ಸುಳವಾಡಿ ಪ್ರಕರಣ, ವಿಚಾರಣೆ ಫೆ.12 ಕ್ಕೆ ಮುಂದೂಡಿಕೆ

ಚಾಮರಾಜನಗರ: ಸುಳವಾಡಿ ದುರಂತ ಪ್ರಕರಣದ ನಾಲ್ವರು ಆರೋಪಿಗಳ ವಿಚಾರಣೆಯನ್ನು ಫೆ. 12ಕ್ಕೆ ಮುಂದೂಡಲಾಯಿತು.

ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಬಸವರಾಜ ಅವರು ಆರೋಪಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದರು.

ಪ್ರಕಣದ ಒಂದನೇ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಅವರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ವಕೀಲರು ವಿಚಾರಣೆಗೆ ಗೈರಾಗಿದ್ದರು.

ಸ್ವಾಮೀಜಿಗೆ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಫೆ. 5 ರವರೆಗೆ ಕಾಲಾವಕಾಶ ಪಡೆದರು.