ಸೇತುವೆ ಕಾಮಗಾರಿಗಾಗಿ ನದಿಗೆ ಮಣ್ಣು ಬರಾವು

ಕುಮಟಾ: ತಾಲೂಕಿನ ಐಗಳಕುರ್ವೆ ಸೇತುವೆ ಕಾಮಗಾರಿಗಾಗಿ ಅಘನಾಶಿನಿ ನದಿಗೆ ಅಡ್ಡಲಾಗಿ ಮಣ್ಣು ತುಂಬಿ ನೀರು ಹರಿಯುವುದನ್ನು ತಡೆದಿರುವುದನ್ನು ವಿರೋಧಿಸಿ ಮಿರ್ಜಾನ – ತಾರಿಬಾಗಿಲ ಭಾಗದ ಅಂಬಿಗ ಸಮುದಾಯದವರು ಶನಿವಾರ ನಾಡಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೊಡ್ಕಣಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಐಗಳಕುರ್ವೆ ದ್ವೀಪ ಗ್ರಾಮಕ್ಕೆ ಅಘನಾಶಿನಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದೆ. ಇದಕ್ಕಾಗಿ ನದಿಯಲ್ಲಿ ಅಡ್ಡಲಾಗಿ ಭಾರಿ ಪ್ರಮಾಣದಲ್ಲಿ ಮಣ್ಣು, ಕಲ್ಲು ಸುರಿದು ನೀರಿನ ಹರಿವನ್ನು ಬಂದ್ ಮಾಡಲಾಗಿದೆ. ಮಿರ್ಜಾನ ಭಾಗದಲ್ಲಿ 200 ಕ್ಕೂ ಹೆಚ್ಚು ಅಂಬಿಗ ಸಮುದಾಯದ ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದು, ಹೊಳೆ ಬಂದ್ ಆಗಿದ್ದರಿಂದ ಅಂಬಿಗರ ವೃತ್ತಿಗೆ ಬರೆ ಎಳೆದಂತಾಗಿದೆ.

ನದಿಗೆ ಅಡ್ಡಲಾಗಿ ಮಣ್ಣು ಸುರಿದು ಮಾರ್ಗವನ್ನೇ ಬಂದ್ ಮಾಡಿದ್ದರಿಂದ ದೋಣಿಗಳನ್ನು ಕೋಡ್ಕಣಿ ತೀರದಲ್ಲೇ ಇಡಬೇಕು ಮತ್ತು ಐದಾರು ಕಿಮೀ ಸುತ್ತುಬಳಸಿ ಓಡಾಡಬೇಕಾಗಿದೆ. ಮಣ್ಣು ಸುರಿದಿದ್ದರಿಂದ ಕೆಲವೆಡೆ ತೀವ್ರ ಸೆಳೆತ ಸೃಷ್ಟಿಯಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವ ಕೈದೋಣಿ, ಪಾತಿ ದೋಣಿಯವರು ಅಪಾಯ ಎದುರಿಸುತ್ತಿದ್ದಾರೆ. ಕೂಡಲೇ ಸುರಿದ ಮಣ್ಣನ್ನು ತೆರವುಗೊಳಿಸಿ ನದಿಯಲ್ಲಿ ಸರಾಗವಾಗಿ ದೋಣಿ ಓಡಾಡಲು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಪುನಃ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗುತ್ತದೆ ಎಂದು ರಾಮಚಂದ್ರ ಅಂಬಿಗ, ಬಾಲಕೃಷ್ಣ ಅಂಬಿಗ, ನಾರಾಯಣ ಅಂಬಿಗ, ಮಂಜುನಾಥ ಅಂಬಿಗ, ಗೋಪಾಲ ಅಂಬಿಗ, ಸುಮಂತ ಅಂಬಿಗ, ವಿಷ್ಣು ಅಂಬಿಗ, ಉಲ್ಲಾಸ ಅಂಬಿಗ, ಗಣೇಶ ಅಂಬಿಗ, ವೆಂಕಟೇಶ ದಾಸು ಅಂಬಿಗ, ಮಂಜುನಾಥ ಉದ್ದಂಡ ಅಂಬಿಗ, ಮಾಸ್ತಪ್ಪ ಉದ್ದಂಡ ಅಂಬಿಗ, ಶಿವಪ್ಪ ಮಾಸ್ತಿ ಅಂಬಿಗ, ವಿಷ್ಣು ಅಂಬಿಗ, ಗೋಪಾಲ ಗಣಪತಿ ಅಂಬಿಗ ಇನ್ನಿತರರು ಎಚ್ಚರಿಸಿದರು. ಸ್ಥಳಕ್ಕೆ ಉಪವಿಭಾಗಾಧಿಕಾರಿ ಬರಬೇಕೆಂದು ಪಟ್ಟುಹಿಡಿದರು.

