ಸಿದ್ದರಾಮಯ್ಯ ರೋಡ್ ಶೋ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಸಂಜೆ ಬೆಟದೂರ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

ತೆರೆದ ವಾಹನದಲ್ಲಿ ನಿಂತು ಗ್ರಾಮದಲ್ಲಿ ಸಂಚರಿಸಿದ ಅವರು, ಕುಂದಗೋಳ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕುಸುಮಾವತಿ ಶಿವಳ್ಳಿ ಅವರಿಗೆ ಮತ ನೀಡಲು ಕೋರಿದರು. ಇದಕ್ಕೂ ಮೊದಲು ಅವರು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಪ್ರತಿಮೆಗೆ ನಮನ ಸಲ್ಲಿಸಿದರು. ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಸಚಿವ ಶಿವಶಂಕರ ರಡ್ಡಿ, ಮಾಜಿ ಸಚಿವರಾದ ರಮಾನಾಥ ರೈ, ಮೋಟಮ್ಮ, ಶಾಸಕ ಡಾ. ಯತೀಂದ್ರ, ಇತರರು ಇದ್ದರು.