ಸಿಎಂ ಹೇಳಿಕೆ ತೆರೆದಿಟ್ಟ ಸಮ್ಮಿಶ್ರ ಸತ್ಯ

ಶಿವಮೊಗ್ಗ: ಕಾಂಗ್ರೆಸ್ ಕಪಿಮುಷ್ಟಿಯಲ್ಲಿದ್ದೇನೆ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ಇನ್ನೂ ಉಸಿರುಗಟ್ಟುವ ವಾತಾವರಣವಿದೆ ಎಂಬುದು ಖಚಿತವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು. ಹಗ್ಗದ ಮೇಲೆ ನಡೆಯುತ್ತಿದ್ದೇನೆಂದು ಸ್ವತಃ ಸಿಎಂ ಜೆಡಿಎಲ್​ಪಿ ಸಭೆಯಲ್ಲಿ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಒಬ್ಬ ಸಿಎಂ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡದಷ್ಟು ಗೊಂದಲ, ಒತ್ತಡಗಳಿವೆ ಎಂದು ಹೇಳಿದರೆ ಸರ್ಕಾರದಲ್ಲಿ ಎಂತಹ ವಾತಾವರಣವಿದೆ ಎಂಬುದನ್ನು ಜನರೇ ತೀರ್ವನಿಸಬೇಕಿದೆ ಎಂದು ತಿಳಿಸಿದರು.

ಮೇಲ್ವರ್ಗದವರಿಗೆ ಶೈಕ್ಷಣಿಕ ಹಾಗೂ ಸರ್ಕಾರಿ ನೌಕರಿ ಹುದ್ದೆಗೆ ಶೇ.10 ಮೀಸಲಾತಿ ನೀಡಿರುವ ಪ್ರಧಾನಿ ಮೋದಿ ಕಾರ್ಯ ಸ್ವಾಗತಾರ್ಹ. ಕೇಂದ್ರ ಸರ್ಕಾರ ಫೆ.1ರ ಬಜೆಟ್​ನಲ್ಲಿ ದೇಶದ ಜನತೆಗೆ ಮತ್ತಷ್ಟು ಉತ್ತಮ ಯೋಜನೆಗಳನ್ನು ಪ್ರಕಟಿಸಲಿದೆ.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ

Leave a Reply

Your email address will not be published. Required fields are marked *