ಸೈರಾದಲ್ಲಿನ ಬಚ್ಚನ್ ಲುಕ್ ರಿಲೀಸ್

ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ಗುರುವಾರ (ಅ.11) 76ನೇ ವಸಂತಕ್ಕೆ ಕಾಲಿಟ್ಟರು. ಅವರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಇದೆಲ್ಲದರ ನಡುವೆ ಅವರಿಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಅದು ‘ಸೈರಾ ನರಸಿಂಹ ರೆಡ್ಡಿ’ ಚಿತ್ರತಂಡದ ಕಡೆಯಿಂದ. ನಟ ಚಿರಂಜೀವಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಅಮಿತಾಭ್ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಬರ್ತ್​ಡೇ ಪ್ರಯುಕ್ತ ಆ ಪಾತ್ರದ ಫಸ್ಟ್​ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಭಿನ್ನ ಗೆಟಪ್​ನಲ್ಲಿ ಪೋಸ್ ನೀಡಿರುವ ಅಮಿತಾಭ್ ಅವರನ್ನು ಕಂಡು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ. -ಏಜೆನ್ಸೀಸ್

ಮತ್ತೆ ಬಂತು ಗೂಸ್​ಬಂಪ್ಸ್

ಅರಿ ಸಂಡೇಲ್ ನಿರ್ದೇಶನದ ‘ಗೂಸ್​ಬಂಪ್ಸ್ 2: ಹಾಂಟೆಡ್ ಹಾಲ್ಲೊವನ್’ ಚಿತ್ರ ಈ ವಾರ (ಅ.12) ತೆರೆಗೆ ಬರುತ್ತಿದೆ. 2015ರಲ್ಲಿ ತೆರೆಕಂಡಿದ್ದ ‘ಗೂಸ್​ಬಂಪ್ಸ್’ ಚಿತ್ರದ ಸೀಕ್ವೆಲ್ ಇದಾಗಿದ್ದು, ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆರ್.ಎಲ್. ಸ್ಟೈನ್ ಅವರು ಬರೆದ ‘ಗೂಸ್​ಬಂಪ್ಸ್’ ಕಥೆ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ‘ಗೂಸ್​ಬಂಪ್ಸ್’ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಹಾಗಾಗಿ ಈ ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುವ ನಿರೀಕ್ಷೆ ಇದೆ. ಹಾರರ್ ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಡಾಮಿನಿಕ್ ಲೆವಿಸ್ ಸಂಗೀತ ಇರುವ ಈ ಚಿತ್ರದಲ್ಲಿ ವೆಂಡಿ ಮೆಕ್​ಲೆಂಡನ್, ಮ್ಯಾಡಿಸನ್ ಐಸೆಮನ್ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *