24.5 C
Bangalore
Sunday, December 8, 2019

ಸಿದ್ದಾಪುರದಲ್ಲಿ ನೀರಿಗೆ ಬರ!

Latest News

ಡಾಬಾದಲ್ಲಿ ಇಟ್ಟಿದ್ದ 40 ಕೆಜಿ ಈರುಳ್ಳಿ ಕದ್ದೊಯ್ದ ಇಬ್ಬರು ಮಹಿಳೆಯರು; ಪೊಲೀಸರಿಗೆ ದೂರು ನೀಡುವುದಿಲ್ಲವೆಂದ ಮಾಲೀಕ

ಮೊಹಾಲಿ: ಈರುಳ್ಳಿ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯ ನಡುವೆ ಈರುಳ್ಳಿ ಕಳ್ಳರೂ ಹೆಚ್ಚಾಗಿದ್ದಾರೆ. ಹಾಗೇ ಪಂಜಾಬ್​ನ ಮೊಹಾಲಿಯಲ್ಲಿ ಇಬ್ಬರು ಮಹಿಳೆಯರು ಸುಮಾರು 40 ಕೆಜಿ ಈರುಳ್ಳಿಯನ್ನು...

ಪಾವಗಡದ ಆಸ್ಪತ್ರೆ ಮುಂಭಾಗ ಮೃತನ ಸಂಬಂಧಿಕರ ಪ್ರತಿಭಟನೆ

ಪಾವಗಡ: ಆಕಸ್ಮಿಕ ಬೆಂಕಿ ಅವಘಡದಲ್ಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ನವ ವಿವಾಹಿತ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎ.ಎಚ್.ಪಾಳ್ಯದ ನವೀನ್(23) ಮೃತಪಟ್ಟಿದ್ದು, ಸಾವಿಗೆ ವೈದ್ಯರ...

ಸಾಸಲು ಗ್ರಾಮದಲ್ಲಿ ತ್ಯಾಜ್ಯ ನೀರಿನ ಸಂಕಷ್ಟ

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ವಿದ್ಯಾರ್ಥಿಗಳು ಕೊಳಚೆ ನೀರಲ್ಲೇ ಸಂಚರಿಸುವಂತಾಗಿದೆ. ಗ್ರಾಮದ ಅಣ್ಣಯ್ಯನ ಪಾಳ್ಯದ ತ್ಯಾಜ್ಯ ನೀರು ಶಾಲಾ...

ರಸ್ತೆಯಲ್ಲಿ ಬೇಡ ರಾಗಿ ಒಕ್ಕಣೆ

ಶಿವರಾಜ ಎಂ.ಬೆಂಗಳೂರು: ಸತತ ಬರದಿಂದ ಕಂಗೆಟ್ಟಿದ್ದ ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ರಾಗಿ ಸಲಿನಿಂದ ‘ಸುಗ್ಗಿ’ ಸಂಭ್ರಮ ಮನೆ ಮಾಡಿದೆ. ಈಗಾಗಲೇ ರಾಗಿ ಕಟಾವು...

ಮಹನೀಯರ ಚರಿತ್ರೆ ಅರಿವಿಗೆ ಛದ್ಮವೇಷ ಪೂರಕ

ವಿಜಯಪುರ: ಮಹಾತ್ಮ ಗಾಂಧಿ, ನೆಹರು, ಭಗತ್‌ಸಿಂಗ್, ಶ್ರೀರಾಮ, ಅಂಬೇಡ್ಕರ್ ಸೇರಿ ಇತರ ಮಹನೀಯರ ವೇಷ-ಭೂಷಣವನ್ನು ಮಕ್ಕಳು ಧರಿಸುವುದರಿಂದ ಅವರ ಜೀವನ ಚರಿತ್ರೆ, ವ್ಯಕ್ತಿತ್ವ, ಅರಿಯಲು ಹಾಗೂ...