ಆದರೆ ಸ್ಥಳಕ್ಕೆ ಆಗಮಿಸಿದ ಸಿಪಿಐ ಸಂತೋಷ್ ಶೆಟ್ಟಿ ಪ್ರತಿಭಟನಾಕಾರರೊಂದಿಗೆ ರ್ಚಚಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ಮಧ್ಯಾಹ್ನ 4 ಗಂಟೆಗೆ ಗುತ್ತಿಗೆದಾರರು, ಸ್ಥಳೀಯರು ಹಾಗೂ ಪ್ರತಿಭಟನಾಕಾರರ ಸಮಕ್ಷಮ ಸಭೆ ನಡೆಸಿ ಇತ್ಯರ್ಥಗೊಳಿಸುತ್ತೇವೆ ಎಂದರು. ಆದರೆ, ಸಭೆಯ ಸಮಯದಲ್ಲಿ ಬದಲಾವಣೆ ನಡೆದು ಉಪವಿಭಾಗಾಧಿಕಾರಿಗಳ ಸಮಕ್ಷಮ ಭಾನುವಾರ ಬೆಳಗ್ಗೆ ಗುತ್ತಿಗೆದಾರರನ್ನು ಕರೆಸಿ ಸಭೆ ನಡೆಸುವುದಾಗಿ ತಿಳಿಸಿದರು.

ಡಿಸಿ ಹಾಗೂ ಎಸಿ ಅವರ ಸೂಚನೆಯ ಮೇರೆಗೆ ತಹಸೀಲ್ದಾರ್ ಅವರು ಕೆಆರ್​ಡಿಸಿಎಲ್​ಗೆ ಪತ್ರ ಬರೆದು ಐಗಳಕುರ್ವೆ ಸೇತುವೆ ಕಾಮಗಾರಿಯನ್ನು ಏ.22, 23,24ರಂದು ಹಾಗೂ ಮುಂದಿನ ಆದೇಶ ನೀಡುವವರೆಗೆ ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ತಿಳಿಸಿದ್ದರು. ಆದರೆ, ಮತದಾನ ಮುಗಿದ ಬೆನ್ನಲ್ಲೇ ಸೇತುವೆ ಕಾಮಗಾರಿ ಪುನಃ ಆರಂಭಿಸಲಾಗಿದೆ. ಯಾವ ತಾಂತ್ರಿಕ ಸಲಹೆಯ ಮೇರೆಗೆ ಹೊಳೆಯಲ್ಲಿ ಮಣ್ಣು ಸುರಿದು ಅಣೆಕಟ್ಟು ಕಟ್ಟಿದಂತೆ ಮಾಡಿ ಸೇತುವೆ ನಿರ್ವಿುಸಲಾಗುತ್ತಿದೆ. ಸೇತುವೆಯನ್ನು ಹೀಗೆ ನಿರ್ವಿುಸುತ್ತಾರೆಯೇ?, ಇಷ್ಟೊಂದು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದಕ್ಕೆ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹಿಂಜರಿಕೆ ಯಾಕೆ? | ಗಣೇಶ ಅಂಬಿಗ ಮಿರ್ಜಾನ ಗ್ರಾಪಂ ಸದಸ್ಯ

Leave a Reply

Your email address will not be published. Required fields are marked *