17 C
Bangalore
Wednesday, December 11, 2019

ಸುರಿವ ಮಳೆಯಲ್ಲಿ ಮಕ್ಕಳ ಕ್ರೀಡಾಕೂಟ

Latest News

ಕ್ರಿಮ್್ಸ ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಇಬ್ಬರು ಹಿರಿಯ ವೈದ್ಯರ ಪೈಪೋಟಿ

ವಿಜಯವಾಣಿ ಸುದ್ದಿಜಾಲ ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್(ಕ್ರಿಮ್್ಸ) ನಿರ್ದೇಶಕ ಹುದ್ದೆಗಾಗಿ ಹುಬ್ಬಳ್ಳಿಯ ಕಿಮ್ಸ್​ನ ಇಬ್ಬರು ಹಿರಿಯ ವೈದ್ಯರ ನಡುವೆ ಪೈಪೋಟಿ ಇದೆ....

ವಾರಕ್ಕೊಮ್ಮೆ ಬ್ಯಾಗ್​ಲೆಸ್ ಡೇ ಯೋಜನೆ; ಶಿಕ್ಷಣ ಸಚಿವ ಸುರೇಶಕುಮಾರ

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ: ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಉತ್ಸಾಹ ಹೆಚ್ಚಿಸಲು ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂಬರುವ ಶೈಕ್ಷಣಿಕ ವರ್ಷದಿಂದ...

ಬುಡಮೇಲಾದ ಸಿದ್ದು ಭವಿಷ್ಯ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ನುಡಿದಿದ್ದ ಭವಿಷ್ಯವೆಲ್ಲ ಬುಡಮೇಲಾಗಿದೆ. ಅವರು ತಮ್ಮ ಜ್ಯೋತಿಷಾಲಯ ಮುಚ್ಚಿಕೊಂಡು ಹೋಗಿದ್ದಾರೆ. ಬುರುಡೆ ಬಿಡೋದೆ ಅವರ ಕೆಲಸ. ಬುರುಡೆ...

ಪಿಬಿ ರಸ್ತೆಯಲ್ಲಿ ಟಯರ್ ಅಂಗಡಿ!

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸಿಆರ್​ಎಫ್ ಅನುದಾನದಡಿ ನಿರ್ವಿುಸಲಾದ ಚನ್ನಮ್ಮ ವೃತ್ತ- ಬಂಕಾಪುರ ಚೌಕ ವೃತ್ತದ ಪಿಬಿ ರಸ್ತೆ ಈಗ ಅತಿಕ್ರಮಣಕಾರರ ಸ್ವರ್ಗವಾಗಿ ಮಾರ್ಪಟ್ಟಿದೆ....

ಹಳ್ಳಿಗರಿಗೆ ಅಶುದ್ಧ ನೀರೇ ಗತಿ!

ವೀರೇಶ ಹಾರೋಗೇರಿ ಕಲಘಟಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ವಿುಸಿದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿವೆ. ಇದರಿಂದಾಗಿ...

ಹೊಸನಗರ: ಪಟ್ಟಣದಲ್ಲಿ ಶುಕ್ರವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಕ್ಕಳು ಸುರಿಯುತ್ತಿದ್ದ ಮಳೆಯಲ್ಲೇ ಆಟವಾಡಬೇಕಾಯಿತು. ರನ್ನಿಂಗ್ ರೇಸ್, ಜಿಗಿತ, ಖೋಖೋ, ಕಬಡ್ಡಿ, ಥ್ರೋಬಾಲ್ ಮತ್ತಿತರ ಆಟಗಳನ್ನು ವಿದ್ಯಾರ್ಥಿಗಳು ಕೆಸರಿನಲ್ಲೇ ಆಡಿದರು.

