Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಸೌಲಭ್ಯ ಕಲ್ಪಿಸಲು ನಿರಾಸಕ್ತಿ

Saturday, 14.07.2018, 2:06 PM       No Comments

ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ

ಅನುಕಂಪದ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿಯಮಾನುಸಾರ ಸರ್ಕಾರದ ಅನುದಾನದಲ್ಲಿ ಶೇ.5 ಹಣವನ್ನು ಅಂಗವಿಕಲರ ಕಲ್ಯಾಣಕ್ಕೆ ಖರ್ಚು ಮಾಡಲು ಆಸಕ್ತಿ ತೋರುತ್ತಿಲ್ಲ.

ಅಂಗವಿಕಲರ ದಿನಾಚರಣೆ, ಆರ್ಥಿಕ ವರ್ಷ ಮುಕ್ತಾಯದ ಮಾರ್ಚ್ ತಿಂಗಳಾಂತ್ಯದಲ್ಲಿ ಆತುರಾತುರವಾಗಿ ಅನುದಾನ ಬಳಸುವಂತಹುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದು, ಸವಲತ್ತುಗಳಿಂದ ವಂಚಿತರಾಗುತ್ತಿರುವ ಅಂಗವಿಕಲರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಪಂ, ತಾಪಂ, ಜಿಪಂ, ವಿವಿಧ ಇಲಾಖೆ, ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಕಡ್ಡಾಯವಾಗಿ ಶೇ.3 ಅನುದಾನವನ್ನು ಅಂಗವಿಕಲರಿಗೆ ಮೀಸಲಿಡಬೇಕೆಂಬ ನಿಯಮವಿದೆ. ಇದನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಶೇ.5ಕ್ಕೆ ಏರಿಸಿದೆ. ಈ ಹಣದಲ್ಲಿ ಅಂಗವಿಕಲರ ಸ್ವಯಂ ಉದ್ಯೋಗಕ್ಕೆ ನೆರವು, ವಿದ್ಯಾರ್ಥಿ ವೇತನ, ಆರೋಗ್ಯ ಶಿಬಿರ, ಕೌಶಲ ತರಬೇತಿ ಮತ್ತು ಅಗತ್ಯ ಸಲಕರಣೆಗಳ ವಿತರಣೆ ಸೇರಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಅಂಗವಿಕಲರ ಅನುದಾನವನ್ನು ಇತರೆ ಕೆಲಸಗಳಿಗೆ ಬಳಕೆ, ಖರ್ಚು ಮಾಡದೆ ಸರ್ಕಾರಕ್ಕೆ ವಾಪಸ್ ಕಳುಹಿಸುವುದು, ಕಾಟಾಚಾರಕ್ಕೆ ಕೆಲವರಿಗೆ ಮಾತ್ರ ಸವಲತ್ತು ವಿತರಣೆಯಂತಹ ನಿರ್ಲಕ್ಷ್ಯ ಧೋರಣೆ ಕಂಡುಬರುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 39,979 ಅಂಗವಿಕಲರಿದ್ದಾರೆ. ಇದರಲ್ಲಿ ಶೇ.50 ಮಂದಿಗೂ ಸವಲತ್ತು ಸಿಗುತ್ತಿಲ್ಲ. ಪ್ರಭಾವಿಗಳ ನಡುವೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗದೆ ಅನೇಕರು ಎಲ್ಲ ರೀತಿಯಲ್ಲೂ ಹಿಂದುಳಿದು ತೊಂದರೆ ಅನುಭವಿಸುತ್ತಿದ್ದಾರೆ.

ಸಿಕ್ಕಿಲ್ಲ ಅನುಮೋದನೆ: ಶಿಡ್ಲಘಟ್ಟ ತಾಪಂನಲ್ಲಿ ಮೀಸಲಿಟ್ಟ ಅನುದಾನವನ್ನು ಜನಪ್ರತಿನಿಧಿಗಳ ಹಸ್ತಕ್ಷೇಪದ ನೆಪದಲ್ಲಿ ಈಗಾಗಲೇ ತಯಾರಿಸಿರುವ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಂಡಿಲ್ಲ. ಮೂರು ವರ್ಷಗಳಿಂದಲೂ ಫಲಾನುಭವಿಗಳ ಪಟ್ಟಿ ಹಾಗೆ ಉಳಿಸಿಕೊಳ್ಳಲಾಗಿದೆ. ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಈಗಾಗಲೇ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಲಾಗಿದೆ. ಇಲ್ಲಿ ಇನ್ನೂ ಒಬ್ಬರಿಗೂ ಸಿಕ್ಕಿಲ್ಲ ಎಂಬುದು ಅಂಗವಿಕಲರ ಆರೋಪ.

