ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಸಂಭ್ರಮ

ಅರಕಲಗೂಡು: ತಾಲೂಕಿನ ರಾಮನಾಥಪುರದ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ರಥೋತ್ಸವ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ಅರ್ಚಕರು ಮೂಲ ದೇವರಿಗೆ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ವಿವಿಧ ಹೂನಿಂದ ಅಲಂಕರಿಸಿದ್ದ ನಾಗಪ್ಪನ ಉತ್ಸವ ಮೂರ್ತಿಯನ್ನು ದೇಗುಲ ಪ್ರಾಂಗಣದ ಸುತ್ತ ಪ್ರದಕ್ಷಿಣೆ ಹಾಕಿಸಿದ ಬಳಿಕ ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಪ್ರದಾಯದಂತೆ ಮಧ್ಯಾಹ್ನ 12ಕ್ಕೆ ಅಭಿಜನ್ ಮುಹೂರ್ತದಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಹರ್ಷೋದ್ಗಾರದ ನಡುವೆ ತೇರು ಎಳೆಯಲು ಆರಂಭಿಸಿದರು. ಭಕ್ತರು ಹಣ್ಣು ದವನ ಎಸೆದು ನಮಿಸಿದರು.
ಚಳಿಯಲ್ಲೂ ಬೆಳಗಿನ ಜಾವ ಕಾವೇರಿ ನದಿಗಿಳಿದ ಭಕ್ತರು ಪವಿತ್ರ ಸ್ನಾನ ಮಾಡಿ ದೇವಸ್ಥಾನದಲ್ಲಿ ಜರುಗಿದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕೇಶ ಮುಂಡನ ಮಾಡಿಸಿಕೊಂಡ ಭಕ್ತರು ಹರಕೆ ತೀರಿಸಿದರು. ವಿವಿಧ ಚರ್ಮವ್ಯಾಧಿ ನಿವಾರಣೆ ಹಾಗೂ ನಾಗದೋಷ ಪರಿಹಾರಕ್ಕೆ ಪ್ರಾರ್ಥಿಸಿದರು. ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಭಕ್ತರಿಗೆ ಮಜ್ಜಿಕೆ, ಪಾನಕ, ಕುಡಿಯುವ ನೀರು ನೀಡಿ ಬಾಯಾರಿಕೆ ನಿವಾರಿಸಿದರು.
ಶ್ರೀ ರಾಮೇಶ್ವರ, ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

Leave a Reply

Your email address will not be published. Required fields are marked *