ಸಿದ್ಧಗಂಗಾ ಮಠಕ್ಕೆ ಬಚ್ಚೇಗೌಡ ಭೇಟಿ

ತುಮಕೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು.

ತಂದೆಯವರ ಕಾಲದಿಂದ ಮಠದ ಗುರುಗಳಿಗೆ ಪೂಜೆ ಸಲ್ಲಿಸಿ, ಒಳ್ಳೆಯ ಕಾರ್ಯ ಆರಂಭಿಸುತ್ತೇವೆ. ರಾಜಕಾರಣದಲ್ಲಿ ಒಳ್ಳೆಯದಾಗಲಿ ಎಂದು ಮಠಕ್ಕೆ ಆಗಮಿಸಿ ಚುನಾವಣೆ ಪ್ರಚಾರ ಆರಂಭಿಸುತ್ತಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಮಠದ ಭಕ್ತರು ಅಪಾರ ಸಂಖ್ಯೆಯಲ್ಲಿದ್ದು, ಇಲ್ಲಿ ಆಶೀರ್ವಾದ ಪಡೆದರೆ ಜನರೂ ಹರಸುತ್ತಾರೆ ಎಂದರು.

ಕಳೆದ ಸಲ ಕಡಿಮೆ ಅಂತರದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಅನುಕಂಪದ ಅಲೆ ಗೆಲುವು ತಂದುಕೊಡಲಿದೆ. ದೇಶಕ್ಕೆ ಮೋದಿ ಅವಶ್ಯಕತೆಯಿದೆ. ದೇಶದ ಉಳಿವಿಗಾಗಿ ಮೋದಿ ಆಯ್ಕೆಗೆ ಜನರು ಬಯಸಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಚ್ಚೇಗೌಡ ಅಲೆಯಿದೆ ಎಂದು ಹೇಳಿದರು.