ಕಳೆದ ಎರಡು ವರ್ಷಗಳಿಂದ ಸಂಸದ ಎಂ.ವೀರಪ್ಪ ಮೊಯ್ಲಿಗೆ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿನ ಶೇ.3 ಅನುದಾನ ಖರ್ಚಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಸಂಸದರಿಗೆ ಕಾರ್ಯಕ್ರಮ ಕೈಗೊಳ್ಳಲು ಬಿಡುವಿಲ್ಲದಿರುವುದು ಸವಲತ್ತು ವಿತರಣೆಗೆ ತೊಡಕಾಗಿದೆ ಎಂದು ಕರ್ನಾಟಕ ವಿಕಲಚೇತನರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.

ಅನುದಾನ ಬಳಕೆ ಅರಿವಿಲ್ಲ: ಬಹುತೇಕ ಅಧಿಕಾರಿಗಳಿಗೆ ಅಂಗವಿಕಲರಿಗೆ ಮೀಸಲಿಟ್ಟ ಅನುದಾನ ಸದ್ಬಳಕೆ ಕುರಿತು ಅರಿವೇ ಇಲ್ಲ. ಇನ್ನೂ ಅನೇಕರು ಶೇ.5ರ ಬದಲಿಗೆ ಶೇ.3ರ ಲೆಕ್ಕಾಚಾರದಲ್ಲಿದ್ದಾರೆ. ಇದರಿಂದ ಮೇಲಧಿಕಾರಿಗಳಿಗೆ ಕಳುಹಿಸಿರುವ ಲೋಪದೋಷಗಳ ಕ್ರಿಯಾ ಯೋಜನೆ ವರದಿಯು ತಿದ್ದುಪಡಿಗೆ ಹಲವು ಬಾರಿ ವಾಪಸ್ ಬರುತ್ತಿದ್ದು, ಅನವಶ್ಯಕ ಕಾಲಹರಣವಾಗುತ್ತಿದೆ. ಇದಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆ ಎರಡ್ಮೂರು ಬಾರಿ ಪತ್ರ ಬರೆದು ವಿವಿಧ ಇಲಾಖೆಗಳಿಗೆ ಅಗತ್ಯ ಸಲಹೆ ನೀಡಿದೆ. ಇದರ ನಡುವೆ ಕಳೆದ ಸಾಲಿನಲ್ಲಿ ಕಾರ್ಯಾಗಾರ ಕೈಗೊಂಡು ಅರಿವು ಮೂಡಿಸಿದೆ. ಆದರೂ ಈ ಸಾಲಿನ ಕ್ರಿಯಾಯೋಜನೆ ರೂಪಿಸಿರುವ ಕುರಿತು ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ಅಂಗವಿಕಲರ ಅನುದಾನ ಸದ್ಬಳಕೆಗೆ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಕಾರ್ಯಾಗಾರ ಕೈಗೊಂಡು ಅರಿವು ಮೂಡಿಸಲಾಗಿದೆ. ಆದರೂ ಸ್ಪಂದನೆ ಸಿಕ್ಕಿಲ್ಲ. ಇದರ ಕುರಿತು ಮತ್ತೆ ಗಮನ ಸೆಳೆಯಲಾಗುವುದು.

| ಜ್ಯೋತಿ, ಅಂಗವಿಕಲರ ಕಲ್ಯಾಣಾಧಿಕಾರಿ, ಚಿಕ್ಕಬಳ್ಳಾಪುರ

 

ಅಂಗವಿಕಲರ ಕುರಿತು ಹೆಚ್ಚಿನ ಅನುಕಂಪ ತೋರಿಸುವುದು ಬೇಡ. ಅಧಿಕಾರಿಗಳು ನಿಯಮಾನುಸಾರ ಸವಲತ್ತು ಒದಗಿಸಿದರೆ ಸಾಕು ಅನುಕೂಲವಾಗುತ್ತದೆ. ಪ್ರತಿಯೊಂದಕ್ಕೂ ಹೋರಾಟ ಮಾಡಿ ಪಡೆದುಕೊಳ್ಳಬೇಕಾಗಿದೆ.

| ಕೆ.ಜಿ. ಸುಬ್ರಮಣಿ, ಕರ್ನಾಟಕ ವಿಕಲಚೇತನರ ಸಂಘಟನೆ, ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *

Back To Top