ಸಿಬಿಎಸ್​ಇ 10ನೇ ತರಗತಿಗೆ 2 ಹಂತದಲ್ಲಿ ಗಣಿತ ಪರೀಕ್ಷೆ?

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್​ಇ) ಹತ್ತನೇ ತರಗತಿ ಪಠ್ಯದಲ್ಲಿ ಎರಡು ಶ್ರೇಣಿಯ ಗಣಿತ ವಿಷಯಗಳನ್ನು ಪರಿಚಯಿಸಲಿದೆ. ವಿವಿಧ ಹಂತದ ವಿದ್ಯಾರ್ಥಿಗಳ ಕಲಿಕೆಯನ್ನು ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಬಿಎಸ್​ಇ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಇರುವ ಗಣಿತ ಪಠ್ಯವನ್ನು ‘ಸ್ಟ್ಯಾಂಡರ್ಡ್’ ಎಂದು ಪರಿಗಣಿಸಲಾಗುವುದು. ಮತ್ತೊಂದು ‘ಬೇಸಿಕ್ – ಈಸಿಯರ್’ ಹೆಸರಿನ ವಿಷಯ ಪರಿಚಯಿಸಲಾಗುವುದು. ಪ್ರಸ್ತುತ ಪಠ್ಯದಿಂದಲೇ ಇದನ್ನು ವಿಂಗಡಿಸಲಾಗುವುದು. ಎರಡು ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಇದರಿಂದಾಗಿ ವಿದ್ಯಾರ್ಥಿಗಳ ಮೇಲಿನ ಕಲಿಕಾ ಹೊರೆ ಕೂಡ ಇಳಿಕೆಯಾಗಲಿದೆ ಎಂದು ಸಿಬಿಎಸ್​ಇ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಗಣಿತ ವಿಷಯಗಳಿಗೆ ಆಂತರಿಕ ಮೌಲ್ಯಮಾಪನ ಒಂದೇ ಇರಲಿದೆ. ಮುಂದಿನ ವರ್ಷದಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *