Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಸಿಡಿಪಿಒ ಕಾರ್ಯವೈಖರಿಗೆ ಆಕ್ರೋಶ

Friday, 10.08.2018, 10:57 PM       No Comments

ಶಿರಹಟ್ಟಿ: ಅಂಗನವಾಡಿ ಕೇಂದ್ರಗಳ ಅವ್ಯವಸ್ಥೆ ಕುರಿತು ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಸಿಡಿಪಿಒ ವಿರುದ್ಧ ಸದಸ್ಯರು ವಾಗ್ದಾಳಿ ನಡೆಸಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ‘ತಾಲೂಕಿನ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸರಿಯಾದ ಆಹಾರ, ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಸ್ವಚ್ಛತೆ ಮರೀಚಿಕೆಯಾಗಿದ್ದು, ಉತ್ತಮ ಶಿಕ್ಷಣ ಸೇರಿ ಇತರೆ ಸೌಲಭ್ಯಗಳಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಪರಿಸ್ಥಿತಿ ಹದಗೆಟ್ಟಿದ್ದರೂ ಸಿಡಿಪಿಒ ಸಂಬಂಧಿಸಿದ ಮೇಲ್ವಿಚಾರಕರ ಮೇಲೆ ಶಿಸ್ತು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಅಲ್ಲದೆ, ತಾಪಂ ಸಭೆಯಲ್ಲಿ ಸಿಡಿಪಿಒ ಮುಖ ದರ್ಶನವೇ ಆಗಿಲ್ಲ. ಒಂದಿಲ್ಲೊಂದು ನೆಪ ಹೇಳಿ ಕಚೇರಿ ಸಹಾಯಕರಿಗೆ ಹಾಜರಾಗಲು ತಿಳಿಸುತ್ತಾರೆ. ಹಳ್ಳಿಗಳಲ್ಲಿ ಕಾರ್ಯಕರ್ತೆಯರ ಮನೆಗಳಲ್ಲಿ ಅಂಗನವಾಡಿಯ ಅಡುಗೆ ಪಾತ್ರೆಗಳು ಕಾಣಿಸುತ್ತವೆ. ಸಹಾಯಕಿಯರನ್ನು ತಮ್ಮ ಮನೆ ಕೆಲಸಕ್ಕೆ ಬಳಸಿಕೊಂಡು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಮಕ್ಕಳಿಗೆ ಸರಿಯಾಗಿ ಮೊಟ್ಟೆ ನೀಡುತ್ತಿಲ್ಲ. ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಇಲಾಖೆಯ ಮೇಲ್ವಿಚಾರಕಿಯರು ಒಂದು ದಿನವೂ ಹಳ್ಳಿಗೆ ಹೋಗಿ ಅಂಗನವಾಡಿಗಳ ಸ್ಥಿತಿಗತಿ ನೋಡಿಲ್ಲ. ಕಚೇರಿಯಲ್ಲಿ ಕುಳಿತು ವರದಿ ಸಿದ್ಧಪಡಿಸುತ್ತಾರೆ. ನನ್ನ ಜೊತೆ ಬಂದರೆ ನಾನೇ ಹಿಡಿದುಕೊಡುತ್ತೇನೆ ಎಂದು ಕೊಂಚಿಗೇರಿ ಆರೋಪಿಸಿದರು. ಅದಕ್ಕೆ ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಕೂಡ ದನಿಗೂಡಿಸಿದರು. ‘ಇದರಲ್ಲಿ ಸತ್ಯವಿದೆ. ನಾನು ಕೂಡ ಹಲವಾರು ಸಲ ಈ ಬಗೆಗೆ ಹೇಳಿದ್ದೇನೆ’ ಎಂದರು.

