ಸುಗಮವಾಗಿ ನಡೆದ ಎಸ್​ಎಸ್​ಎಲ್​ಸಿ ಪರೀಕ್ಷೆ

ಹುಬ್ಬಳ್ಳಿ: ನಗರದಲ್ಲಿ ಗುರುವಾರ ಎಸ್​ಎಸ್​ಎಲ್​ಸಿ ಭಾಷಾ ವಿಷಯಗಳ ಪರೀಕ್ಷೆ ಸುಗಮವಾಗಿ ನಡೆದವು. ಎಲ್ಲಿಯೂ ಅಹಿತಕರ ಘಟನೆ ಹಾಗೂ ಡಿಬಾರ್ ಆದ ಪ್ರಕರಣಗಳು ನಡೆದಿಲ್ಲ. ಮುಂಜಾಗೃತ ಕ್ರಮವಾಗಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗಿತ್ತು. ಸಿದ್ಧಾರೂಢ ಮಠದ ಅಂಧ ಮಕ್ಕಳ ಶಾಲೆಯಲ್ಲಿ 20 ಅಂಧ ವಿದ್ಯಾರ್ಥಿಗಳು ಹಾಗೂ 17 ಅಂಗವಿಕಲ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಇವರಿಗೆ ಶಿಕ್ಷಣ ಇಲಾಖೆಯ ನಾಲ್ವರು ಸಹಾಯಕರು ಸಹಕಾರ ನೀಡಿದರು.