ಈಗಾಗಲೆ ಮಹಾಮಳೆಯಿಂದ ಒದ್ದೆಯಾಗಿ ಸಂಪೂರ್ಣ ಹಸಿಯಾಗಿ ಜಾರುತ್ತಿರುವ ಮೈದಾನ ಒಂದು ಕಡೆಯಾದರೆ ಗುರುವಾರ ಸಂಜೆಯಿಂದಲೇ ಮತ್ತೆ ಆರಂಭಗೊಂಡಿರುವ ಜಿಟಿಜಿಟಿ ಮಳೆ ಶುಕ್ರವಾರವೂ ಸುರಿಯುತ್ತಲೇ ಇತ್ತು. ಮಕ್ಕಳು ಮಳೆಯಲ್ಲಿ ಒದ್ದೆಯಾಗುತ್ತಾರೆ ಎನ್ನುವ ಕಲ್ಪನೆಯೇ ಇಲ್ಲದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರೀಡಾಕೂಟ ಏರ್ಪಡಿಸಿದ್ದರು. ಮಕ್ಕಳು ಆಡುವುದಕ್ಕೆ ಸಾಧ್ಯವಾಗಲಿ ಬಿಡಲಿ ಇಲಾಖೆಗೆ ಮುಖ್ಯವಲ್ಲ, ಸುತ್ತೋಲೆ ಪ್ರಕಾರ ಮಾಡುತ್ತಿದ್ದೇವೆ ಎನ್ನುವ ವಿಷಯ ಮಾತ್ರ ಮುಖ್ಯ ಎನ್ನುವಂತಿತ್ತು ಆ ಕ್ರೀಡಾಕೂಟ.

ಕಳೆದ 10 ವರ್ಷಗಳಲ್ಲಿ ವಲಯಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗೆ ಕ್ರೀಡಾಕೂಟ ಮಳೆಯಲ್ಲಿಯೇ ನಡೆದಿದೆ(ಜುಲೈನಿಂದ ಸೆಪ್ಟೆಂಬರ್​ವರೆಗೆ). ಇಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮಳೆಯಲ್ಲಿಯೆ ತೋರಿಸಬೇಕು. ಇಲ್ಲವೆ ಲಕ್ಕಿಡಿಪ್​ಗೆ ಒಳಗಾಗಬೇಕು. ಬಹುತೇಕ ಸಲ ಟಾಸ್ ಮೂಲಕವೆ ವಿದ್ಯಾರ್ಥಿಗಳು ಆಯ್ಕೆಯಾಗುವುದು ಇದೆ. ಇದು ಯಾವ ಉದ್ದೇಶದ ಕ್ರೀಡಾಕೂಟ. ಇಂತಹ ಅವೈಜ್ಞಾನಿಕ ಕ್ರೀಡಾಕೂಟದ ಅಗತ್ಯವಾದರೂ ವಿದ್ಯಾರ್ಥಿಗಳಿಗೆ ಇದೆಯೇ ಎನ್ನುವ ಪ್ರಶ್ನೆ ಪಾಲಕರದ್ದು.

ಪಾಲಕರ ಅಸಮಾಧಾನ: ಕ್ರೀಡಾಕೂಟಗಳ ಸಮಯವನ್ನು ಮಳೆಗಾಲಕ್ಕೆ ಸೀಮಿತ ಮಾಡಿರುವ ಇಲಾಖೆಯ ವೇಳಾಪಟ್ಟಿಯ ಕುರಿತು ಮಲೆನಾಡ ಭಾಗದಲ್ಲಿರುವ ಇಲಾಖಾ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಇದುವರೆಗೂ ಪ್ರಶ್ನಿಸಿಲ್ಲ. ಸರ್ಕಾರದಿಂದ ಇದಕ್ಕೊಂದಷ್ಟು ಅನುದಾನ ಬರುತ್ತಿದೆ. ಅದರ ಲೆಕ್ಕವೂ ಸರ್ಕಾರಕ್ಕೆ ಹೋಗುತ್ತಿದೆ. ಆದರೆ ಉದ್ದೇಶ ಮಾತ್ರ ಸಮರ್ಪಕವಾಗಿಲ್ಲ.

ಮಳೆ ಬಂದು ಅಂಕಣ ಒದ್ದೆಯಾಗಿದೆ ಎನ್ನುವ ಕಾರಣಕ್ಕೆ ವಿಶ್ವಕಪ್ ಪಂದ್ಯಾವಳಿಗಳನ್ನೇ ನಿಲ್ಲಿಸಲಾಗುತ್ತದೆ. ಆದರೆ ಮಳೆಗಾಲದ ಈ ಅವೈಜ್ಞಾನಿಕ ಕ್ರೀಡಾಕೂಟವನ್ನು ಬದಲಿಸುವುದಕ್ಕೆ ಏಕೆ ಪ್ರಯತ್ನವಾಗುತ್ತಿಲ್ಲ ಎನ್ನುವುದು ಪಾಲಕರ ಪ್ರಶ್ನೆ. ಇದಕ್ಕೆ ಯಾರಿಂದಲೂ ಉತ್ತರವಿಲ್ಲ.

Stay connected

278,739FansLike
587FollowersFollow
623,000SubscribersSubscribe

ವಿಡಿಯೋ ನ್ಯೂಸ್

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...