Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸೇವೆಯೇ ಪರಮಧರ್ಮ

Sunday, 04.12.2016, 2:00 AM       No Comments

ನಮ್ಮ ಜೀವನದ ಗುರಿ ‘ಸೇವೆ’ಯೇ ಆಗಬೇಕಲ್ಲದೆ, ‘ಯಶಸ್ಸು’ ಆಗಬಾರದು. ಪ್ರಾರ್ಥನಾರಹಿತ ಸೇವೆ ಸೇವೆಯಲ್ಲ. ಸೇವಾರಹಿತ ಪ್ರಾರ್ಥನೆ ಪ್ರಾರ್ಥನೆಯಲ್ಲ. ಹಣವೇ ನಮ್ಮ ಗುರಿಯಾಗಬಾರದು. ಹಣ ನೀಡುವ ಶಕ್ತಿಯಿಂದ ಸೇವೆ ಮಾಡುವುದು ನಮ್ಮ ಗುರಿಯಾಗಬೇಕು. ಹಾರ್ದಿಕ ಕೊಡುಗೆಯೇ ಪ್ರೀತಿಯ ಅಳತೆಗೋಲು.

ಬದುಕಿನಲ್ಲಿ ಇರುವಿಕೆಯ ವಲಯ ಹಾಗೂ ಬಯಕೆಯ ವಲಯಗಳಿವೆ. ಬಹುತೇಕ ಮಂದಿ ಬಯಕೆಯ ವಲಯದಲ್ಲೇ ಕಳೆದುಹೋಗುತ್ತಾರೆ. ಬಯಕೆಯ ವಲಯದಿಂದ ಬರುವುದಕ್ಕಿಂತ, ಇರುವಿಕೆಯ ವಲಯದಿಂದ ಬರುವುದು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಬಯಕೆಯ ವಲಯ ನಮ್ಮನ್ನು ಬಂಧಿಸುತ್ತದೆ. ನಾವು ಯಶಸ್ಸು ಗಳಿಸಲು ಬಿಡುಗಡೆಯನ್ನು ಪಡೆಯಲು ಯತ್ನಿಸಬೇಕು.

ಇರುವಿಕೆಯನ್ನು ಘಟನೆಗಳ ಸರಮಾಲೆಯೆಂದು ತಿಳಿದುಕೊಂಡರೆ ಅದು ಶಕ್ತಿಶಾಲಿಯಾಗಬಲ್ಲದು. ಬಹುತೇಕ ವಾಗಿ, ಜೀವನದ ಅನುಭವವೆಂಬುದು ಘಟನೆಗಳನ್ನು ನಾವು ಹೇಗೆ ವ್ಯಾಖ್ಯಾನಿಸುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ಈ ಘಟನೆಗಳಿಗೆ ಯಾಂತ್ರಿಕವಾಗಿ ಪ್ರತಿಕ್ರಿಯಿಸುವುದನ್ನು ಅರಿಯುವವರೆಗೆ ಜನರು ಬದಲಾಗಲು ಸಾಧ್ಯವಿಲ್ಲ.

ಆಫೀಸಿನಲ್ಲಿ ಬಾಸ್ ನಿಮ್ಮ ಮೇಲೆ ಕೋಪಗೊಂಡರೆ, ‘ಆತನಿಗೆ ನನ್ನನ್ನು ಕಂಡರಾಗುವುದಿಲ್ಲ’ ಎಂದು ತೀರ್ವನಿಸುತ್ತೀರಿ. ಗದರಿಸುವುದೇ ಒಂದು ವಿಷಯ, ಅದಕ್ಕೆ ಅರ್ಥ ಕಲ್ಪಿಸುವುದು ಇನ್ನೊಂದು ವಿಷಯ. ಗದರಿಸುವುದು ಆತನ ಆಂತರಿಕ ಒತ್ತಡದ ಅಭಿವ್ಯಕ್ತಿ ಯಾಗಿರಬಹುದು. ‘ಇದು ನನ್ನ ಮೇಲೆ ಆತ ಇಟ್ಟುಕೊಂಡಿರುವ ದ್ವೇಷ’ ಎಂಬುದಾಗಿ ತಿಳಿಯುವುದು ನೀವು ನಿಮ್ಮ ತೀರ್ವನಕ್ಕೆ ಬಂಧಿತರಾಗಿರುವುದರ ಲಕ್ಷಣ. ಅಂಥ ತೀರ್ವನಗಳು ನಿಮ್ಮ ಶಕ್ತಿ ಸೋರುವಂತೆ ಮಾಡಿ ನಿಮ್ಮ ಅಸ್ತಿತ್ವವನ್ನು ದುರ್ಬಲಗೊಳಿಸುತ್ತವೆ.

