ಸಿಗಂದೂರು ಘಟನೆಯಿಂದ ಈಡಿಗ ಸಮಾಜಕ್ಕೆ ನೋವು

ಸೊರಬ: ಸಿಗಂದೂರು ಶ್ರೀಕ್ಷೇತ್ರದಲ್ಲಿ ನಡೆದಿರುವ ಘಟನೆಯಿಂದ ಈಡಿಗ ಸಮಾಜಕ್ಕೆ ನೋವುಂಟಾಗಿದೆ ಎಂದು ತಾಲೂಕು ಆರ್ಯ ಈಡಿಗ (ದೀವರ) ಸಂಘದ ನಿರ್ದೇಶಕ ಹಾಗೂ ಹಿರಿಯ ವಕೀಲ ವೈ.ಜಿ.ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲೂಕು ಆರ್ಯ ಈಡಿಗ(ದೀವರ) ಸಂಘ ಭಾನುವಾರ ಪಟ್ಟಣದಲ್ಲಿ ಕರೆದಿದ್ದ ಶ್ರೀ ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಅರ್ಚಕರ ವರ್ತನೆ ವಿರುದ್ಧದ ಖಂಡನಾ ಸಭೆಯಲ್ಲಿ ಮಾತನಾಡಿ, ಮಲೆನಾಡಿನ ಪುಣ್ಯಕ್ಷೇತ್ರ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಅರ್ಚಕರು ಭಕ್ತರ ಮೇಲೆ ಗೂಂಡಾಗಿರಿ ತೋರಿರá-ವುದು ಖಂಡನೀಯ ಎಂದರು.

ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರ ಮನೆತನದ ದೇವರನ್ನು ಪೂಜಿಸಲು ನೇಮಕ ಮಾಡಿದ ಅರ್ಚಕರು ಇಂದು ದೇವಸ್ಥಾನದ ಮುಖ್ಯ ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸá-ತ್ತಿರುವುದರ ಹಿಂದೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕು ಪರೋಕ್ಷವಾಗಿ ಗೋಚರಿಸುತ್ತಿದೆ. ಭಕ್ತರ ಮೇಲೆ ಅರ್ಚಕ ಮತ್ತು ಅವರ ಸಹೋದರರ ಗೂಂಡಾಗಿರಿಯನ್ನು ಸಮಾಜ ಸಹಿಸದು ಎಂದು ಎಚ್ಚರಿಸಿದರು.

ರಾಮಪ್ಪ ಅವರ ಆಡಳಿತ ಮತ್ತು ಪರಿಶ್ರಮದಿಂದ ಕ್ಷೇತ್ರ ಅಭಿವೃದ್ಧಿಯಾಗಿ ಕೆಲವೇ ವರ್ಷಗಳಲ್ಲಿ ನಾಡಿಗೇ ಪ್ರಸಿದ್ಧಿ ಪಡೆಯುವಂತಾಯಿತು. ಇದನ್ನು ಸಹಿಸದ ಕೆಲವರು ಮುಜರಾಯಿ ಇಲಾಖೆಗೆ ಸೇರಿಸಬೇಕೆಂಬ ಕುತಂತ್ರ ರೂಪಿಸುತ್ತಿದ್ದಾರೆ. ಸಮಾಜದ ಬೆಂಬಲದಿಂದ ರಾಜಕೀಯ ಲಾಭ ಪಡೆದ ಜನಪ್ರತಿನಿಧಿಗಳು ಕ್ಷೇತ್ರದ ಉಳಿವಿಗಾಗಿ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಶೇಖರ್ ಮಾತನಾಡಿ, ರಾಮಪ್ಪ ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸಗಳಾದರೆ ಈಡಿಗ ಸಮುದಾಯ ಒಗ್ಗಟ್ಟಿನಿಂದ ಎದುರಿಸುವ ಜತೆಗೆ ರಾಮಪ್ಪ ಮತ್ತು ಅವರ ಕುಟುಂಬದ ಜತೆಗಿರಲಿದೆ. ಗೂಂಡಾಗಿರಿ ನಡೆಸಿದ ಅರ್ಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಮುಖರಾದ ಗಣಪತಿ ಹುಲ್ತಿಕೊಪ್ಪ, ಎನ್.ಕೆ.ಲಿಂಗೇಶ್, ಪರಶುರಾಮ ಸಣ್ಣಬೈಲು, ಮಹಾದೇವಪ್ಪ, ನಾಗರಾಜ ಚಿಕ್ಕಸವಿ, ಹನುಮಂತಪ್ಪ ಯಲಸಿ, ಪಾಣಿ ಡಾಕಪ್ಪ, ಬಿ.ಕೆ.ಭಾಸ್ಕರ್ ಬರಗಿ, ನಾಗರಾಜ್ ಕೈಸೋಡಿ, ನಾಗರಾಜ್, ಬಲೀಂದ್ರ ನಾಯ್್ಕ ಕುಮಾರ್ ಕಣ್ಣೂರು ಇತರರಿದ್ದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…