ಸೊನ್ನೆ ಬಡ್ಡಿ ದರದ ಸಾಲ ಸೌಲಭ್ಯ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬಜಾಜ್ ಫಿನ್ಸರ್ವ್​ ಕಂಪನಿಯಿಂದ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದೇ ಸೂರಿನಡಿ ಇಲೆಕ್ಟ್ರಾನಿಕ್ಸ್ ಗೂಡ್ಸ್, ಫರ್ನಿಚರ್ ಸೇರಿ ವಿವಿಧ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಕಲ್ಪಿಸುವ ಮೇಳ ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶರಣಬಸವಪ್ಪ ಅಪ್ಪ ಹೇಳಿದರು.

ಶರಣಬಸವೇಶ್ವರ ದೇವಸ್ಥಾನ ಜಾತ್ರಾ ಮೈದಾನದಲ್ಲಿ ಬಜಾಜ್ ಫಿನ್ಸರ್ವ್​ ಕಂಪನಿ ಆಯೋಜಿಸಿರುವ ಏಳು ದಿನದ ಗ್ರ್ಯಾಂಡ್ ಗುಲ್ಬರ್ಗ ಮೇಳಕ್ಕೆ ಸೋಮವಾರ ಸಂಜೆ ಚಾಲನೆ ನೀಡಿದ ಅವರು, ಸೊನ್ನೆ ಬಡ್ಡಿ ದರದಲ್ಲಿ ವಿವಿಧ ವಿದ್ಯುನ್ಮಾನ (ಇಲೆಕ್ಟ್ರಾನಿಕ್ಸ್) ಉತ್ಪನ್ನಗಳ ಮೇಲೆ ಸಾಲಸೌಲಭ್ಯ ಕಲ್ಪಿಸಲಾಗಿದೆ. ಸುಲಭ ಕಂತಿನಲ್ಲಿ ಸೊನ್ನೆ ಬಡ್ಡಿ ದರದಲ್ಲಿ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಕಲ್ಪಿಸಲಾಗಿದೆ. ಜನಸಾಮಾನ್ಯವರು ಈ ಮೇಳದ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಬೇಕು ಬೇಡಗಳನ್ನು ಕೊಂಡುಕೊಳ್ಳಬೇಕು ಎಂದು ಹೇಳಿದರು.

ಕಂಪನಿಯ ಕಲಬುರಗಿ ಶಾಖಾ ವ್ಯವಸ್ಥಾಪಕ ಸುಶಾಂತ ಜಾಧವ್ ಮಾತನಾಡಿ, ಬಜಾಜ್ ಕಂಪನಿಯಿಂದ ಇಎಂಐ ಫೆಸ್ಟಿವಲ್ ಉತ್ಸವ ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಆಯೋಜಿಸಲಾಗಿದೆ. 24 ಡೀಲರ್ಗಳು ಈ ಮೇಳದಲ್ಲಿ ಭಾಗವಹಿಸಲಿದ್ದು, ಇಲೆಕ್ಟ್ರಾನಿಕ್ಸ್ ಗೂಡ್ಸ್, ಫರ್ನಿಚರ್ ಸೇರಿ ಇಎಂಐ ಆಧಾರದ ಮೇಲೆ ನಾನಾ ಬಗೆಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಜ.27ರವರೆಗೆ ಮೇಳ ನಡೆಯಲಿದ್ದು, ಬೆಳಗ್ಗೆ 11ರಿಂದ ರಾತ್ರಿ 9ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ ಎಂದರು.

ಸಿಬಿಲ್ ಸ್ಕೋರ್ ಆಧರಿಸಿ ಲೋನ್ ಮಂಜೂರು ಮಾಡಲಾಗುವುದು. ಹಳೆಯ ಗ್ರಾಹಕರು ಈ ಮೊದಲು ತಮ್ಮ ಬಳಿ ಇರುವ ಕಂಪನಿಯ ಕಾರ್ಡ್​ ಬಳಕೆ ಮಾಡಬಹುದು. ಹೊಸಬರಿಗೂ ಕಾರ್ಡ್​ ನೀಡಲಾಗುವುದು. ಈ ಮೂಲಕ ಮಧ್ಯಮ ವರ್ಗ ತಮ್ಮ ಕನಸು ನನಸಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಲೆಕ್ಟ್ರಾನಿಕ್ಸ್, ಹೋಮ್ ಅಪ್ಲಾಯನ್ಸಸ್, ಪೀಠೋಪಕರಣ, ಲ್ಯಾಪ್ಟಾಪ್, ಮೊಬೈಲ್ಸ್, ವಾಟರ್ ಪ್ಯೂರಿಫೈಯರ್ ಸೇರಿ ಅನೇಕ ಉತ್ಪಾದನೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಈ ಮೇಳ ಅನುವು ಮಾಡಿಕೊಟ್ಟಿದೆ. ಪ್ರತಿಯೊಂದು ಪ್ರಾಡಕ್ಟ್ ಮೇಲೂ ಸರಳ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಂಪನಿಯ ಸಚಿನ್ ತೇಜಾ, ವಿಕ್ರಮ ಇತರರಿದ್ದರು.

ಕಲಬುರಗಿ ಬಜಾಜ್ ಫಿನ್ಸರ್ವ ಫೆಸ್ಟಿವಲ್ನಲ್ಲಿ 24 ಡೀಲರ್ಸ್ಗಳಿದ್ದು, 38 ಸಾವಿರ ಗ್ರಾಹಕರು ಕಂಪನಿ ಇಎಂಐ ಕಾರ್ಡ್​ ಹೊಂದಿದ್ದಾರೆ. 60 ಸಾವಿರ ಗ್ರಾಹಕರಿಗೆ ಇಎಂಐ ಕಾರ್ಡ ವಿತರಣೆ ಗುರಿ ಹೊಂದಲಾಗಿದೆ. ಪ್ರತಿ ಖರೀದಿಯಲ್ಲೂ ನಿಶ್ಚಿತ ಬಹುಮಾನವಿದೆ. ಒಂದೇ ವೇದಿಕೆಯಲ್ಲಿ ಹಲವು ಕಂಪನಿಗಳ ವಸ್ತುಗಳನ್ನು ಕೊಂಡುಕೊಳ್ಳುವ ಸದವಕಾಶವನ್ನು ಈ ಫೆಸ್ಟಿವಲ್ ಒದಗಿಸಿದೆ.
| ಶತ್ರುಘ್ನ, ಜೋನಲ್ ಮ್ಯಾನೇಜರ್, ಬಜಾಜ್