ಸೆಲೆಬ್ರಿಟಿಗಳದ್ದೇ ಈ ಬಾರಿ ಬಿಗ್​​ಬಾಸ್​

ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ‘ಬಿಗ್​ಬಾಸ್’ ರಿಯಾಲಿಟಿ ಶೋ ಈವರೆಗೆ 6 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. 7ನೇ ಸೀಸನ್​ಗೆ ಕಲರ್ಸ್ ಕನ್ನಡ ವಾಹಿನಿ ತಯಾರಿ ಮಾಡಿಕೊಳ್ಳುತ್ತಿದ್ದು, ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಕಳೆದ ಬಾರಿ ಸೆಲೆಬ್ರಿಟಿಗಳ ಜತೆ ಜನಸಾಮಾನ್ಯರು ಕೂಡ ‘ಬಿಗ್​ಬಾಸ್’ ಮನೆ ಪ್ರವೇಶಿಸಿದ್ದರು. ಆದರೆ ಈ ವರ್ಷ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ! ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳು ಜತೆಯಾಗಿ ಭಾಗವಹಿಸಿದ್ದ ಎಪಿಸೋಡ್​ಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತಂತೆ. ಸಿನಿಮಾ, ಕಿರುತೆರೆ ಹಾಗೂ ರಾಜಕೀಯ ಕ್ಷೇತ್ರದಿಂದ ಬಂದ ವ್ಯಕ್ತಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಲು ವೀಕ್ಷಕರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ ಕೇವಲ ಸೆಲೆಬ್ರಿಟಿಗಳೇ ಪರಸ್ಪರ ಪೈಪೋಟಿ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ವಾಹಿನಿ ಬಂದಿದೆ. ಅಂತಿಮವಾಗಿ ಆಯ್ಕೆಯಾಗುವ 15 ಮಂದಿ ಸೆಲೆಬ್ರಿಟಿಗಳು ಯಾರು ಎಂಬ ಕಾತರ ‘ಬಿಗ್​ಬಾಸ್’ ವೀಕ್ಷಕರ ಮನದಲ್ಲಿ ಮೂಡಿದೆ.

ಎಂದಿನಂತೆ 7ನೇ ಸೀಸನ್​ನಲ್ಲೂ ‘ಕಿಚ್ಚ’ ಸುದೀಪ್ ನಿರೂಪಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರೋಮೋ ಶೂಟಿಂಗ್​ಗೆ ಈ ಮೊದಲೇ ಪ್ಲಾ್ಯನ್ ಸಿದ್ಧಗೊಂಡಿತ್ತು. ಈ ಬಾರಿಯ ವಿಶೇಷಗಳನ್ನು ವಿವರಿಸುವ ಪ್ರೋಮೋ ಚಿತ್ರೀಕರಣದಲ್ಲಿ ಸೆ.11ರಂದು ಸುದೀಪ್ ಪಾಲ್ಗೊಳ್ಳಲಿದ್ದಾರೆ. ಸೆ.13ರಂದು ಪ್ರೋಮೋ ಬಿತ್ತರವಾಗಲಿದೆಯಂತೆ. ಪ್ರತಿ ಸೀಸನ್​ನಲ್ಲೂ ಭಾಗವಹಿಸಿದ ಸ್ಪರ್ಧಿಗಳು ಬಿಗ್​ಬಾಸ್ ಬಳಿಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಕೆಲವರು ಚಿತ್ರರಂಗಕ್ಕೂ ಕಾಲಿಟ್ಟು ಗಮನ ಸೆಳೆದಿದ್ದಾರೆ. ಈ ಬಾರಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬ ಕೌತುಕ ಮನೆಮಾಡಿದ್ದು, ಅ.20ರಂದು ‘ಬಿಗ್​ಬಾಸ್ 7’ ಪ್ರಸಾರ ಆರಂಭಿಸಲಿದೆ.

One Reply to “ಸೆಲೆಬ್ರಿಟಿಗಳದ್ದೇ ಈ ಬಾರಿ ಬಿಗ್​​ಬಾಸ್​”

Leave a Reply

Your email address will not be published. Required fields are marked *