ಸೋಲಿಗೆ ಇವಿಎಂ ನೆಪ ಹೇಳಬೇಡಿ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಹೀಗಾಗಿ ಪ್ರತಿಸ್ಪರ್ಧಿಗಳು ಸೋಲಿಗೆ ಇವಿಎಂ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಈಗಲೇ ಕಾರಣಗಳನ್ನು ಕಂಡುಕೊಳ್ಳುವುದು ಒಳ್ಳೆಯದು ಎಂದು ವಿಭಾಗೀಯ ಪ್ರಭಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

ಒಳ್ಳೆಯ ಅಂತರದಿಂದ ರಾಘವೇಂದ್ರ ಗೆಲುವು ನಿ್ಚಶಿತವಾಗಿದೆ. ಸಾಕಷ್ಟು ನಿರೀಕ್ಷೆಗಳೊಂದಿಗೆ ಮತದಾರರು ಬಿಜೆಪಿಗೆ ಮತ ನೀಡಿದ್ದು, ಅವರ ಭರವಸೆ ಉಳಿಸಿಕೊಳ್ಳುವ ಹೊಣೆಗಾರಿಕೆ ಈಗ ಹೆಚ್ಚಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಲೋಕಸಭಾ ಉಪಚá-ನಾವಣೆಯಲ್ಲಿ ಆ್ಕಯೆಾದ ಬಳಿಕ ಕೇವಲ ಆರು ತಿಂಗಳ ಅವಧಿಯಲ್ಲಿ ರಾಘವೇಂದ್ರ ಮಾಡಿದ ಉತ್ತಮ ಕೆಲಸ ಜನರನ್ನು ಮá-ಟ್ಟಿತ್ತು. ಜನ ಶತಾಬ್ಧಿ ರೈಲು, ಇಎಸ್​ಐ ಆಸ್ಪತ್ರೆ, ತá-ಮರಿ ಸೇತá-ವೆಗೆ ಟೆಂಡರ್ ಸೇರಿ ಹಲವು ಕೆಲಸಗಳನ್ನು ಮಾಡಿದ್ದು ಗಮನ ಸೆಳೆದಿತ್ತು ಎಂದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ಛಲದಿಂದ ಮೈತ್ರಿ ಪಕ್ಷಗಳು ಒಂದಾಗಿ ಕೆಲಸ ಮಾಡಿವೆ. ಎಲ್ಲಾ ಮಹಾನ್ ನಾಯಕರು ಶಿವಮೊಗ್ಗವನ್ನೇ ಕೇಂದ್ರೀಕರಿಸಿದ್ದರು. ದೇವೇಗೌಡ, ಕá-ಮಾರಸ್ವಾಮಿ, ಡಿಕೆಶಿ ಸಹೋದರರು, ಮಂತ್ರಿಗಳು, ಬಂಗಾರದ ಅಂಗಡಿ ಮಾಲೀಕರು, ಸರ್ವಶಕ್ತಿ ಹಾಗೂ ಸಾಮಗ್ರಿಯೊಂದಿಗೆ ಬಂದು ಚá-ನಾವಣೆ ಎದá-ರಿಸಿದ್ದಾರೆ. ಆದರೆ ವಿಪಕ್ಷ ನಾಯಕರು, ಅದರಲ್ಲೂ ಮಾಜಿ ಮá-ಖ್ಯಮಂತ್ರಿ ಏಕವಚನದಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಲಘá-ವಾಗಿ ನಿಂದಿಸಿದ್ದರಿಂದ ಇನ್ನೂ ಹೆಚ್ಚಿನ ಮತಗಳು ಬಿಜೆಪಿಗೆ ಬರá-ವಂತಾಯಿತು ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಕಾರ್ಯದರ್ಶಿ ಮಧುಸೂದನ್, ಶಾಂತಾಬಾಯಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಸಿ.ಬಸವರಾಜಪ್ಪ, ಪ್ರಮುಖರಾದ ಮಹೇಂದ್ರನಾಥ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.