ಪ್ರತಿನಿಧಿ ಸಿದ್ದು ಕೊದಂಪುರ, ಪುರಸಭೆ ಮಾಜಿ ಅಧ್ಯಕ್ಷ ಯಕ್ಬಲ್ಖಾನ್, ಪ್ರಮುಖರಾದ ಲಕ್ಷ್ಮೀನಾರಾಯಣ ಚಿಮ್ಮನಚೋಡಕರ್, ಓಂಪ್ರಕಾಶ ಪಾಟೀಲ್, ರೇವಣಸಿದ್ದ ಬಿರಾದಾರ ಇತರರಿದ್ದರು.


ಕುಮಾರ ಪಡೆ ಜಿಲ್ಲಾಧ್ಯಕ್ಷರಾಗಿ ಕೇರಿ ನೇಮಕ
ಸೇಡಂ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕೈ ಬಲಪಡಿಸುವುದಕ್ಕಾಗಿ ಹುಟ್ಟಿಕೊಂಡಿರುವ ಕುಮಾರ ಪಡೆಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾಗಿ ಪ್ರಶಾಂತ ಕೇರಿ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಡಿ.ಸಿ. ಗೌರಿಶಂಕರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *