ಸೋಮನಾಥ ಜಾತ್ರೆ ಯಶಸ್ವಿಗೆ ಸೂಚನೆ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
13ರಿಂದ 23ರವರೆಗೆ ಶ್ರೀ ಸೋಮನಾಥ ದೇವರ ಜಾತ್ರೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ದೇವಸ್ಥಾನದ ಅಧ್ಯಕ್ಷ, ತಹಸೀಲ್ದಾರ್ ಸುರೇಶ ಅಂಕಲಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 10 ದಿನ ಜಾತ್ರೆ ವೈಭವದಿಂದ ಜರುಗಲಿದ್ದು, ಮುಂಜಾಗ್ರತಾ ಕ್ರಮವಾಗಿ ರಥ ಎಳೆಯುವ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷರಿಗೆ ತಹಸೀಲ್ದಾರ್ ತಿಳಿಸಿದರು.
ಮುಖಂಡ ರಾಮಯ್ಯ ಶೆಟ್ಟಿ ಮಾತನಾಡಿ, ದೇವಾಲಯ ಆವರಣದಲ್ಲಿರುವ ಜಮೀನು ಇನಾಮುದಾಗಿದ್ದು, ಜಮೀನು ವಾರಸುದಾರರು ಯಾವುದೇ ಕಾರಣಕ್ಕೂ ಭೂಮಿಯನ್ನು ಮನೆ ನಿರ್ಮಾಣಕ್ಕೆ ಅಥವಾ ಬಾಡಿಗೆಗೆ ಅಂಗಡಿಗಳನ್ನು ನೀಡಬಾರದು. ಜಮೀನನ್ನು ಸರ್ವೇ ಮಾಡಿಸಬೇಕು. 2ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ರಥಕ್ಕೆ ಮನೆ ನಿಮರ್ಿಸಬೇಕು ಹಾಗೂ ರಥಕ್ಕೆ ಬಣ್ಣ ಹಚ್ಚಬೇಕು ಎಂದು ಮನವಿ ಮಾಡಿದರು.
ದೇವರು ಗಂಗಾಸ್ಥಳಕ್ಕೆ ಹೋಗುವ ಮಾರ್ಗ ಸ್ವಚ್ಛಗೊಳಿಸಬೇಕು, ಪಟ್ಟಣಕ್ಕೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಬೇಕು ಎಂದು ಮುಖಂಡರಾದ ಚಂದ್ರು ವಜ್ಜಲ್, ಮುದ್ದಣ್ಣ ಅಮ್ಮಾಪುರ ಒತ್ತಾಯಿಸಿದರು.
ಜಾನುವಾರು ಜಾತ್ರೆಯಲ್ಲಿ ಉತ್ತಮ ತಳಿಯ ಜಾನುವಾರುಗಳಿಗೆ ಎಪಿಎಂಸಿಯಿಂದ ಬಹುಮಾನ ನೀಡಬೇಕು ಎಂದು ಪುರಸಭೆ ಸದಸ್ಯ ಭೀಮಣ್ಣಗೌಡ ಮನವಿ ಮಾಡಿದರು. ದೇವಸ್ಥಾನದ 17ಲಕ್ಷ ರೂ. ಬ್ಯಾಂಕ್ನಲ್ಲಿ ಉಳಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ, ಎಪಿಎಂಸಿ ಸದಸ್ಯ ಬಸವರಾಜ ಆರೇಶಂಕರ, ಮಾಜಿ ಅಧ್ಯಕ್ಷ ರಾಜು ಹವಾಲ್ದಾರ್, ಆರೋಗ್ಯ ನೌಕರ ಶಿವಪ್ಪ, ಪೊಲೀಸ್ ಅಧಿಕಾರಿ ಭೀಮಾಶಂಕರ ಠಾಣಾಗುಂದಿ, ಪರಮಣ್ಣ ಪೂಜಾರಿ ಹಿರೇಮನಿ, ಅಯ್ಯಣ್ಣ ಪೂಜಾರಿ, ರಾಮಯ್ಯ ಶೆಟ್ಟಿ, ಸೋಮನಿಂಗಪ್ಪ ದೇಸಾಯಿ, ಗುಂಡಪ್ಪ ಸೊಲ್ಲಾಪುರ, ಶರಣಪ್ಪ ಅಕ್ಕಿ, ಪರಮಣ್ಣ ಪೂಜಾರಿ, ನಿಂಗಯ್ಯ ಬೂದಗುಂಪಿ, ಭೀಮಣ್ಣಗೌಡ ಹಳ್ಳಿ, ಚಂದ್ರಶೇಖರ ವಜ್ಜಲ್, ಮುದ್ದಣ್ಣ ಅಮ್ಮಾಪುರ, ಪರಮಣ್ಣ ವಡಿಕೇರಿ, ಆದಯ್ಯ ಗುರಿಕಾರ, ಬಸಣ್ಣ ಗವಾಯಿ, ಗುಡದಪ್ಪ ಬಿಳೇಬಾವಿ, ತಿಪ್ಪಣ್ಣ ಜಂಪಾ, ಶಾಂತು ತಾಳೀಕೋಟೆ, ಮೌನೇಶ ಗುರಿಕಾರ ಇತರರಿದ್ದರು.

ಹರಾಜು ಪ್ರಕ್ರಿಯೆ: ಮಮ್ಮಸಾಬ್ ಕೊಡೇಕಲ್ ಅವರು 85 ಸಾವಿರ ರೂ.ಗೆ ಗುಡಾರ ಹರಾಜು ತಮ್ಮದಾಗಿಸಿಕೊಂಡರು. ಲಿಂಗಸೂಗೂರ ಮತ್ತು ಹುಣಸಗಿ ತೆಂಗಿನಕಾಯಿ ವ್ಯಾಪಾರಸ್ಥರು ತೆಂಗಿನಕಾಯಿಗೆ ದರ ಹೊಂದಾಣಿಕೆಯಿಂದಾಗಿ ತೆಂಗಿನಕಾಯಿ ಹರಾಜು ಪ್ರಕ್ರಿಯೆ ನಡೆಯಲಿಲ್ಲ.