Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸೆರೇನಾ-ವೀನಸ್ ಫೈನಲ್ ಫೈಟ್

Friday, 27.01.2017, 3:56 AM       No Comments

ಮೆಲ್ಬೋರ್ನ್: ಹಾಲಿ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಹಳೇ ಹುಲಿಗಳ ಗತವೈಭವ ಮರುಕಳಿಸಿದೆ. ಉಪಾಂತ್ಯ ಹೋರಾಟದಲ್ಲಿ ದಿಟ್ಟ ಗೆಲುವಿನೊಂದಿಗೆ ಮುನ್ನಡೆದಿರುವ ಅಮೆರಿಕ ಸಹೋದರಿಯರಾದ ಸೆರೇನಾ ವಿಲಿಯಮ್್ಸ ಹಾಗೂ ವೀನಸ್ ವಿಲಿಯಮ್್ಸ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಮುಖಾಮುಖಿಯಾಗಲಿದ್ದಾರೆ. ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಏಳು ವರ್ಷಗಳ ನಂತರ ಮೆಲ್ಬೋರ್ನ್​ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ವಿಲಿಯಮ್್ಸ ಸಹೋದರಿಯರು ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಎಂಟು ವರ್ಷಗಳ ನಂತರ ಹಾಗೂ ಆಸ್ಟ್ರೇಲಿಯನ್ ಓಪನ್​ನಲ್ಲಿ 14 ವರ್ಷಗಳ ಬಳಿಕ ಪ್ರಶಸ್ತಿ ಸೆಣಸಾಟ ನಡೆಸಲಿದ್ದಾರೆ. ಮೆಲ್ಬೋರ್ನ್ ಪಾರ್ಕ್​ನ

ರಾಡ್ ಲೆವರ್ ಅರೆನಾ ದಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್​ನಲ್ಲಿ 36 ವರ್ಷದ ವೀನಸ್ 6-7, 6-2, 6-3 ಸೆಟ್​ಗಳಿಂದ ಸುಮಾರು ಎರಡೂವರೆ ಗಂಟೆಗಳ ಸುದೀರ್ಘ ಹೋರಾಟದಲ್ಲಿ ದೇಶಬಾಂಧವೆ ಕೊಕೊ ವ್ಯಾಂಡ್​ವೇಘ್​ರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು. ವಿಶ್ವ ನಂ.17 ವೀನಸ್ ಮೊದಲ ಸೆಟ್​ನಲ್ಲಿ ಮುಖಭಂಗ ಎದುರಿಸಿದರೂ ಬಳಿಕ ಗರಿಷ್ಠ ಮ್ಯಾಚ್ ಪಾಯಿಂಟ್​ಗಳನ್ನು ಉಳಿಸಿದರಲ್ಲದೆ, ಎದುರಾಳಿ ಆಟಗಾರ್ತಿ 51 ಅನಿರ್ಬಂಧಿತ ತಪ್ಪುಗಳನ್ನು ಎಸಗಿದ್ದರ ಲಾಭ ಪಡೆದರು. ಈ ಮೂಲಕ 7 ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿ ವಿಜೇತೆ ವೀನಸ್ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲಲು ಇನ್ನೊಂದು ಹೆಜ್ಜೆ ಬಾಕಿಯಿದೆ. ವೀನಸ್ 8 ವರ್ಷಗಳ ನಂತರ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶಿಸಿದ್ದು, 2009ರ ವಿಂಬಲ್ಡನ್​ನಲ್ಲಿ ಕೊನೇ ಸಲ ಫೈನಲ್ ಆಡಿದ್ದರು. -ಪಿಟಿಐ/ಏಜೆನ್ಸೀಸ್

ಫೈನಲ್​ನಲ್ಲಿ ಸೆರೇನಾ ಎದುರಾಗಲಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಶನಿವಾರದ ಸೆಣಸಾಟದಲ್ಲಿ ಆಕೆ ವಿರುದ್ಧ ಆಡುವುದು ನನ್ನ ಕನಸಾಗಿತ್ತು.

| ವೀನಸ್ ವಿಲಿಯಮ್್ಸ

 

ಸೆರೇನಾಗೆ ಸಾಟಿಯಾಗದ ಲುಸಿಕ್ ಬಾರೋನಿ

ಪ್ರಶಸ್ತಿ ಫೇವರಿಟ್ ಸೆರೇನಾ ವಿಲಿಯಮ್ಸ್​ಗೆ ಉಪಾಂತ್ಯ ಹೋರಾಟದಲ್ಲಿ, ನಿನ್ನೆಮೊನ್ನೆಯವರೆಗೆ ಅನಾಮಿಕರೆನಿಸಿದ್ದ ಲುಸಿಕ್ ಬಾರೋನಿ ಸವಾಲೇ ಆಗಲಿಲ್ಲ. ಕೇವಲ 50 ನಿಮಿಷಗಳ ಹೋರಾಟದಲ್ಲಿ ವಿಶ್ವ ನಂ.2 ಸೆರೇನಾ 6-2, 6-1ರಿಂದ ಮಿರ್ಜಾನ ಲುಸಿಕ್ ಬಾರೋನಿಯನ್ನು ಸುಲಭವಾಗಿ ಮಣಿಸಿದರು. ಇದರಿಂದ ಮೊದಲ ಬಾರಿಗೆ ಗ್ರಾಂಡ್ ಸ್ಲಾಂ ಫೈನಲ್​ಗೇರುವ 34 ವರ್ಷದ ಬಾರೋನಿಯ ಆಸೆ ಭಗ್ನಗೊಂಡಿತು. 35 ವರ್ಷದ ಸೆರೇನಾ ಮುಕ್ತ ಟೆನಿಸ್ ಯುಗದಲ್ಲಿ ದಾಖಲೆಯ 23ನೇ ಗ್ರಾಂಡ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಸನಿಹ ತಲುಪಿದ್ದಾರೆ. ಸೆರೇನಾ ಟೂರ್ನಿ ಇತಿಹಾಸದಲ್ಲಿ 8ನೇ ಬಾರಿ ಫೈನಲ್​ಗೆ ಲಗ್ಗೆಯಿಟ್ಟಿದ್ದು, ಒಟ್ಟಾರೆ 29ನೇ ಗ್ರಾಂಡ್ ಸ್ಲಾಂ ಫೈನಲ್ ಆಗಿದೆ.

