ಕಲಬುರಗಿ: ಅಹಿಂದ ವರ್ಗದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮೂಲೆಗುಂಪು ಉz್ದೆÃಶಪೂರ್ವಕವಾಗಿ, ವಿನಾಕಾರಣ ಮೂಲೆಗುಂಪು ಮಾಡಲು ರಾಜ್ಯಪಾಲರು ನೋಟೀಸ್ ನೀಡಿ, ದ್ವೇಷದ ರಾಜಕಾರಣ ಮಾಡುತ್ತಿದ್ದು, ಅವರ ಘನತೆಗೆ ಧಕ್ಕೆ ತರುವ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಹೇಳಿದರು.
ತುಳಿತಕ್ಕೆ ಒಳಗಾದ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ಷಡ್ಯಂತ್ರ ಮಾಡಲಾಗುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಚಾರದಲ್ಲಿ ರಾಜ್ಯಪಾಲರು ಕೂಲಂಕುಷವಾಗಿ ಅಧ್ಯಯನ ಮಾಡದೆ ನೋಟಿಸ್ ಜಾರಿ ಮಾಡಿದ್ದು, ಖಂಡನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರದ ಎನ್‌ಡಿಎ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಅಪರಾಧಿ ಹಿನ್ನೆಲೆ ಹೊಂದಿರುವ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಾಹಿಂ ಮನವಿ ಮೆರೆಗೆ ನೋಟಿಸ್ ನೀಡಿದ್ದು, ಅಬ್ರಾಹಿಂ ದಂಧಾಕೋರನಾಗಿದ್ದು, ಆತನನ್ನು ಬಂಧಿಸಬೇಕು. ನೋಟಿಸ್ ಜಾರಿ ಹಿಂಪಡೆಯಬೇಕು. ಇಲ್ಲದಿದ್ದರೆ ನಗರ ಸೇರಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಿಪ್ಪಣ್ಣ ಗುಂಡಗುರ್ತಿ, ಸಾಯಿಬಣ್ಣ ಪೂಜಾರಿ, ಭಗವಂತರಾಯ ಗೌಡ ಪಾಟೀಲ್, ಗಣಪತಿ ಮಿಣಜಗಿ, ಈರಣ್ಣ ಝಳಕಿ ದಂಗಾಪುರ, ನಿರ್ಮಲಾ ಬರ್ಗಾಲಿ, ಕಾಶೀನಾಥ ಮರ್ತೂರ, ಶಿವಲಿಂಗಪ್ಪ ವಗ್ಗಿ, ಮಹೇಶ ಧರಿ, ನಾಗೇಂದ್ರಪ್ಪ ಪೂಜಾರಿ, ಧರ್ಮರಾಜ ಹೇರೂರ ಇತರರಿದ್ದರು.
ಸಿದ್ಧರಾಮಯ್ಯ ಘನತೆಗೆ ಧಕ್ಕೆ ಸಹಿಸಲ್ಲ
ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …
ಬೆಂಗಳೂರು: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…