ಸೋರುತಿವೆ ಸರ್ಕಾರಿ ಕಚೇರಿ!

Latest News

ಅಲೆ ತಡೆಗೋಡೆ ಕಾಮಗಾರಿಗೆ ವಿರೋಧ

ಕಾರವಾರ: ತಖೋಲ್ ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗಾಗಿ ಟ್ಯಾಗೋರ್ ಕಡಲ ತೀರದಿಂದ ಅಲೆ ತಡೆಗೋಡೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಮೀನುಗಾರರು ವಿರೋಧ...

ಪ್ರೇಮಲೋಕ 2ರಲ್ಲಿ ಕ್ರೇಜಿಸ್ಟಾರ್ ಸನ್ಸ್!

ಬೆಂಗಳೂರು: 1987ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ‘ಪ್ರೇಮಲೋಕ’ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಆ ಸಿನಿಮಾ ನಿರ್ವಿುಸಿದ ದಾಖಲೆ ಒಂದೆರಡಲ್ಲ....

ರಫೇಲ್ ರಗಳೆ ಅಂತ್ಯ

ರಫೇಲ್ ಪ್ರಕರಣದಲ್ಲಿ ಸರ್ಕಾರಕ್ಕೆ ನೀಡಿದ್ದ ಕ್ಲೀನ್​ಚಿಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ...

ಅನನ್ಯ ಸಾಂಸ್ಕೃತಿಕ ಪ್ರಜ್ಞೆಯ ಕನಕದಾಸ

ಕನಕದಾಸರು 16ನೇ ಶತಮಾನದ ಕರ್ನಾಟಕದಲ್ಲಿ ಆಗಿ ಹೋದ ಭಕ್ತಕವಿ. ಕೀರ್ತನೆ, ನಳಚರಿತೆ, ರಾಮಧಾನ್ಯ ಚರಿತ್ರೆ, ಮೋಹನ ತರಂಗಿಣಿ, ಹರಿಭಕ್ತಿ ಸಾರ ಹಾಗೂ ಅನೇಕ...

ಒಳ್ಳೆಯದನ್ನು ಮಾಡುವುದೇ ಧರ್ಮದ ಸರ್ವಸ್ವ

ಪಶ್ಚಿಮದ ಭೋಗಭೂಮಿಯಲ್ಲಿ ಮೈಕೊಡವಿ ನಿಂತ ಈ ಪೂರ್ವರಾಷ್ಟ್ರದ ತ್ಯಾಗಮೂರ್ತಿ ಅವರುಗಳಿಗೆ ತ್ಯಾಗ-ಯೋಗವನ್ನು ಬೋಧಿಸಿದರು. ಅಲ್ಲದೆ ಅಲ್ಲಿ ತನ್ನ ಮಾತೃಭೂಮಿಗಾಗಿ ವೈಯಕ್ತಿಕ ಜೀವನವನ್ನೇ ಸಾರ್ಥಕವಾಗಿ...

ಲಕ್ಷ್ಮೇಶ್ವರ: ತಾಲೂಕಿನ ತಹಸೀಲ್ದಾರ್ ಕಚೇರಿ ಮತ್ತು ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದ ಕಟ್ಟಡಗಳು ಮಳೆಯಿಂದ ಸೋರುತ್ತಿವೆ. ಇದರಿಂದಾಗಿ ಸಿಬ್ಬಂದಿ ಆತಂಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ 1981ರಲ್ಲಿ ನಿರ್ವಿುಸಿದ ರೈತ ಭವನದ ಕಟ್ಟಡದಲ್ಲಿ ತಹಸೀಲ್ದಾರ್ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಇದು 2018ರ ಜನವರಿ 26ರಂದು ಉದ್ಘಾಟನೆಯಾಗಿ ಕಾರ್ಯಾರಂಭಗೊಳ್ಳುವ ವೇಳೆ ಎಪಿಎಂಸಿಯವರೇ ಲಕ್ಷಾಂತರ ರೂ. ವ್ಯಯಿಸಿ ದುರಸ್ತಿ ಮಾಡಿಸಿಕೊಟ್ಟಿದ್ದರು. ಅದೀಗ ನಿರಂತರ ಮಳೆಗೆ ಸೋರುತ್ತಿದೆ. ಕಂಪ್ಯೂಟರ್, ಪ್ರಿಂಟರ್, ದಾಖಲೆಗಳನ್ನು ರಕ್ಷಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್ ವೈರ್​ಗಳಲ್ಲಿನ ನೀರಿನಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಆತಂಕವಿದೆ. ಆದರೆ, ಈ ಕಟ್ಟಡ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ.

