ಸಿಲ್ಕ್ ರೋಡ್​ಗೆ ಪಾಕಿಸ್ತಾನದಲ್ಲಿ ಆರ್ಥಿಕ ಅಡಚಣೆ

ಬೀಜಿಂಗ್: ಏಷ್ಯಾ ಮತ್ತು ಯುರೋಪ್ ಖಂಡವನ್ನು ಬೆಸೆಯುವ ಚೀನಾದ ಬಹು ಮಹತ್ವಕಾಂಕ್ಷೆಯ ವಲಯ ಮತ್ತು ರಸ್ತೆ (ಬೆಲ್ಟ್ ಆಂಡ್ ರೋಡ್) ಯೋಜನೆಗೆ ಪಾಕಿಸ್ತಾನದಲ್ಲಿ ರಾಜಕೀಯ ಮತ್ತು ಆರ್ಥಿಕ ಅಡಚಣೆ ಎದುರಾಗಿದೆ.

ಪಾಕಿಸ್ತಾನವನ್ನು ಸರ್ವಋತು ಸ್ನೇಹಿತ ರಾಷ್ಟ್ರವೆಂದು ಚೀನಾ ಗುಣಗಾನ ಮಾಡುತ್ತಿದ್ದರೂ, ಚೀನಾದ ಸಹಕಾರದಲ್ಲಿ ನಡೆಯುತ್ತಿರುವ ಹಲವು ಯೋಜನೆಗಳಿಗೆ ಪಾಕ್​ನಲ್ಲಿ ಸ್ಥಳೀಯರಿಂದ ಮತ್ತು ಹಲವು ಸರ್ಕಾರಿ ಸಂಸ್ಥೆಗಳಿಂದ ದೊಡ್ಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಚೀನಾ ಈಗ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಡೈಮರ್-ಬಾಷಾ ಡ್ಯಾಂ ನಿರ್ವಣಕ್ಕೆ ಸಹಕಾರ ನೀಡುವ ಮೂಲಕ ಜಲವಿದ್ಯುತ್ ಯೋಜನೆ ಮೇಲೆ ಚೀನಾ ಆಧಿಪತ್ಯ ಸ್ಥಾಪಿಸಲು ಹವಣಿಸುತ್ತಿದೆ.

ದೇಶದ ಹಿತಾಸಕ್ತಿ ರಕ್ಷಿಸಲು ಈ ಪ್ರಸ್ತಾಪವನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಪಾಕ್ ಜಲ ಪ್ರಾಧಿಕಾರದ ಅಧ್ಯಕ್ಷ ಕಟುವಾಗಿ ಹೇಳಿದ ಬೆನ್ನಿಗೆ ಈ ಯೋಜನೆಯಿಂದ ಚೀನಾವನ್ನು ಹೊರಗಿಡಲಾಗಿದೆೆ. ಇದೇ ರೀತಿ ಅನೇಕ ಜಂಟಿ ಯೋಜನೆಗಳನ್ನು ಪಾಕ್ ತಡೆಹಿಡಿದಿದೆ ಎಂದು ತಿಳಿದುಬಂದಿದೆ. ಇದರಿಂದ ಚೀನಾಕ್ಕೆ -ಠಿ; 89,170 ಕೋಟಿ (14 ಬಿಲಿಯನ್ ಡಾಲರ್) ನಷ್ಟವಾಗಿದೆ. ತಾಂಜೇನಿಯಾ, ಹಂಗೇರಿ ಮತ್ತಿತರ ಸಣ್ಣ ರಾಷ್ಟ್ರಗಳು ಈಗ ಬೆಲ್ಟ್ ಮತ್ತು ರೋಡ್ ಯೋಜನೆ ಬಗ್ಗೆ ಅಪಸ್ವರ ಎತ್ತುತ್ತಿವೆ. ಆದರೆ, ಯಾವುದೇ ಯೋಜನೆಗೆ ಹಿನ್ನಡೆಯಾಗಿಲ್ಲ ಎಂದು ಚೀನಾ ಹೇಳಿಕೊಳ್ಳುತಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *