ಸಿಎಎ ವಿರೋಧಿಸುವವರು ಅನಾಗರಿಕರು

blank

ಮಡಿಕೇರಿ: ನಾಗರಿಕರು ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಿಸುತ್ತಿದ್ದಾರೆ. ಆದರೆ, ಅನಾಗರಿಕರು ವಿರೋಧಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೆಎನ್‌ಯು, ಜಾಮಿಯಾ, ಅಲಿಘಡ ವಿವಿಯಲ್ಲಿರುವವರು ಸಿಎಎಗೆ ವಿರೋಧ ವ್ಯಕ್ತಪಡಿಸುತ್ತ ಸುಶಿಕ್ಷಿತ ಅನಾಗರಿಕರ ರೀತಿ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಯಾವುದೇ ಕಾಯ್ದೆಯನ್ನು ಜಾರಿಗೆ ತಂದರೂ ವಿರೋಧ ಮಾಡುವವರಿದ್ದಾರೆ. ದೇಶದ ಬಗ್ಗೆ ಕಮ್ಮಿ ನಿಷ್ಠೆ ಹೊಂದಿರುವ ಕಮ್ಯೂನಿಸ್ಟರು, ಬುದ್ಧಿ ಜೀವಿಗಳೆಂದು ಹೇಳುವ ಸುದ್ದಿ ಜೀವಿಗಳು ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದಿರುವ ಮೋದಿ- ಅಮಿತ್ ಷಾ ಅವರಿಬ್ಬರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಇದಾಗಬೇಕು. ಭಯೋತ್ಪಾದಕರನ್ನು ಮೆಚ್ಚುವವರು ಮಾತ್ರ ಮೋದಿಯನ್ನು ಇಷ್ಟ ಪಡುತ್ತಿಲ್ಲ ಎಂದರು.

ಕಾಂಗ್ರೆಸ್ ಹಾಗೂ ಪಾಕಿಸ್ತಾನ ನಾಯಕರು ಒಂದೇ ರೀತಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಭಾರತೀಯರಾಗಲು ಲಾಯಕ್ ಇಲ್ಲ. ಅವರು ಪಾಕಿಸ್ತಾನ ಕಾಂಗ್ರೆಸ್ ನಾಯಕರೆಂದು ಕಿಡಿಕಾರಿದರು. 370ನೇ ವಿಧಿ, ತ್ರಿವಳಿ ತಲಾಕ್ ಕೈಬಿಟ್ಟಿರುವುದು, ಶ್ರೀರಾಮಮಂದಿರ ನಿರ್ಮಾಣ ಹಾಗೂ ಸಿಎಎ ತಿದ್ದುಪಡಿ ಬಗ್ಗೆ ಕಾಂಗ್ರೆಸ್ ಮತ್ತು ಪಾಕಿಸ್ತಾನ ‘ನಾಯಿ’ಕರು ಒಂದೇ ರೀತಿ ಪ್ರತಿಕಿಯೆ ನೀಡುತ್ತಿದ್ದಾರೆಂದು ಟೀಕಿಸಿದರು.

ಕಾಂಗ್ರೆಸ್ಸಿಗೆ ಮತ ಹಾಕಲು ಮಾತ್ರ ಹುಟ್ಟಿದ್ದೇವೆಂದು ಮುಸ್ಲಿಮರು ಅಂದುಕೊಳ್ಳಬಾರದು. ಕಾಂಗ್ರೆಸ್ ಮಾತು ಕೇಳುವುದು ಅಪರಾಧ. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ರೀತಿ ಮಾದರಿಯಾಗಬೇಕ್ಕಿದ್ದರೆ ಮುಸ್ಲಿಮರು ಯಾವುದು ಸರಿ-ತಪ್ಪು ಎಂದು ಯೋಚಿಸಬೇಕು. ಸಿಎಎ ಸಂವಿಧಾನ ವಿರೋಧಿಯಲ್ಲ. ಮಾನವೀಯ ಕಾನೂನು ಎಂದು ರವಿಕುಮಾರ್ ಬಣ್ಣಿಸಿದರು.

ದೇಶದ ಯಾವುದೇ ಮುಸ್ಲಿಂಗೆ ತೊಂದರೆ ಇಲ್ಲ
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿ ಜನಿಸಿರುವ ಒಬ್ಬನೇ ಒಬ್ಬ ಮುಸ್ಲಿಂಗೆ ತೊಂದರೆ ಉಂಟು ಮಾಡಿದ್ದಲ್ಲಿ ತನ್ನ ಎಲ್ಲ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಘೋಷಿಸಿದರು.

ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ಚನ್ನಾಗಿ ಗೊತ್ತಿದೆ. ಹೀಗಿದ್ದರೂ, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಬೇಕೆಂಬ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಟೀಕಿಸಿದರು.

ಮುಸ್ಲಿಮರಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಮುಸ್ಲಿಮರನ್ನು ದೇಶದಿಂದ ಹೊರಗೆ ಕಳುಹಿಸಲಾಗುತ್ತದೆ. ಜೈಲಿಗೆ ಹಾಕುತ್ತಾರೆಂದು ಹೆದರಿಸಲಾಗುತ್ತಿದೆ. ಬಿಜೆಪಿ ವಿರುದ್ಧ ಒಂದಾಗಲು ಅತೃಪ್ತ ಆತ್ಮಗಳು ಕಾಯುತ್ತಿದ್ದವು. ದೇಶದಲ್ಲಿರುವ ಯಾರಿಗೂ ಕಾಯ್ದೆಯಿಂದ ತೊಂದರೆ ಆಗುವುದಿಲ್ಲ. ಪರಕೀಯರ ಬಗ್ಗೆ ನಮಗೆ ಏಕೆ ಕಾಳಜಿ. ಹಾರಾಟ-ಚೀರಾಟ ಎಷ್ಟೇ ಇದ್ದ್ಟಖಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂದು ರಹೀಂ ಉಚ್ಚಿಲ್ ಹೇಳಿದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…