ಸುಧಾರಣೆ ಭಾಗ್ಯ ಕಾಣದ ರಸ್ತೆ

ಕುಮಟಾ: ಪಟ್ಟಣದ ಮುಖ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಪಕ್ಕದಲ್ಲಿ ಸಾಗುವ ನೆಹರು ನಗರ ಕೂಡು ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನೆಲ್ಲಿಕೇರಿ ಹಳೆಯ ಬಸ್ ನಿಲ್ದಾಣದಿಂದ ನೆಹರು ನಗರ ಸರ್ಕಾರಿ ಶಾಲೆಯವರೆಗಿನ ಮುಖ್ಯ ರಸ್ತೆಯು ಮುಂದೆ ಸಾಗಿ ಹಳಕಾರ ಹಾಗೂ ಹೆಗಡೆಯನ್ನು ಸಂರ್ಪಸುವ ಕೊಂಡಿಯಾಗಿ ಪ್ರಾಮುಖ್ಯತೆ ಪಡೆದಿದೆ. ಇದೇ ರೀತಿ ಮುಖ್ಯ ಬಸ್ ನಿಲ್ದಾಣದ ಎದುರಿನ ರೈಲ್ವೆ ಬ್ರಿಜ್ ಪಕ್ಕದಿಂದ ವರದ್ ಹೋಟೆಲ್ ಮೂಲಕ ್ಢಾಗಿ ಇಂಡೇನ್ ಗ್ಯಾಸ್ ಎಜೆನ್ಸಿ ಹಾಗೂ ನೆಹರು ನಗರದ ಸರ್ಕಾರಿ ಶಾಲೆ ಬಳಿ ಮುಖ್ಯ ರಸ್ತೆಗೆ ಇನ್ನೊಂದು ಕಚ್ಚಾರಸ್ತೆ ಬಹಳ ಕಾಲದಿಂದ ಬಳಕೆಯಲ್ಲಿದೆ. ನೆಹರುನಗರ, ವಿದ್ಯಾನಗರ, ಹಳಕಾರ ಭಾಗದವರಿಗೆ ರಾ. ಹೆದ್ದಾರಿ ಹಾಗೂ ಮುಖ್ಯ ಬಸ್ ನಿಲ್ದಾಣಕ್ಕೆ ಇದು ಸುಲಭದ ಮಾರ್ಗವಾಗಿದೆ.

ಆದರೆ, ನೆಹರು ನಗರದೊಳಗೆ ಹಾಗೂ ರೈಲು ನಿಲ್ದಾಣದ ಪಕ್ಕದಲ್ಲಿನ ಈ ರಸ್ತೆಗೆ ಸುಧಾರಣೆ ಭಾಗ್ಯವನ್ನೆ ಕಂಡಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಸಾಕಷ್ಟು ಮನೆಗಳು ತಲೆ ಎತ್ತುತ್ತಿದ್ದು, ದೊಡ್ಡ ವಾಹನಗಳ ಓಡಾಟ ಹೆಚ್ಚಾಗಿದೆ. ಹೀಗಾಗಿ ರಸ್ತೆ ತೀರಾ ಹದಗೆಟ್ಟಿದ್ದು ಅಕ್ಕ ಪಕ್ಕದ ಮನೆಗಳ ಜನತೆ ಧೂಳಿನ ಕಾಟದಿಂದ ಬೇಸತ್ತು ಹೋಗಿದ್ದಾರೆ. ಇನ್ನೊಂದೆಡೆ ಒಳಚರಂಡಿ ಕಾಮಗಾರಿಯಿಂದ ಕೆಲವೆಡೆ ತಕ್ಕಮಟ್ಟಿಗೆ ಸರಿಯಾಗಿದ್ದ ರಸ್ತೆಯೂ ಹಾಳಾಗಿದ್ದು ಜನ, ವಾಹನ ಸಂಚಾರದ ಸ್ಥಿತಿ ಹದಗೆಟ್ಟಿದೆ.

ರಸ್ತೆಯ ಅಕ್ಕಪಕ್ಕದಲ್ಲಿ ನೂರಾರು ಮನೆಗಳಿದ್ದು ಅಬಕಾರಿ ಇಲಾಖೆ ಕಾರ್ಯಾಲ ಯವೂ ಇದೆ. ಆದರೆ, ರಸ್ತೆಯನ್ನು ಡಾಂಬರೀಕರಣಗೊಳಿಸುವ ಬಗ್ಗೆ ಈವರೆಗೂ ಯಾರೂ ಚಿಂತನೆ ನಡೆಸಿಲ್ಲ. ಈ ರಸ್ತೆ ಅಭಿವೃದ್ಧಿಪಡಿಸಿದರೆ ನಿತ್ಯ ಸಾವಿರಾರು ಜನರಿಗೆ ಅನುಕೂಲವಾಗುವ ಜೊತೆಗೆ ಧೂಳಿ ್ಢಂದ ಉಂಟಾಗುವ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ ಎಂದು ಗಣೇಶ ಭಟ್ಟ, ವಿಶ್ವನಾಥ ಹೆಗಡೆ, ಬಾಲು ಹೆಗಡೆ, ಲಕ್ಷಿ ್ಮ ಹೆಗಡೆ ಡಾ.ಎಸ್.ವಿ. ಶೇಣ್ವಿ ಆಗ್ರಹಿಸಿದ್ದಾರೆ.


ರಸ್ತೆಯ ದುಸ್ಥಿತಿಯಿಂದ ಬೇಸತ್ತು ಹೋಗಿದ್ದೇವೆ. ವಿಪರೀತ ಧೂಳಿನಿಂದಾಗಿ ಆರೋಗ್ಯ ಸಮಸ್ಯೆಯೂ ಉದ್ಭವವಾಗಿದೆ. ಕೂಡಲೇ ಇಲ್ಲಿನ ರಸ್ತೆಯನ್ನು ಸರಿಪಡಿಸಿ, ಡಾಂಬರು ಇಲ್ಲವೇ ಕಾಂಕ್ರೀಟ್ ರಸ್ತೆೆ ಮಾಡಬೇಕು.
| ಎಚ್.ವಿ. ಸರೋಜಾ ನೆಹರುನಗರ ನಿವಾಸಿ

Leave a Reply

Your email address will not be published. Required fields are marked *