ಸಿಎಂ ಅಧಿಕಾರ ದುರುಪಯೋಗದ ಆರೋಪ

blank

ಚಿತ್ರದುರ್ಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿ ಕುಲಾಧಿಪತಿ ಹುದ್ದೆಗೆ ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ನೇಮಿಸುವ ರಾಜ್ಯಸರ್ಕಾರದ ನಿರ್ಧಾರ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯಗಳು ಶಿಕ್ಷಣದ ಭಾಗವಾಗಬೇಕೇ ಹೊರತು, ರಾಜಕಾರಣದ ಕೇಂದ್ರಗಳಾಗಬಾರದೆಂಬ ಉದ್ದೇಶದಿಂದ ಸಾಂವಿಧಾನಿಕ ಹುದ್ದೆಯಾದ ವಿವಿಗಳ ಕುಲಾಧಿಪತಿ ಹುದ್ದೆಗೆ ರಾಜ್ಯಪಾಲರನ್ನು ನೇಮಿಸಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ನ. 27ರಂದು ನಡೆಸಿದ ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಕುಲಾಧಿಪತಿ ಹುದ್ದೆಗೆ ಮುಖ್ಯಮಂತ್ರಿ ನೇಮಿಸಲು ನಿರ್ಧರಿಸಿದೆ.
ಇದರಿಂದ ವಿಶ್ವವಿದ್ಯಾಲಯಗಳು ರಾಜಕೀಯ ತಾಣವಾಗಿ ಪರಿವರ್ತನೆಯಾಗುವ ಎಲ್ಲ ಲಕ್ಷಗಳಿವೆ ಎಂದು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ನಡೆ ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವೇಷದ ರಾಜಕಾರಣ ಮಾಡುತ್ತಿರುವಂತೆ ಕಾಣುತ್ತಿದೆ. ಮುಡಾ ಹಗರಣದಲ್ಲಿ ಪ್ರಾಸಿ ಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ವಿರುದ್ಧ ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕೆ ಅಧಿಕಾರ ದುರುಪಯೋಗಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಕನಕರಾಜ್ ಕೋಡಿಹಳ್ಳಿ, ಗೋಪಿ, ಆದರ್ಶ, ಚಂದನಾ, ತಿಪ್ಪೇಶ್, ಧನಂಜಯ, ರಾಜು, ಸಂಜು, ಸಂಜಯ್ ಇತರರಿದ್ದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…