ಸುಶಿಕ್ಷಿತರಿಂದ ಸಮಾಜಕ್ಕೆ ಒಳಿತು

ದೊಡ್ಡಬಳ್ಳಾಪುರ: ಸುಶಿಕ್ಷಿತರು ಸಮಾಜದ ಒಳಿತಿಳಿಗೆ ಶ್ರಮಿಸಬೇಕು ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶ ಆರ್.ರವಿ ತಿಳಿಸಿದರು.

ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ದೇವಾಂಗ ಸಮುದಾಯದ ವಿದ್ಯಾರ್ಥಿಗಳಿಗೆ ದೇವಾಂಗ ಮಂಡಳಿಯಿಂದ ಪಟ್ಟಣದ ದೇವಾಂಗ ಮಂಡಳಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.

ಶಿಕ್ಷಣ ಪಡೆಯುವುದೆಂದರೆ ಕೆವಲ ಪಠ್ಯದ ಶಿಕ್ಷಣವಲ್ಲ. ದೇಶದ ಪ್ರಜೆಗಳಿಗಿರುವ ಕನಿಷ್ಠಮಟ್ಟದ ಕಾನೂನು ಅರಿವೂ ಇರಬೇಕು. ಕಾನೂನಿನ ಅರಿವು ಇಲ್ಲ ಎಂದು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪ್ರಾಪ್ತರಿಗೆ ವಾಹನ ನೀಡುವುದು, ರಸ್ತೆ ಸುರಕ್ಷತೆ ನಿಯಮ ಉಲ್ಲಂಘಿಸುವುದು ಕಾನೂನು ಉಲ್ಲಂಘನೆ. ಸುಶಿಕ್ಷಿತರಾದರೆ ಸಾಲದು ಅದಕ್ಕೆ ತಕ್ಕ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದರು.

ವೈದ್ಯರಾದ ಡಾ.ಎಸ್.ಕೆ.ಶ್ರೀನಿವಾಸ್ ಮಾತನಾಡಿ, ನಿರ್ದಿಷ್ಟ ಗುರಿ ಹಾಗೂ ಶ್ರದ್ಧೆಯಿದ್ದರೆ ಸಾಧನೆ ಸುಲಭ ಎಂದರು.

ಉಪನ್ಯಾಸಕರಾದ ಆನಂದ ಮೂರ್ತಿ, ಸುಜಯ್ ಮಾತನಾಡಿದರು.

ಪ್ರತಿಭಾ ಪುರಸ್ಕಾರಕ್ಕಾಗಿ ಚಿಕ್ಕನಾಗಣ್ಣ ಮತ್ತು ಮಹದೇವಮ್ಮ ಕುಟುಂಬದವರು 2.5 ಲಕ್ಷ ರೂ. ಹಾಗೂ ಸಬ್ಬೇನಹಳ್ಳಿ ಸತ್ಯಭಾಮಾ ಕುಟುಂಬದವರು 1 ಲಕ್ಷ ರೂ. ದೇಣಿಗೆ ನೀಡಿದರು.

ದೇವಾಂಗ ಮಂಡಳಿ ಪ್ರಭಾರಿ ಅಧ್ಯಕ್ಷ ಕೆ.ಜಿ.ದಿನೇಶ್, ಗೌರವ ಕಾರ್ಯದರ್ಶಿ ಎ.ಎಸ್.ಕೇಶವ, ಸಹಕಾರ್ಯದರ್ಶಿ ಯೋಗ ನಟರಾಜ್, ನಿರ್ದೇಶಕರಾದ ಎಚ್.ವಿ.ಅಖಿಲೇಶ್, ವಿ.ಎಸ್.ರಾಘವೇಂದ್ರ, ಎಸ್.ಎನ್.ಶಿವರಾಂ, ವಿ.ನಿರ್ಮಲಾ, ಕೆ.ಜಿ.ಗೋಪಾಲ್, ಕೆಎನ್.ಜನಾರ್ಧನ್, ಎಂ.ಎನ್.ಶ್ರೀದೇವಿ, ಎಸ್.ಎನ್.ನಟರಾಜ, ಕೆ.ಎಸ್.ಗೋಪಿ, ಟಿ.ಪಿ.ವರಲಕ್ಷ್ಮೀ, ಪ್ರಭಾಕರ್, ಎಲ್.ಎನ್.ಶೀಲಾ ಹಾಜರಿದ್ದರು.

Leave a Reply

Your email address will not be published. Required fields are marked *