ವ್ಯಕ್ತಿಯು ಬಲಿಷ್ಠನಾಗಬೇಕಾದರೆ, ಆತ ತನ್ನ ಪ್ರತಿಕ್ರಿಯೆಗಳ ಬಗ್ಗೆ ಪ್ರಜ್ಞಾವಂತನಾಗಬೇಕು. ಆ ಕುರಿತು ಎಚ್ಚರವಿಲ್ಲದಿರುವುದು ಅನಾವಶ್ಯಕ ನರಳಾಟಕ್ಕೆ ಕಾರಣವಾಗುತ್ತದೆ. ಹೆಚ್ಚು ಪ್ರಜ್ಞಾವಂತರಾಗುವುದೆಂದರೆ, ‘ಘಟನೆಗಳನ್ನು ಬದಲಿಸಲು ಸಾಧ್ಯವಿಲ್ಲ, ಆದರೆ ಅವುಗಳ ಬಗ್ಗೆ ನಮ್ಮ ವ್ಯಾಖ್ಯಾನವನ್ನು ಬದಲಾಯಿಸಬಹುದು’ ಎಂದು ಅರಿಯುವುದು.

* ನಾವು ಯಾಂತ್ರಿಕ ಜೀವನಕ್ಕೆ ಅಂಟಿಕೊಂಡಿರುವೆವೋ ಅಥವಾ ಶಕ್ತಿಶಾಲಿಯಾದ, ಅಯಸ್ಕಾಂತೀಯ ಜೀವನದಲ್ಲಿ ತೊಡಗಿಸಿಕೊಂಡಿರುವೆವೋ?

ಯಾಂತ್ರಿಕ ಜೀವನದಲ್ಲಿ ಘಟನೆಗಳೇ ನಮ್ಮನ್ನು ನಿಯಂತ್ರಿಸುತ್ತವೆ. ಅಯಸ್ಕಾಂತೀಯ ಜೀವನದಲ್ಲಿ ಬದ್ಧತೆ ನಮಗೆ ದಾರಿ ತೋರುತ್ತದೆ. ಅಯಸ್ಕಾಂತೀಯ ಜೀವನದ ದಾರಿ ಕಂಡಾಗ ಜೀವನವು ಪರಸ್ಪರ ಅವಲಂಬಿತವಾಗಿರುವುದೆಂಬ ಸತ್ಯದ ಅರಿವಾಗುತ್ತದೆ. ಜೀವನ ಅವಲಂಬಿತವೂ ಅಲ್ಲ, ಸ್ವತಂತ್ರವೂ ಅಲ್ಲ. ಅದು ಅನ್ಯೋನ್ಯ ಆಶ್ರಯವಾಗಿರುತ್ತದೆ. ಆದ್ದರಿಂದ ನಮ್ಮ ಜೀವನ ಸೇವಾಕ್ಷೇತ್ರವಾಗಬೇಕು.

ಸೂರ್ಯ, ಚಂದ್ರ, ಪ್ರಾಣಿಗಳು, ಸಸ್ಯಗಳು- ಇವೆಲ್ಲವೂ ನಮ್ಮನ್ನು ಅನುಗ್ರಹಿಸುತ್ತಿವೆ. ಈ ಅನುಗ್ರಹದ ಮೂಲಗಳ ಸೇವೆಮಾಡುವುದು ನಮ್ಮ ದುಡಿಮೆಯ ಆದ್ಯ ಕರ್ತವ್ಯ. ದುಡಿಮೆಯಲ್ಲಿ ನಾವು ಗಳಿಸುವ ಯಶಸ್ಸು ಸೇವೆಯಲ್ಲಿ ಸಾರ್ಥಕತೆಯನ್ನು ಪಡೆಯಬೇಕು.

ಸಜ್ಜನಿಕೆ ಮತ್ತು ಸಂತೋಷ ಎಂಬೆರಡು ವಿಶಿಷ್ಟ ಅಂಶಗಳು ನಿಮ್ಮ ಜೀವನದ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸುವಂತಾಗಲಿ. ಆಗ ಅನ್ಯರನ್ನು ಸಂತುಷ್ಟರೂ, ಸಜ್ಜನರೂ ಆಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ನಿಮ್ಮ ಬದುಕು ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ, ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

(ಲೇಖಕರು ಅಂತಾರಾಷ್ಟ್ರೀಯ ಮ್ಯಾನೇಜ್ವೆುಂಟ್ ಗುರುಗಳು)

Leave a Reply

Your email address will not be published. Required fields are marked *

Back To Top