ಹಾಸನ: ಜಿಲ್ಲೆಯ ಹಾಸ್ಯ ಕಲಾವಿದ ಮಡೆನೂರು ಮನು ಅಭಿನಯದ ಕೇದಾರ್‌ನಾಥ್ ಕುರಿಫಾರಂ ಚಲನಚಿತ್ರ ಇದೇ ತಿಂಗಳ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಶ್ರೀನಿವಾಸ್ ಅಲಿಯಾಸ್ ಸೀನು ಸಾಗರ್ ತಿಳಿಸಿದರು.
ಇದು ಕಾಮಿಡಿ ಪ್ರಧಾನ ಚಿತ್ರವಾಗಿದ್ದು, ತಲೆಗೆ ಹುಳ ಬಿಡುವ ಯಾವುದೇ ಸನ್ನಿವೇಶ ಚಿತ್ರದಲ್ಲಿ ಇಲ್ಲ. ನಮ್ಮ ಚಿತ್ರದಲ್ಲಿ ಹಿರಿಯ ಕಲಾವಿದರಾದ ಟೆನ್ನಿಸ್ ಕೃಷ್ಣ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ. ಅವರು ಗಂಭೀರ ಹಾಗೂ ಸೆಂಟಿಮೆಂಟ್ ಫಾದರ್ ಆಗಿ ಕಾಣಿಸಿಕೊಳ್ಳುವ ಮೂಲಕ ತಂದೆ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿನಿಮಾದಲ್ಲಿ ತಲಾ ಒಂದು ಹಾಡು, ಒಂದು ಫೈಟ್ ಇದೆ. ಸಿನಿಮಾಕ್ಕೆ ಇದೇ ಟೈಟಲ್ ಇಟ್ಟಿದ್ದೇಕೆ ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ನಾಡಿನ ಎಲ್ಲ ಪ್ರೇಕ್ಷಕರು ತಪ್ಪದೇ ಚಿತ್ರ ಮಂದಿರಕ್ಕೆ ಬಂದು ವೀಕ್ಷಣೆ ಮಾಡಬೇಕು. 100 ರೂ. ಕೊಟ್ಟು ಬಂದವರಿಗೆ ಎಂದೂ ಮೋಸ ಆಗುವುದಿಲ್ಲ ಎಂದರು.
ನಾಯಕ ಮನು ಮಾತನಾಡಿ, ಇದು ನನಗೆ ಹೊಂದುವ ಕತೆ, ಪಾತ್ರ ತುಸು ವಿಭಿನ್ನವಾಗಿದೆ. ಶೇ.80 ರಷ್ಟು ಕಾಮಿಡಿ ಇದ್ರೆ ಉಳಿದ ಶೇ.20 ಭಾಗದಲ್ಲಿ ನಾವು ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಹಾಸನ ಸೇರಿ ರಾಜ್ಯದ 130 ರಿಂದ 150 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಹಿರಿಯ ಕಲಾವಿದ ಟೆನ್ನಿಸ್ ಕೃಷ್ಣ ಮಾತನಾಡಿ, ನಾನು ಈವರೆಗಿನ ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರ ಮಾಡಿದ್ದೇನೆ. ಈ ಚಿತ್ರದ ಪಾತ್ರ ವಿಭಿನ್ನವಾಗಿದೆ ಎಂದರು. ಹಿಂದೆ ನಾನು ಹಲವು ದಿಗ್ಗಜ ಕಲಾವಿದರ ಜೊತೆ ಅಭಿನಯ ಮಾಡಿದ್ದೇನೆ. ನಾನು ದೂರ ಕುಳಿತರೂ ಅವರು ಪಕ್ಕದಲ್ಲಿ ಕರೆದು ಕೂರಿಸಿಕೊಳ್ಳುತ್ತಿದ್ದರು. ವಿಶ್ವಾಸ, ಬಾಂಧವ್ಯ ಚೆನ್ನಾಗಿತ್ತು. ಕುಟುಂಬದ ರೀತಿ ಇದ್ದವು. ಆದರೆ ಈಗಿನ ವಾತಾವರಣ ಬೇರೆ. ಅವರಾಯಿತು, ಅವರ ಕೆಲಸ ಆಯಿತು ಎಂಬಂತೆ ಇದ್ದು ಬಿಡುತ್ತಾರೆ ಎಂದು ಬೇಸರ ಹೊರ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ನಾಗರಾಜ್, ನಾಯಕಿ ಶಿವಾನಿ, ಹರಿಣಿ, ಸಿದ್ದು ಮಂಡ್ಯ ಇದ್ದರು.
ಸೆ.27 ರಂದು ಕೇದಾರ್‌ನಾಥ್ ಕುರಿಫಾರಂ ಚಲನಚಿತ್ರ ಬಿಡುಗಡೆ
You Might Also Like
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!
ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…
ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information
ಬೆಂಗಳೂರು: ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…