ಸೋಲಿಗರ ಮಹಾತಾಯಿ ಜಲ್ಲೆ ಜಡೆ ಮಾದಮ್ಮ ನಿಧನ

ಚಾಮರಾಜನಗರ: ಯಳಂದೂರು ತಾಲೂಕು ಬಿಳಿಗಿರಿರಂಗನ ಬೆಟ್ಟದ ಸೂಲಗಿತ್ತಿ, ಆದಿವಾಸಿ ಮಹಿಳೆ ಜಲ್ಲೆ ಜಡೆ ಮಾದಮ್ಮ(60) ನಿಧನರಾಗಿದ್ದಾರೆ.

ಯರಕನಗದ್ದೆ ಪೋಡಿನ ವಾಸಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಹಾಗೂ ಕಾಡು ಮಕ್ಕಳ ಮಹಾತಾಯಿ ಎಂದೇ ಹೆಸರುವಾಸಿಯಾಗಿದ್ದ ಈಕೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಬಿಳಿಗಿರಿರಂಗನ ಬೆಟ್ಟದ ವ್ಯಾಪ್ತಿಯ ಗಿರಿಜನರ ಪೋಡುಗಳಲ್ಲಿ 2 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದರು. ಇವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಪತಿ ಹಿಂದೆಯೇ ನಿಧನರಾಗಿದ್ದಾರೆ.

ಇಂದು ಯರಕನಗದ್ದೆ ಪೋಡಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

 

Leave a Reply

Your email address will not be published. Required fields are marked *