ಸಿಬ್ಬಂದಿ ಭವಿಷ್ಯ ನಿಧಿ ಪಾವತಿಸದ ಬಿಎಂಟಿಸಿ

ಬೆಂಗಳೂರು: ಬಿಎಂಟಿಸಿಯ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನದಿಂದ ಕಡಿತಗೊಳಿಸುವ ಮೊತ್ತವನ್ನು ನಿಗದಿಯಂತೆ ಆಯಾ ಸಂಸ್ಥೆಗಳಿಗೆ ಪಾವತಿಸುತ್ತಿಲ್ಲ. ವೇತನದಲ್ಲಿ ಕಡಿತ ಮಾಡಲಾದ 270 ಕೋಟಿ ರೂ. ಭವಿಷ್ಯ ನಿಧಿ ಮೊತ್ತವನ್ನು ನಿಗದಿತ ಖಾತೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿದೆ.

ಬಿಎಂಟಿಸಿ ನೀಡಿರುವ ಮಾಹಿತಿಯಂತೆ 2016ರ ಏಪ್ರಿಲ್​ನಿಂದ 2018ರ ಜೂನ್​ವರೆಗೆ 561 ಕೋಟಿ ರೂ. ಭವಿಷ್ಯ ನಿಧಿಗೆ ಪಾವತಿಸಲಾಗಿದೆ. ಅದಾದ ನಂತರದಿಂದ ಸಿಬ್ಬಂದಿ ಭವಿಷ್ಯನಿಧಿಗೆ ಹಣ ಪಾವ

ತಿಸಿಲ್ಲ. ಅದರಂತೆ 2018ರ ಜುಲೈನಿಂದ 2019 ಜೂನ್​ವರೆಗೆ ಭವಿಷ್ಯ ನಿಧಿ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದ್ದು, 269.40 ಕೋಟಿ ರೂ. ಪಾವತಿಸಬೇಕಿದೆ. ಹೀಗೆ ಹಣ ಬಾಕಿ ಉಳಿಸಿಕೊಂಡಿದ್ದ ಕ್ಕಾಗಿ ಭವಿಷ್ಯ ನಿಧಿ ಸಂಸ್ಥೆಗೆ 64.28 ಲಕ್ಷ ರೂ. ದಂಡ ಪಾವತಿಸಿದೆ.

ಇನ್ನಿತರ ಬಾಕಿ: ಭವಿಷ್ಯ ನಿಧಿ ಜತೆಗೆ, ನೌಕರರಿಗೆ ನೀಡಬೇಕಾದ ಇತರ ಸವಲತ್ತುಗಳಲ್ಲೂ ಕೊರತೆ ಇದೆ. ಪ್ರಮುಖವಾಗಿ ಕಳೆದ ಕೆಲವು ತಿಂಗಳಿನಿಂದ ಎಲ್​ಐಸಿ ಕಂತುಗಳನ್ನು ಪಾವತಿಸದ ಕಾರಣಕ್ಕೆ

15 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಅದರ ಜತೆಗೆ ಹಬ್ಬದ ಮುಂಗಡ ಸೇರಿ ಇನ್ನಿತರ ಸವಲತ್ತುಗಳನ್ನು ಸ್ಥಗಿತಗೊಳಿಸಲಾಗಿದೆ.

Leave a Reply

Your email address will not be published. Required fields are marked *