‘ಒಂದೂವರೆ ವರ್ಷದಿಂದ ಕಟ್ಟಡಕ್ಕೆ ಬಾಡಿಗೆ ಕೊಟ್ಟಿಲ್ಲ. ದುರಸ್ತಿಯನ್ನಾದರೂ ಮಾಡಿಕೊಳ್ಳಲಿ ಎಂದು ಎಪಿಎಂಸಿ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಆದರೆ, ಅದಕ್ಕೂ ಮುಂದಾಗಿಲ್ಲ. ಎಪಿಎಂಸಿ ಕಟ್ಟಡ ಸಂರಕ್ಷಿಸಲು ಆಡಳಿತ ಮಂಡಳಿಯವರೊಂದಿಗೆ ರ್ಚಚಿಸಿ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಎನ್.ಎ. ಲಕ್ಕುಂಡಿ.

ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡ ಶಿಥಿಲ: ಪಟ್ಟಣದ ಭಾನು ಮಾರ್ಕೆಟ್​ನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡ (ಗ್ರಾಮ ಚಾವಡಿ) ಸಂಪೂರ್ಣ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ. ಅದರಲ್ಲೇ ಹಿರೇಬಣ, ಪೇಠಬಣ, ದೇಸಾಯಿಬಣ, ಬಸ್ತಿಬಣ, ಹುಲಗೇರಿ ಬಣಗಳ ವ್ಯಾಪ್ತಿಯ 5 ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ಸಿಬ್ಬಂದಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಗ್ರಾಮ ಚಾವಡಿ 75 ವರ್ಷ ಹಳೆಯದಾಗಿದೆ. ಪಟ್ಟಣದ ಕೇಂದ್ರ ಭಾಗದಲ್ಲಿರುವ ಈ ಕಟ್ಟಡವನ್ನು ಪುರಸಭೆಯವರು ಜಿಲ್ಲಾಡಳಿತದಿಂದ ಲೀಸ್ ಪಡೆದು, ಗ್ರಾಮ ಲೆಕ್ಕಾಧಿಕಾರಿ ಕಟ್ಟಡದೊಂದಿಗೆ ಮಾರುಕಟ್ಟೆಗೆ ಮಳಿಗೆ ನಿರ್ವಿುಸಿ ಪುರಸಭೆಗೆ ಆದಾಯ ತಂದುಕೊಳ್ಳಲು ಮಾಡಿರುವ ಠರಾವು ಧೂಳು ತಿನ್ನುತ್ತಿದೆ.

ತಹಸೀಲ್ದಾರ್ ಕಚೇರಿ ಎಪಿಎಂಸಿಗೆ ಸೇರಿದೆ. ಕಟ್ಟಡ ಸೋರುವುದನ್ನು ತಪ್ಪಿಸಬೇಕೆಂದು ಕೇಳಿಕೊಳ್ಳಲಾಗಿದೆ. ಶಿಥಿಲಗೊಂಡಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಟ್ಟಡ ನಿರ್ವಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ಸದ್ಯ ಸಿಬ್ಬಂದಿ ಕೊಠಡಿಯಲ್ಲಿಯೇ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗುವುದು.
| ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್

