ಮೋಹನ ಪಾಟಣಕರ
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ.
ತಾಲೂಕಿನಲ್ಲಿಯೇ 7 ಉಪಕೇಂದ್ರ, 12 ಗ್ರಾಮಗಳ 47 ಸಾವಿರ ಜನಸಂಖ್ಯೆ ಹೊಂದಿದೆ ಕೊಕಟನೂರ. ಆಸ್ಪತ್ರೆಯಲ್ಲಿ ಕೇವಲ 11 ಜನ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳೆಗ್ಗೆಯಿಂದ ಸಂಜೆವರೆಗೆ ನಿರಂತರ ಹೊರರೋಗಿಗಳನ್ನು ತಪಾಸಣೆ ಮಾಡುವ ಸಿಬ್ಬಂದಿ ಪ್ರತಿದಿನ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಬಡಜನರೇ ಹೆಚ್ಚಾಗಿ ಬರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿತಿಂಗಳು 35 ರಿಂದ 40 ಹೆರಿಗೆಗಳು ಆಗುತ್ತವೆ. ಆದರೆ, ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಹೊಂದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
21 ಹುದ್ದೆಗಳಲ್ಲಿ 10 ಖಾಲಿ: ಕೊಕಟನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 21 ಹುದ್ದೆಗಳಿವೆ. ಅವುಗಳಲ್ಲಿ ಆಡಳಿತ ವೈದ್ಯಾಧಿಕಾರಿ, ನರ್ಸಿಂಗ್, ಾರ್ಮಸಿ ಆಫೀಸರ್, ಜೂನಿಯರ್ ಲ್ಯಾಬ್ ಟೆಕ್ನಿಷಿಯನ್, ಎ್ಟಿಎ, ಸಿನಿಯರ್ ಪಿಎಚ್‌ಸಿಒ, ಜೂನಿಯರ್ ಪಿಎಚ್‌ಸಿಒ, ಎಚ್‌ಐಒ, ಗ್ರೂಪ್ ಡಿ ಮೂವರು ಸೇರಿ ಒಟ್ಟು 11 ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನೂಳಿದಂತೆ ಜೂನಿಯರ್ ಪಿಎಚ್‌ಸಿಒ 6 ಜನರು, ಎಚ್‌ಐಒ 3 ಜನ, ಎಸ್‌ಡಿಎ ಒಂದು ಹುದ್ದೆ ಖಾಲಿ ಇವೆ. ಇರುವ 11 ಜನ ಸಿಬ್ಬಂದಿ ನಿರಂತರ ಸೇವೆಯಲ್ಲಿ ತೊಡಗಿದರೂ ಸಾರ್ವಜನಿಕರನ್ನು ನಿಭಾಯಿಸುವುದು ಕಷ್ಟಸಾಧ್ಯವಾಗಿದೆ.
ಕೊಕಟನೂರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರ ಇಲ್ಲವೇ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಬಾಕಿ ಉಳಿದ ಸಿಬ್ಬಂದಿಗಳನ್ನು ನೇಮಕ ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಹೆಚ್ಚಿನ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ಕೊಕಟನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಕೂಡಲೇ ಅಗತ್ಯವಿರುವ ಸಿಬ್ಬಂದಿ ನೇಮಿಸಬೇಕು.
| ಶಾನವ್ವ ಗುಳಪ್ಪ ಪೂಜಾರಿ ಗ್ರಾಪಂ ಅಧ್ಯಕ್ಷರು ಕೊಕಟನೂರತಾಲೂಕು ವೈದ್ಯಾಧಿಕಾರಿ ಕಡೆಯಿಂದ ಮಾಹಿತಿ ಪಡೆದು ಆದಷ್ಟು ಬೇಗ ಸಿಬ್ಬಂದಿ ನಿಯೋಜನೆಗೆ ಕ್ರಮಕೈಗೊಳ್ಳುವುದರ ಜೊತೆಗೆ ಕೊಕಟನೂರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ಥಾವನೆ ಕಳುಹಿಸಲಾಗುವುದು.
| ಶರಣಪ್ಪ ಗಡೇದ ಡಿಎಚ್‌ಒ ಚಿಕ್ಕೋಡಿ