ಬೆಂಗಳೂರು: ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಎಂದು ಸಿದ್ದರಾಮಯ್ಯ, ಡಿಕೆಶಿ ಹೇಳಬೇಕು. ಆದರೆ ನಮಗಿರುವ ಮಾಹಿತಿ, ಸಿದ್ದರಾಮಯ್ಯ ಅವಧಿ ಮುಗೀತಿದೆ. ಹಾಗಾಗಿ ಸಿದ್ದರಾಮಯ್ಯ ದಾಳ ಉರುಳಿಸುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಬೇರೆ ಬೇರೆ ಸಚಿವರ ಮೂಲಕ ಡಿನ್ನರ್ ಪಾಲಿಟಿಕ್ಸ್ ಮಾಡಿಸುತ್ತಿದ್ದಾರೆ. ಅವರ ಹೈಕಮಾಂಡ್ ಏನೇ ಹೇಳಿದರೂ ಡಿನ್ನರ್ ಪಾಲಿಟಿಕ್ಸೃ್ ಮುಂದುವರೆಸುತ್ತಾರೆ. ಅಧಿಕಾರ ಒದ್ದು ಕಿತ್ಕೋಬೇಕು ಅನ್ನುವ ದಾಳವನ್ನೇ ಸಿದ್ದರಾಮಯ್ಯ ಮುಂದುವರೆಸಿದ್ದಾರೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ ಎಂದರು.
TAGGED:Siddaramaiah tenure end