Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಸೈನಿಕನ ಪತ್ನಿ ಸೋನಲ್!

Friday, 10.08.2018, 3:04 AM       No Comments

ಶಿವರಾಜ್​ಕುಮಾರ್ ನಟನೆಯ ‘ಚೆಲುವೆ ನಿನ್ನ ನೋಡಲು’ ಚಿತ್ರ ಸೇರಿ, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದ ಸೋನಲ್ ಚೌಹಾಣ್ ‘ಪಲ್ಟನ್’ ಚಿತ್ರದ ಮೂಲಕ ಪ್ರೇಕ್ಷಕರೆದುರು ಬರುತ್ತಿದ್ದಾರೆ. ದಕ್ಷಿಣ ಭಾರತದಲ್ಲೇ ಹೆಚ್ಚು ಬಿಜಿಯಾಗಿದ್ದ ಅವರು ಈ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಮ್್ಯಾಕ್ ಮಾಡುತ್ತಿರುವ ಖುಷಿಯಲ್ಲಿದ್ದಾರೆ.

ಅಂದಹಾಗೆ, ‘ಪಲ್ಟನ್’ ದೇಶದ ಸೈನಿಕರ ಕುರಿತು ನಿರ್ವಣವಾದ ಚಿತ್ರ. ಜೆ.ಪಿ. ದತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಸೋನಲ್ ಸೈನಿಕನ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಕೇಳಿ ಬಂದಿದೆ. ಇನ್ನು ‘ಪಲ್ಟನ್’ನಲ್ಲಿ ಜಾಕಿ ಶ್ರಾಫ್, ಅರ್ಜುನ್ ರಾಮ್ಾಲ್, ಸೋನು ಸೂದ್ ಸೇರಿ ಅನೇಕರು ಪಾತ್ರವರ್ಗದಲ್ಲಿದ್ದಾರೆ. ‘ಚಿತ್ರದಲ್ಲಿ ನಮ್ಮ ದೇಶದ ಸೈನಿಕರ ಬಗ್ಗೆ ಹೇಳುತ್ತಿರುವುದಕ್ಕೆ ಖುಷಿ ಇದೆ. ಲಡಾಕ್ ಸೇರಿ ಭಾರತದ ಗಡಿ ಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಸಿದ್ದೇವೆ. ದೃಶ್ಯವೊಂದಕ್ಕಾಗಿ 300ಕ್ಕೂ ಅಧಿಕ ಭಾರತೀಯ ಸೈನಿಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆ ದೃಶ್ಯ ತುಂಬ ಭಿನ್ನವಾಗಿ ಮೂಡಿ ಬಂದಿದೆ’ ಎಂಬುದು ಅವರ ಮಾತು.

Leave a Reply

Your email address will not be published. Required fields are marked *

Back To Top