ಸೋರುತಿಹುದು ಮನೆಯ ಮಾಳಿಗೆ…

ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನಾದ್ಯಂತ 20 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮಣ್ಣಿನ ಮನೆಗಳು ಸೋರುತ್ತಿದ್ದು, ಕೆಲವು ಬಿದ್ದಿವೆ. ಬೆಳೆಗಳು ರೋಗಬಾಧೆಗೆ ಹಾಳಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಪಟ್ಟಣದ ಪೇಠಬಣದಲ್ಲಿ 2, ರಾಮಗೇರಿಯಲ್ಲಿ ಒಂದು ಮನೆ ಬಿದ್ದಿದೆ. ಲಕ್ಷ್ಮೇಶ್ವರ ಸೇರಿ ತಾಲೂಕಿನ ಯಳವತ್ತಿ, ಯತ್ನಳ್ಳಿ, ಮಾಗಡಿ, ಅಕ್ಕಿಗುಂದ, ಆದ್ರಳ್ಳಿ, ಬಡ್ನಿ, ಬಟ್ಟೂರ, ಸೂರಣಗಿ, ಹುಲ್ಲೂರ, ಬಾಲೆಹೊಸೂರ, ಕೊಕ್ಕರಗೊಂದಿ, ಬೂದಿಹಾಳ, ಶಿಗ್ಲಿ, ದೊಡ್ಡೂರ, ರಾಮಗೇರಿ, ಬಸಾಪುರ, ಅಡರಕಟ್ಟಿ, ಗೊಜನೂರ ಮೊದಲಾದೆಡೆ ಮಣ್ಣಿನ ಮನೆಗಳು ಸೋರುತ್ತಿವೆ. ಕೆಲವೆಡೆ ಬಿದ್ದಿವೆ. ಶಾಲಾ ಕಟ್ಟಡಗಳು, ಸರ್ಕಾರಿ ಕಚೇರಿಗಳು, ವ್ಯಾಪಾರಿ ಮಳಿಗೆಗಳು, ದೇವಸ್ಥಾನಗಳಲ್ಲಿ ನೀರು ಜಿನುಗುತ್ತಿದೆ. ಮನೆಗಳಲ್ಲಿನ ದವಸ-ಧಾನ್ಯ, ಬಟ್ಟೆ ಹಾಗೂ ಬಣವೆಗಳ ರಕ್ಷಣೆಗೆ ತಾಡಪತ್ರಿ ಮುಚ್ಚಲು ಜನರು ಹರಸಾಹಸ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಜನರು ಛತ್ರಿ, ರೇನ್​ಕೋಟ್, ಜರ್ಕಿನ್, ಸ್ವೆಟರ್, ಕ್ಯಾಪ್​ಗಳ ಮೊರೆ ಹೋಗಿದ್ದಾರೆ. ರಸ್ತೆಗಳಂತೂ ಕೊಳಚೆಯಂತಾಗಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿವೆ.

ಪಟ್ಟಣದ ಮಾರುಕಟ್ಟೆಯಲ್ಲಿ ಮೂರ್ನಾಲ್ಕು ದಿನಗಳಿಂದ ಪ್ಲಾಸ್ಟಿಕ್ ಹಾಳೆ, ತಾಡಪತ್ರಿಗಳ ಮಾರಾಟ ಜೋರಾಗಿ ನಡೆದಿದೆ. ವ್ಯಾಪಾರಸ್ಥರು ಅದೆಷ್ಟೇ ಪ್ಲಾಸ್ಟಿಕ್ ಹಾಳೆಗಳನ್ನು ತಂದರೂ ಸಾಕಾಗುತ್ತಿಲ್ಲ. ತಾಲೂಕಷ್ಟೇ ಅಲ್ಲದೆ, ನೆರೆಯ ಕುಂದಗೋಳ, ಶಿಗ್ಗಾಂವಿ, ಸವಣೂರ, ಶಿರಹಟ್ಟಿ ತಾಲೂಕಿನ ಜನರು ತಂಡೋಪತಂಡವಾಗಿ ತಾಡಪತ್ರಿ ಖರೀದಿಗೆ ಆಗಮಿಸುತ್ತಿದ್ದಾರೆ.

ತಹಸೀಲ್ದಾರ್​ರಿಂದ ಪರಿಶೀಲನೆ: ಪಟ್ಟಣದಲ್ಲಿ ಕುಸಿದ 3 ಮನೆಗಳನ್ನು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ ಪರಿಶೀಲಿಸಿದರು. ಬಳಿಕ ಪ್ರತಿಕ್ರಿಯಿಸಿದ ತಹಸೀಲ್ದಾರ್, ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಬೆಳೆ ಹಾನಿ ಪರಿಹಾರಕ್ಕಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಕೃಷಿ ಇಲಾಖೆ ಅಧಿಕಾರಿಗಳ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದರು.

- Advertisement -

Stay connected

278,469FansLike
563FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...