14 ವರ್ಷಗಳ ನಂತರ ಸೋದರಿಯರ ಮುಖಾಮುಖಿ!

ವಿಲಿಯಮ್್ಸ ಸಹೋದರಿಯರು ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ 14 ವರ್ಷಗಳ ನಂತರ ಫೈನಲ್​ನಲ್ಲಿ ಎದುರಾಗುತ್ತಿದ್ದಾರೆ. 2003ರ ಪ್ರಶಸ್ತಿ ಫೈಟ್​ನಲ್ಲಿ ಸೆರೇನಾ ಜಯಿಸಿದ್ದರು. 2009ರಲ್ಲಿ ಮುಖಾಮುಖಿಯಾಗಿದ್ದ ಕೊನೇ ಗ್ರಾಂಡ್ ಸ್ಲಾಂ ಫೈನಲ್ ವಿಂಬಲ್ಡನ್​ನಲ್ಲೂ ಸೆರೇನಾ ಗೆದ್ದಿದ್ದರು. 2008ರ ವಿಂಬಲ್ಡನ್​ನಲ್ಲಿ ಕೊನೇ ಬಾರಿ ಚಾಂಪಿಯನ್ ಆದ ಬಳಿಕ ತಂಗಿಯನ್ನು ಗ್ರಾಂಡ್ ಸ್ಲಾಂ ಫೈನಲ್​ನಲ್ಲಿ ಸೋಲಿಸಲು ವೀನಸ್ 11 ವರ್ಷಗಳಿಂದ ಕಾಯುತ್ತಿದ್ದಾರೆ. ಇಬ್ಬರೂ ಗ್ರಾಂಡ್ ಸ್ಲಾಂ ಫೈನಲ್​ನಲ್ಲಿ 9ನೇ ಸಲ ಎದುರಾಗುತ್ತಿದ್ದು ವೀನಸ್ 2ರಲ್ಲಿ ಚಾಂಪಿಯನ್ ಆಗಿದ್ದರೆ, ಉಳಿದ 6ರಲ್ಲಿ ಸೆರೇನಾ ಅವರದ್ದೇ ಮೇಲುಗೈ.

ಪುರುಷರ ಸಿಂಗಲ್ಸ್ ಫೈನಲ್​ಗೇರಿದ ರೋಜರ್ ಫೆಡರರ್

17 ಗ್ರಾಂಡ್ ಸ್ಲಾಂ ಒಡೆಯ ರೋಜರ್ ಫೆಡರರ್ 6ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಫೆಡರರ್ 7-5, 6-3, 1-6, 4-6, 6-3 ಸೆಟ್​ಗಳಿಂದ ದೇಶಬಾಂಧವ ಸ್ಟ್ಯಾನಿಸ್ಲಸ್ ವಾವ್ರಿಂಕರನ್ನು ಬಗ್ಗುಬಡಿದರು. ಮೊದಲೆರಡು ಸೆಟ್​ಗಳನ್ನು ಸುಲಭವಾಗಿ ಜಯಿಸಿದ್ದ 35 ವರ್ಷದ ಫೆಡರರ್​ಗೆ 3 ಹಾಗೂ 4ನೇ ಸೆಟ್​ನಲ್ಲಿ ವಾವ್ರಿಂಕ ತಿರುಗೇಟು ನೀಡಿದರು. ನಿರ್ಣಾಯಕ ಸೆಟ್​ನಲ್ಲಿ ರೋಚಕ ಪೈಪೋಟಿ ನಡೆದರೂ ಫೆಡರರ್ ಆಕರ್ಷಕ ಫೋರ್​ಹ್ಯಾಂಡ್ ಶಾಟ್​ಗಳ ಮೂಲಕ ಪ್ರಾಬಲ್ಯ ಮೆರೆದರು. ಫೆಡರರ್ 7 ವರ್ಷಗಳ ನಂತರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದು 5ನೇ ಬಾರಿ ಪ್ರಶಸ್ತಿ ಗೆಲ್ಲಲು ಇನ್ನೊಂದು ಹೆಜ್ಜೆ ಬಾಕಿಯಿದೆ. 2010ರಲ್ಲಿ ಕೊನೇ ಬಾರಿ ಫೈನಲ್​ಗೇರಿದ್ದ ಫೆಡರರ್ ಚಾಂಪಿಯನ್ ಆಗಿದ್ದರು. ಅಲ್ಲದೆ ರೋಜರ್ ಗ್ರಾಂಡ್ ಸ್ಲಾಂ ಫೈನಲಿಗೇರಿದ ಹಿರಿಯ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯಾದ ಕೆನ್ ರೋಸ್​ವೆಲ್ 1974ರಲ್ಲಿ 39ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೋಜರ್​ಗೆ ಭಾನುವಾರದ ಫೈನಲ್​ನಲ್ಲಿ ಸ್ಪೇನ್ ಸ್ಟಾರ್ ರಾಫೆಲ್ ನಡಾಲ್ ಅಥವಾ ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ ಎದುರಾಗಲಿದ್ದಾರೆ.

 

Leave a Reply

Your email address will not be published. Required fields are marked *

Back To Top