More

  ಸೂಕ್ತ ಜನಪ್ರತಿನಿಧಿಗಳಿಂದ ಪ್ರಗತಿ

  ರಾಮದುರ್ಗ: ಪಕ್ಷಾತೀತ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸೂಕ್ತ ಜನಪ್ರತಿನಿಧಿಗಳ ಆಯ್ಕೆಗೆ ಸರ್ವರೂ ಶ್ರಮಿಸಬೇಕು ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಕರೆ ನೀಡಿದರು.

  ಪಟ್ಟಣದ ಹಿರೇರಡ್ಡಿಯವರ ಆಯಿಲ್ ಮಿಲ್ ಆವರಣದಲ್ಲಿ ತಾಲೂಕು ರಡ್ಡಿ ಸಮುದಾಯದ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವ ಹಾಗೂ ಧಾರ್ಮಿಕ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

  ಉತ್ತರ ಕರ್ನಾಟಕದ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ಮಾಡುವ ನಿಟ್ಟಿನಲ್ಲಿ ಪಕ್ಷ ಸ್ಥಾಪನೆ ಮಾಡಿದ್ದೇನೆ. ಮುಖ್ಯಮಂತ್ರಿ ಆಗದಿದ್ದರೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ, ಜನಸಾಮಾನ್ಯರಿಗೆ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ. ಉತ್ತರ ಕರ್ನಾಟಕದ 13 ಜಿಲ್ಲೆಯಲ್ಲಿರುವ ರಡ್ಡಿ ಸಮುದಾಯದವರು ಒಗ್ಗಟ್ಟಾಗಿ ಸಮುದಾಯ ಕಟ್ಟುವುದರೊಂದಿಗೆ ತಮ್ಮ ಕ್ಷೇತ್ರದಲ್ಲಿ ಸೂಕ್ತ ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಬೇಕು ಎಂದರು. ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಮಹಾನ್ ಪುರುಷರು ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವರ ಆದರ್ಶಗಳು ನೆಮ್ಮದಿ ಬದುಕಿಗೆ ಸಹಕಾರಿ. ಶ್ರದ್ಧೆ, ನಿಷ್ಠೆಯಿಂದ
  ಕೃಷಿ ಕಾಯಕದೊಂದಿಗೆ ದೇಶಕ್ಕೆ ಅನ್ನ ನೀಡುವ ಕಾರ್ಯದಲ್ಲಿ ತೊಡಗಿದ ರಡ್ಡಿ ಸಮುದಾಯದವರ ಕಾರ್ಯ ಶ್ಲಾಘನೀಯ ಎಂದರು.

  ದಿವ್ಯ ಸಾನ್ನಿಧ್ಯ ವಹಿಸಿದ್ದ ಏರೆಹೊಸಳ್ಳಿ ರಡ್ಡಿಗುರು ಪೀಠದ ವೇಮನಾನಂದ ಶ್ರೀ ಮಾತನಾಡಿ, ವೇಮನರ ಹಾಗೂ ಮಲ್ಲಮ್ಮನವರ ಆದರ್ಶ ಅಳವಡಿಸಿಕೊಂಡು ಸಮಾಜಮುಖಿ ಜೀವನ ಸಾಗಿಸಬೇಕು ಎಂದರು.
  ಸುರೇಬಾನ-ಮನಿಹಾಳ ಗುರುದೇವ ಆತ್ಮಾನಂದ ಪುಣ್ಯಾಶ್ರಮದ ಗುರುದೇವ ಸಮರ್ಥ ಶಿವಾನಂದ ಶ್ರೀ ಸಾನ್ನಿಧ್ಯ, ರಡ್ಡಿ ಸಮುದಾಯದ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು.
  ಕಲಬುರಗಿಯ ಸಾಹಿತಿ, ಪತ್ರಕರ್ತ ಮಹಿಪಾಲರಡ್ಡಿ ಸೇಡಂ ವೇಮನರ ಜೀವನ ಹಾಗೂ ಸಾಧನೆಗಳ ಕುರಿತು ಅತಿಥಿ ಉಪನ್ಯಾಸ ನೀಡಿದರು.

  ವೇಮನರ ಭಾವಚಿತ್ರದ ಮೆರವಣಿಗೆ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದ ಹತ್ತಿರ ಶಾಸಕ ಮಹಾದೇವಪ್ಪ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಕಾರ್ಯಕ್ರಮದ ಮುಖ್ಯ ವೇದಿಕೆಗೆ ಆಗಮಿಸಿ ಸಮಾವೇಶಗೊಂಡಿತು.

  ಮಾಜಿ ಶಾಸಕ ಆರ್.ವಿ. ಪಾಟೀಲ, ಕಾಂಗ್ರೆಸ್ ಮುಖಂಡರಾದ ರಾಜೇಂದ್ರ ಪಾಟೀಲ, ಪ್ರದೀಪ ಪಟ್ಟಣ, ಸಮುದಾಯದ ಮುಖಂಡರಾದ ಡಾ.ಆರ್.ಎ. ಕಣಬೂರ, ಚನ್ನಬಸವರಾಜ ಹಿರೇರಡ್ಡಿ, ಕೃಷ್ಣ ಮುಂಬರಡ್ಡಿ, ಡಾ.ಐ.ಎಸ್. ಪಾಟೀಲ, ಕಲ್ಲಣ್ಣ ವಜ್ರಮಟ್ಟಿ, ಜಿ.ಬಿ. ರಂಗನಗೌಡ್ರ, ಕಷ್ಣಾ ಪಾಟೀಲ, ಮಂಜುಳಾ ದೇವರಡ್ಡಿ, ಭೂಸ್ವಾಧೀನ ಜಿಲ್ಲಾಧಿಕಾರಿ ಗೀತಾ ಕೌಲಗಿ ಸೇರಿ ಸಮುದಾಯದವರು ಇದ್ದರು. ಬಿಜೆಪಿ ಮುಖಂಡ, ವೈದ್ಯ ಡಾ. ಕೆ.ವಿ. ಪಾಟೀಲ ಸ್ವಾಗತಿಸಿದರು. ಶಿಕ್ಷಕ ಅಶೋಕ ಬೂದಿ, ಅನಸೂಯಾ ಬಿರಾದಾರ ನಿರೂಪಿಸಿದರು. ಸುರೇಶ ಅಣ್ಣಿಗೇರಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts