ಸೇಡಿನ ಗುರಿಯಲ್ಲಿ ರಾಜಸ್ಥಾನ: ಗೆಲುವಿನ ಒತ್ತಡದಲ್ಲಿ ಪಂಜಾಬ್

ಮೊಹಾಲಿ: ಸತತ ಎರಡು ಪಂದ್ಯಗಳ ಸೋಲಿನೊಂದಿಗೆ ಲಯ ಕಳೆದುಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಲಯಕ್ಕೆ ಮರಳಿರುವ ರಾಜಸ್ಥಾನ ರಾಯಲ್ಸ್ ತಂಡ ಮಂಗಳವಾರ ಮುಖಾಮುಖಿಯಾಗಲಿದೆ.

ತಲಾ 4 ಗೆಲುವು, ಸೋಲುಗಳಿಂದ ಅಸ್ಥಿರ ಫಾಮರ್್​ನಲ್ಲಿರುವ ಪಂಜಾಬ್ ತವರಿನಲ್ಲಿ ಲಯಕ್ಕೆ ಮರಳಿ ಪ್ಲೇ ಆಫ್ ಹಾದಿಯನ್ನು ಬಲಪಡಿಸುವ ಗುರಿಯಲ್ಲಿದೆ.

ಕೇವಲ ಎರಡು ಪಂದ್ಯವನ್ನಷ್ಟೆ ಗೆದ್ದಿರುವ ರಾಜಸ್ಥಾನ ರಾಯಲ್ಸ್ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಹೋರಾಡಲಿದೆ. ಅಲ್ಲದೆ ತನ್ನ ಮೊದಲ ಪಂದ್ಯದಲ್ಲಿ ತವರಿನಲ್ಲಿ ಪಂಜಾಬ್ ಎದುರು ಕಂಡಿದ್ದ 14ರನ್ ಸೋಲಿಗೆ ಸೇಡು ತೀರಿಸುವ ಗುರಿಯಲ್ಲಿದೆ.