ವಿಶೇಷ ವರದಿ ಸಿದ್ದಾಪುರ
ಘಟ್ಟದ ಮೇಲಿನ ತಾಲೂಕುಗಳ ಪೈಕಿ ಹೆಚ್ಚು ಮಳೆ ಬೀಳುವ ಸಿದ್ದಾಪುರ ತಾಲೂಕಿನಲ್ಲಿ ಈ ವರ್ಷ ಹಿಂದೆಂದೂ ಕಾಣದಂತಹ ನೀರಿನ ಬರ ಎದುರಾಗಿದೆ. ಪಟ್ಟಣದಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಪಟ್ಟಣಕ್ಕೆ ನೀರು ಪೂರೈಸುತ್ತಿರುವ ಅರೆಂದೂರು ಹಳ್ಳದಲ್ಲಿ ನೀರು ತಳಮಟ್ಟಕ್ಕೆ ಬಂದಿದೆ. ಜತೆಗೆ, ಪಟ್ಟಣದಲ್ಲಿ 115 ತೆರೆದ ಸಾರ್ವಜನಿಕ ಬಾವಿಗಳಿದ್ದು, ಅವುಗಳಲ್ಲಿಯೂ ನೀರು ಪಾತಾಳಕ್ಕಿಳಿದಿದೆ. 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಿದ್ದಾಪುರದಲ್ಲಿ ಈಗ ನೀರಿನ ಕೊರತೆ ಕಂಡು ಬರುತ್ತಿರುವುದರಿಂದ ಪಟ್ಟಣ ಪಂಚಾಯಿತಿಯವರು ಕೆಲ ವಾರ್ಡ್ ಗಳಿಗೆ ವಾರಕ್ಕೊಮ್ಮೆ, ಇನ್ನು ಕೆಲ ವಾರ್ಡ್ ಗಳಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ.

ಪಟ್ಟಣದ ಹೊಸೂರು ಜನತಾ ಕಾಲನಿ, ಗುಡ್ಡೇಕೇರಿ, ಎಲ್.ಬಿ. ನಗರ, ರವೀಂದ್ರನಗರದ ಭಾಗಗಳು ಗುಡ್ಡದ ಮೇಲಿರುವುದರಿಂದ ಬಾವಿ ತೆಗೆದರೂ ನೀರು ಬರದಿರುವುದರಿಂದ ಇವರೆಲ್ಲ ಪಪಂ ಪೂರೈಸುವ ನೀರನ್ನೇ ಅವಲಂಬಿಸಿದ್ದಾರೆ.

ಅರೆಂದೂರು ಹಳ್ಳದ ಮೇಲ್ಭಾಗದಲ್ಲಿ ನೀರು ಸಂಗ್ರಹಣೆಗಾಗಿ ಪಪಂ ಡ್ಯಾಂ ನಿರ್ವಿುಸಿದೆ. ಇಲ್ಲಿಯ ನೀರನ್ನು ಅರೆಂದೂರಿನ ರೈತರು ತಮ್ಮ ಬೆಳೆಗಳಿಗೆ ಉಪಯೋಗಿಸುತ್ತಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ ಎಂದು ಪಪಂ ಅಧಿಕಾರಿಗಳು ಹೇಳುತ್ತಾರೆ.

ರೈತರ ಅಳಲು: ಮಳೆಗಾಲದಲ್ಲಿ ಹಳ್ಳಗಳು ತುಂಬಿ ಹರಿದು ಬೆಳೆಗಳೆಲ್ಲ ನಾಶವಾಗುತ್ತಿವೆ. ಅವುಗಳಿಗೆ ಸಮರ್ಪಕವಾದ ಪರಿಹಾರ ಇಲ್ಲ. ಬೇಸಿಗೆಯಲ್ಲಿ ಬೆಳೆ ಬೆಳೆಯಲು ನಮ್ಮೂರಿನ ಹಳ್ಳದ ನೀರನ್ನು ಬಳಸುವುದಕ್ಕೂ ಪಪಂ ತೊಂದರೆ ನೀಡುತ್ತಿದೆ. ನಾಡಿಗೆ ಅನ್ನ ನೀಡುವ ರೈತರ ಬೆಳೆಗಳಿಗೆ ನೀರಿಲ್ಲ. ಆದರೆ, ಪಟ್ಟಣದ ಜನತೆಗೆ ನೀರು ಪೂರೈಸುವುದೇ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮುಖ್ಯ ಉದ್ದೇಶವಾಗಿದೆ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೂರದೃಷ್ಟಿ ಇಲ್ಲದ ಯೋಜನೆ: ಕಳೆದ 28 ವರ್ಷದ ಹಿಂದೆ ಅರೆಂದೂರು ಹಳ್ಳಕ್ಕೆ ಡ್ಯಾಂ ನಿರ್ವಿುಸಿ ಸಿದ್ದಾಪುರ ಪಟ್ಟಣಕ್ಕೆ ನೀರು ಸರಬರಾಜು ಯೋಜನೆ ಆರಂಭಿಸಲಾಗಿದೆ. ಅಂದಿನ ಜನಸಂಖ್ಯೆ ಆಧರಿಸಿ ಯೋಜನೆ ಪ್ರಾರಂಬಿಸಿದ್ದಾರೆಯೇ ಹೊರತು ಯಾವುದೇ ದೂರದೃಷ್ಟಿ ಹೊಂದಿಲ್ಲ. ಹೀಗಾಗಿ, ಈಗ ನೀರಿಗಾಗಿ ಹಪ ಹಪಿಸುವಂತಾಗಿದೆ.

