ಸೋಲಾರ್ ಉಪಕರಣ ಬಳಕೆ ಕುರಿತ ಕಾರ್ಯಾಗಾರಕ್ಕೆ ಚಾಲನೆ.

ಮೈಸೂರು : ಕರ್ನಾಟಕ ನವೀಕಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ , ಮೈತ್ರಿ ಮಹಿಳಾ ಕೂಟ ಸೇರಿದಂತೆ ಇನ್ನಿತರ ಸಂಘಗಳ ಸಹಯೋಗದಲ್ಲಿ ಮಹಿಳೆಯರಿಗೆ ವಿದ್ಯುತ್ ಉಳಿತಾಯ, ಸೋಲಾರ್ ಬಳಕೆ ಹಾಗೂ ಮನೆಗಳಲ್ಲಿ ವ್ಯವಸ್ಥಿತವಾಗಿ ಅಡಿಗೆ ಅನಿಲ ಬಳಸುವ ವಿಧಾನದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರಕ್ಕೆ ಸೋಲಾರ್ ದೀಪ ಬೆಳಗಿಸುವ ಮೂಲಕ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮೊದಲು ಸೌದೆ ಒಲೆಗಳಿಗಾಗಿ ಮರಕಡಿಯಲಾಗುತಿತ್ತು. ಈಗ ಗ್ಯಾಸ್, ಸೋಲಾರ್ ಒಲೆಗಳು ಬಂದ ನಂತರ ಸೌದೆಗಾಗಿ ಮರ ಕಡಿಯುವುದು ಕಡಿಮೆಯಾಗಿದೆ ಎಂದರು.
ಸೋಲಾರ್ ಉಪಕರಣಗಳನ್ನು ಪ್ರದರ್ಶಿಸಲಾಯಿತು.
ಕೆಆರ್ ಇಡಿಎಲ್ ಇಂಜಿನಿಯರ್ ದಿನೇಶ ಕುಮಾರ್, ಸಾಮಾಜಿಕ ಕಾರ್ಯಕರ್ತೆ ಸುಧಾಮಣಿ ಇತರರು ಇದ್ದರು.