ಸೆಟ್ಟೇರಿದ ‘ಗೌರಿಶಂಕರ’: ಹೊಸ ಕಲಾವಿದರ ಸಮಾಗಮ

blank

ಬೆಂಗಳೂರು: ಕನ್ನಡದ ಹಲವು ಚಿತ್ರಗಳಲ್ಲಿ ಬರವಣಿಗೆ, ನಿರ್ದೇಶನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಮಹೇಶ್ ಚಿನ್ಮಯಿ ಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಗೌರಿಶಂಕರ’. ಚಿತ್ರದಲ್ಲಿ ಉದಯೋನ್ಮುಖ ಕಲಾವಿದರಾದ ಸುನಿಲ್ ಭಂಗಿ, ಅಭಿಷೇಕ್, ಕುಸುಮಾ, ಪ್ರಿಯಾ ನಾಗಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಶ್ರೀ ವಿನಾಯಕ ವೆಂಕಟೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿಸಲಾಯಿತು. ಹಿರಿಯ ನಿರ್ಮಾಪಕ ರಾಜಣ್ಣ ಕ್ಯಾಮರಾ ಆನ್ ಮಾಡಿದರು, ಶಿವಲಿಂಗ (ಗಾಜನೂರ್) ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ಚಿನ್ನದ ಪದಕ ಪಡೆದ ಹುಡುಗನೊಬ್ಬನಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುವುದಿಲ್ಲ. ಇದರಿಂದ ಮನನೊಂದು ತನ್ನ ಚಾಣಾಕ್ಷತನದಿಂದ ಜೀವನದಲ್ಲಿ ಹೇಗೆ ಸಾಧನೆ ಮಾಡುತ್ತಾನೆ. ಇತರರಿಗೆ ಹೇಗೆ ಮಾರ್ಗದರ್ಶನವಾಗುತ್ತಾನೆ ಎಂಬುದೇ ಒನ್‌ಲೈನ್ ಸ್ಟೋರಿ. ಹಿರಿಯ ಕಲಾವಿದರಾದ ಬಿರಾದಾರ್, ಗುರುರಾಜ ಹೊಸಕೋಟೆ, ಕಿಲ್ಲರ್ ವೆಂಕಟೇಶ್, ಭವ್ಯಾ, ಎನ್.ಎಸ್.ದೇವರಾಜ್ (ನಿಟ್ಟೂರು), ಮನೋಜ್, ಹರೀಶ್, ಸುಬ್ರಮಣಿ ಮಲ್ಲಸಂದ್ರ, ಪ್ರಕಾಶ್ ರಾಜ್‌ಕುಮಾರ್, ಚಂದ್ರಮೂರ್ತಿ, ಬಿ.ಮಂಜುನಾಥ, ಮೋಹನ್ ಚಿತ್ರದುರ್ಗ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಮಹಾರಾಜ್ ಸಂಗೀತ, ರವಿ ಟಿ.ಗೌಡ ಛಾಯಾಗ್ರಹಣ, ಸಿ.ಎಚ್.ರವಿತೇಜ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ಚಿತ್ರಕ್ಕಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಜೋಗ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜಿಸಿದೆ.

Share This Article

Financial Problems: ಸಾಲದ ನೋವಿನಿಂದ ಮುಕ್ತಿ ಹೊಂದಲು ಹೀಗೆ ಮಾಡಲೇಬೇಕು!

Financial Problems: ಇತ್ತೀಚಿನ ದಿನಗಳಲ್ಲಿ ಪ್ರತಿ ಹತ್ತರಲ್ಲಿ ಎಂಟು ಜನರು ಸಾಲದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಡಿದ…

Dream Science: ಕನಸಿನಲ್ಲಿ ಕಪ್ಪು, ಬಿಳಿ ಹಾವು ಕಂಡರೆ ಶುಭನಾ / ಅಶುಭನಾ?

Dream Science: ಮಲಗುವಾಗ ಕನಸುಗಳು ಬರುವುದು ಸಹಜ. ಕನಸಿನ ವಿಜ್ಞಾನದ ಪ್ರಕಾರ, ಇವೆಲ್ಲವೂ ಭವಿಷ್ಯದ ಘಟನೆಗಳ…

Neem Leaves Benefits: ಚಳಿಗಾಲದಲ್ಲಿ ಬೇವಿನ ಎಲೆಗಳ ಉಪಯೋಗವೇನು ಗೊತ್ತಾ?

Neem Leaves Benefits: ಬೇವಿನ ಮರದ ಪ್ರತಿಯೊಂದು ಭಾಗವು ನಮಗೆ ತುಂಬಾ ಉಪಯುಕ್ತವಾಗಿದೆ. ಬೇವಿನ ಔಷಧೀಯ…