ನದಿ ನೀರಿಗೆ ಯೋಜನೆ ರೂಪಿಸಿ: ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಪಟ್ಟಣಕ್ಕೆ ಆಗಮಿಸಿದ್ದ ವೇಳೆ, ಶರಾವತಿ ನದಿಯಿಂದ 32 ಕಿ.ಮೀ. ದೂರವಿರುವ ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಹೀಗಿರು ವಾಗ 17 ಕಿ.ಮೀ. ಅಂತರವಿರುವ ಸಿದ್ದಾಪುರಕ್ಕೆ ನೀರು ತರಲು ಆಗುವುದಿಲ್ಲವೇ? ಈ ಕುರಿತು ಕ್ರಿಯಾಯೋಜನೆ ಮಾಡಿ ಕಳುಹಿಸುವಂತೆ ಪಪಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಹಾಗೂ ಅಂದಿನ ಪಪಂ ಆಡಳಿತ ನಿರ್ಲಕ್ಷ್ಯ ವಹಿಸಿತು ಎಂದು ನಾಗರಿಕರು ಆಡಿಕೊಳ್ಳುತ್ತಿ್ತ್ದಾರೆ.

ಚುನಾವಣೆ ಬಂದಾಗ ರಾಜಕೀಯ ಮುಖಂಡರು ಮನೆಗೆ ಬಂದು ಭರವಸೆ ನೀಡುತ್ತಾರೆ. ಈಗ ನಮ್ಮ ಸಮಸ್ಯೆ ಆಲಿಸುವವರು ಯಾರೂ ಇಲ್ಲ. ಮೂಲಸೌಕರ್ಯ ಕೊಡುವುದಕ್ಕೂ ಪಪಂ ನಿರ್ಲಕ್ಷ್ಯ ಮಾಡುತ್ತಿದೆ. ನಮ್ಮ ವಾರ್ಡ್​ಗಳಿಗೆ ತಿಂಗಳಿಗೆ ಒಂದೆರಡು ದಿನ ನೀರು ಬಿಡುತ್ತಾರೆ. ಜನತೆಗೆ ತೊಂದರೆ ಆಗದಂತೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.| ರೀಟಾ ಫರ್ನಾಂಡಿಸ್ ಹೊಸೂರು ನಿವಾಸಿ

ಅರೆಂದೂರಿನ ರೈತರ ಮನವೊಲಿಸಿ ಅಲ್ಲಿಯ ನೀರು ಸಂಗ್ರಹಣೆ ನಾಲಾದ ಒಂದು ಗೇಟ್ ತೆಗೆದು ಪಟ್ಟಣಕ್ಕೆ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಇನ್ನೂ ಎರಡು ಗೇಟ್​ಗಳಿದ್ದು, ಅವುಗಳನ್ನು ಅವಶ್ಯಕತೆಗೆ ತಕ್ಕಂತೆ ತೆಗೆಯಲಾಗುವುದು. ಇನ್ನು ವಾರದಲ್ಲಿ ಎರಡು ದಿನ ನೀರು ಬಿಡಲಾಗುತ್ತದೆ. ಜನರು ನೀರನ್ನು ಮಿತವಾಗಿ ಬಳಸಬೇಕು. | ಸತೀಶ ಗುಡ್ಡೆ ಪಪಂ ಮುಖ್ಯಾಧಿಕಾರಿ

ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ತೊಂದರೆ ಪಡುವ ಸ್ಥಿತಿ ಉಂಟಾಗಿದೆ. ಆರೇಳು ದಿನಕ್ಕೊಮ್ಮೆ ನೀರು ಬಿಟ್ಟರೆ ಜನರ ಸ್ಥಿತಿ ಏನಾಗಬಹುದು? ಸರಿಯಾಗಿ ನೀರು ಬಿಡಬೇಕು. ಇಲ್ಲದಿದ್ದರೆ ಪಪಂ ಎದುರು ಜನರೊಂದಿಗೆ ಸೇರಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕಾಗುತ್ತದೆ.
| ವಾಣಿ ರಮೇಶ ಬೇಡರ ಹೊಸೂರು ಎಲ್.ಬಿ. ನಗರ ನಿವಾಸಿ, ಪಪಂ ಮಾಜಿ ಸದಸ್ಯೆ

Stay connected

278,749FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...