ಸೆಮೀಸ್​ಗೆ ಜೋಕೊವಿಕ್, ಅಗುಟ್

ಲಂಡನ್: ಸತತ 10 ಗೇಮ್ಳಲ್ಲಿ ಪ್ರಭುತ್ವ ಮೆರೆಯಲು ಯಶಸ್ವಿಯಾದ ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ಪ್ರತಿಷ್ಠಿತ ವಿಂಬಲ್ಡನ್ ಗ್ರಾಂಡ್ ಸ್ಲಾಂ ಟ್ರೋಫಿಯಲ್ಲಿ ಸತತ 2ನೇ ಹಾಗೂ ಒಟ್ಟಾರೆ 9ನೇ ಬಾರಿಗೆ ಉಪಾಂತ್ಯಕ್ಕೇರಿದರು. ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ 5ನೇ ಪ್ರಶಸ್ತಿ ಕನಸಿನಲ್ಲಿರುವ ಸೆರ್ಬಿಯಾ ತಾರೆ ಜೋಕೋ 6-4, 6-0, 6-2 ನೇರ ಸೆಟ್​ಗಳಿಂದ ಬೆಲ್ಜಿಯಂ ತಾರೆ ಡೇವಿಡ್ ಗೊಫಿನ್ ಎದುರು ಸುಲಭ ಜಯ ದಾಖಲಿಸಿದರು. ಜೋಕೊವಿಕ್ ಉಪಾಂತ್ಯದ ಹೋರಾಟದಲ್ಲಿ ಸ್ಪೇನ್​ನ ಸ್ಪೇನ್​ನ ರಾರ್ಬಟೊ ಬೌಟಿಸ್ಟಾ ಅಗುಟ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ 23ನೇ ಶ್ರೇಯಾಂಕಿತ ರಾರ್ಬಟೊ ಬೌಟಿಸ್ಟಾ ಅಗುಟ್ 7-5, 6-4, 3-6, 6-3 ಸೆಟ್​ಗಳಿಂದ ಅರ್ಜೆಂಟೇನಾದ ಗುಡೊ ಪೆಲ್ಲಾ ಎದುರು ಭರ್ಜರಿ ಜಯ ದಾಖಲಿಸಿ ಮೊದಲ ಬಾರಿಗೆ ಉಪಾಂತ್ಯಕ್ಕೇರಿದ ಸಾಧನೆ ಮಾಡಿದರು. -ಏಜೆನ್ಸೀಸ್

ಸೆರೇನಾ-ಮರ್ರೆಗೆ ಸೋಲು

ಈಗಾಗಲೇ ಸಿಂಗಲ್ಸ್ ವಿಭಾಗದಲ್ಲಿ ಉಪಾಂತ್ಯಕ್ಕೇರಿರುವ ಅಮೆರಿಕ ಸ್ಟಾರ್ ಆಟಗಾರ್ತಿ ಸೆರೇನಾ ವಿಲಿಯಮ್್ಸ ಹಾಗೂ ಮಾಜಿ ಚಾಂಪಿಯನ್ ಆಂಡಿ ಮರ್ರೆ ಜೋಡಿ ಮಿಶ್ರ ಡಬಲ್ಸ್ ವಿಭಾಗದ 3ನೇ ಸುತ್ತಿನಲ್ಲಿ ಹೊರಬಿದ್ದಿದೆ. ಅಮೆರಿಕ-ಬ್ರಿಟನ್ ಜೋಡಿ 3-6, 6-4, 2-6 ಸೆಟ್​ಗಳಿಂದ ವಿಶ್ವ ನಂ.1 ಬ್ರೆಜಿಲ್​ನ ಬ್ರೊನೊ ಸೊರ್ಸ್ ಹಾಗೂ ಅಮೆರಿಕದ ನಿಕೊಲ್ ಮೆಲಿಚಾರ್ ಜೋಡಿಗೆ ಶರಣಾಯಿತು.

Leave a Reply

Your email address will not be published. Required fields are marked *