ಸಿನಿಮಾ

ಸೋಲಿನ ಆಘಾತದಿಂದ ಆಸ್ಪತ್ರೆಸೇರಿದ ರಾಜುಗೌಡ ಬೆಂಬಲಿಗ

ಕೊಡೇಕಲ್: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜುಗೌಡ) ಸೋಲಿನ ವಿಷಯ ಕೇಳಿ ಜಿಪಂ ಮಾಜಿ ಉಪಾಧ್ಯಕ್ಷ ಜೋಗುಂಡಬಾವಿ ಗ್ರಾಮದ ಗದ್ದೆಪ್ಪ ಪೂಜಾರಿ ತೀವ್ರ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನರಸಿಂಹ ನಾಯಕ ಕಟ್ಟಾಭಿಮಾನಿ ಆಗಿರುವ ಗದ್ದೆಪ್ಪ ಶನಿವಾರ ಹೊರಬಿದ್ದ ಫಲಿತಾಂಶದಲ್ಲಿ ಸೋಲಿನ ವಿಷಯ ಕೇಳಿ ಆಘಾತಕ್ಕೊಳಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೋಮಾ ಸ್ಥಿತಿಗೆ ಜಾರಿದ್ದಾರೆ. ವಿಷಯ ತಿಳಿಯುತ್ತಲೇ ರಾಜುಗೌಡ ಆಸ್ಪತ್ರೆಗೆ ತೆರಳಿ ಪೂಜಾರಿ ಆರೋಗ್ಯ ವಿಚಾರಿಸಿ ಕುಟುಂಬದವರಲ್ಲಿ ಧೈರ್ಯ ತುಂಬಿದ್ದಾರೆ.

Latest Posts

ಲೈಫ್‌ಸ್ಟೈಲ್