ಯೋಜನೆ ಲಾಭ ರೈತರಿಗೆ ತಲುಪಲಿ: ಕೃಷಿ ಸಹಾಯಕ ಚಂದ್ರಶೇಖರ ನರಸಮ್ಮನವರ ಕೃಷಿ ಇಲಾಖೆಯ ಮಾಹಿತಿ ನೀಡುತ್ತಿದಂತೆ ಮಧ್ಯಪ್ರವೇಶಿಸಿದ, ತಾಪಂ ಇಒ ಆರ್.ವೈ. ಗುರಿಕಾರ, ‘ಪ್ರತಿ ಸಭೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿಕೊಂಡು ಬಂದ ಹಾಳೆ ಕೈಯಲ್ಲಿ ಹಿಡಿದು ಗಿಳಿಪಾಠ ಒಪ್ಪಿಸುವುದೇ ಕಾಯಕವಾಗಿದೆ. ನಿಮ್ಮ ಇಲಾಖೆಗೆ ಸಂಬಂಧಿಸಿದ ಕೇಂದ್ರ ಪುರಸ್ಕೃತ, ರಾಜ್ಯ ವಲಯ ಮತ್ತು ಜಿಪಂ ಯೋಜನೆ ಅನುಷ್ಠಾನದ ಬಗೆಗೆ ಸದಸ್ಯರಿಗೆ ಪ್ರತ್ಯೇಕ ಮಾಹಿತಿ ನೀಡಿ ಎಂದು ಹೇಳಿದರೂ ಬೇಜವಾಬ್ದಾರಿ ತೋರುತ್ತಿದ್ದೀರಿ. ಅಲ್ಲದೆ, ರೈತ ಪರ ಯೋಜನೆಗಳನ್ನು ಪ್ರಾತ್ಯಕ್ಷಿಕೆ, ಪ್ರಚಾರದ ಮೂಲಕ ರೈತರಿಗೆ ಮಾಹಿತಿ ನೀಡಿದಾದ ಅದರ ಲಾಭವಾಗುತ್ತದೆ. ಸರ್ಕಾರದ ಆಸೆ ಈಡೇರುತ್ತದೆ ಎಂದರು.

ಶುದ್ಧ ನೀರಿನ ಘಟಕ, ಹದಗೆಟ್ಟ ರಸ್ತೆಗಳ ಸುಧಾರಣೆ, ಮಕ್ಕಳಿಗೆ ಸರಿಯಾಗಿ ಬಿಸಿಯೂಟ ವಿತರಣೆ, ಸಾಮಾಜಿಕ ಅರಣ್ಯ ಇಲಾಖೆ ಯೋಜನೆಯಡಿ ನೆಟ್ಟ ಸಸಿಗಳ ನಿರ್ವಹಣೆ ಹಾಗೂ ಭೂಸೇನಾ ನಿಗಮದ ಕಾಮಗಾರಿಗಳ ಕುರಿತು ರ್ಚಚಿಸಲಾಯಿತು.

ಮುಂದಿನ ಸಭೆಗೆ ಖುದ್ದಾಗಿ ಬರಲಿ: ಸಿಡಿಪಿಒ ಅವರನ್ನು ಕರೆದುಕೊಂಡು ಶಿರಹಟ್ಟಿಯಲ್ಲಿನ ಆಹಾರ ದಾಸ್ತಾನು ಗೋದಾಮಿಗೆ ಭೇಟಿ ನೀಡಿದಾಗ ಅಲ್ಲಿಯ ವ್ಯವಸ್ಥೆ ಕಣ್ಣಿಗೆ ರಾಚುವಂತಿತ್ತು. ಗೋದಾಮಿನ ತುಂಬ ಇಲಿ, ಹೆಗ್ಗಣಗಳ ಓಡಾಟ, ಮಕ್ಕಳಿಗೆ ನೀಡಬೇಕಾದ ಆಹಾರದ ಚೀಲಗಳು ಹರಿದು ವಸ್ತುಗಳು ಚೆಲ್ಲಾಪಿಲ್ಲಿಯಾದ ದೃಶ್ಯ ಕಂಡು ಬಂದಿತ್ತು. ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಪ್ಪಣ್ಣ ಕೊಂಚಿಗೇರಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ಗುರಿಕಾರ, ‘ಮುಂದಿನ ಸಭೆಗೆ ಖುದ್ದಾಗಿ ಸಿಡಿಪಿಒ ಬರಬೇಕು’ ಎಂದರು.

Leave a Reply

Your email address will not be published. Required fields are marked *

Back To Top