ಸಿಇಟಿ, ನೀಟ್ ತರಬೇತಿ ಸದ್ಬಳಕೆಯಾಗಲಿ

1 Min Read
ಸಿಇಟಿ, ನೀಟ್ ತರಬೇತಿ ಸದ್ಬಳಕೆಯಾಗಲಿ

ತೀರ್ಥಹಳ್ಳಿ: ಕರೊನಾ ಸಂಕಟ ಮೆಟ್ಟಿ ನಿಲ್ಲುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ವ್ಯಾಪಕ ಪ್ರಯತ್ನ ಅಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕು ಆಡಳಿತದಿಂದ ಆಯೋಜಿಸಿರುವ ಪದವಿಪೂರ್ವ ತರಗತಿ ವಿದ್ಯಾರ್ಥಿಗಳ ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಡ್ ಇಂಟಿಗ್ರೇಟೆಡ್ ಕೋರ್ಸ್ ಆರಂಭಗೊಳ್ಳಲಿದೆ ಎಂದರು.

ಕರೊನಾ ಹೊಸ ಆಲೋಚನೆಗಳಿಗೂ ಅವಕಾಶ ಕಲ್ಪಿಸಿದೆ. ಕೃಷಿಕರಲ್ಲಿ ಆತ್ಮವಿಶ್ವಾಸ ಮೂಡಲು ಸಹಕಾರಿಯಾಗಿದೆ. ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದ ಬೂದುಗುಂಬಳಕಾಯಿಂದ ಸ್ಥಳೀಯವಾಗಿಯೇ ಪೇಟಾ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದರು.

ಡಿಡಿಪಿಐ ನಾಗರಾಜ್ ಕಾಗಲ್ಕರ್ ಮಾತನಾಡಿ, ಶಿವಮೊಗ್ಗ ಜಿಲ್ಲಾ ಆಂಗ್ಲ ಉಪನ್ಯಾಸಕರು ಸೇರಿ ಯೂಟ್ಯೂಬ್​ನಲ್ಲಿ ಹಾಕಿರುವ 14 ಪೂರ್ಣ ಇಂಗ್ಲಿಷ್ ಪಾಠವನ್ನು ದ್ವಿತೀಯ ಪಿಯು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತರಬೇತಿ ಶಿಬಿರದ ಮುಖ್ಯಸ್ಥ ಾಗಭೂಷಣ್ ತರಬೇತಿ ಅವಧಿ ಹಾಗೂ ಇತರೆ ಮಾಹಿತಿ ನೀಡಿದರು. ತರಬೇತಿಯ ಮೊದಲ ದಿನ 70 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು.

ತಹಸೀಲ್ದಾರ್ ಡಾ. ಎಸ್.ಬಿ.ಶ್ರೀಪಾದ, ಹಿರಿಯ ಶಿಕ್ಷಣ ತಜ್ಞ ಪ್ರೊ. ಎಚ್.ಎಸ್.ಗಣೇಶ್​ವುೂರ್ತಿ ಸೇರಿ ತಾಲೂಕಿನ ಎಲ್ಲ ವಿಜ್ಞಾನ ಪಿಯು ಕಾಲೇಜುಗಳ ಪ್ರಾಚಾರ್ಯರಿದ್ದರು. ತುಂಗಾ ಪಿಯು ಕಾಲೇಜಿನ ಪ್ರಾಚಾರ್ಯ ಪ್ರಸನ್ನ ಸ್ವಾಗತಿಸಿದರು. ವಾಗ್ದೇವಿ ಪಿಯೂ ಕಾಲೇಜಿನ ಪ್ರಾಚಾರ್ಯು ಮಮತಾ ಶಿವಕುಮಾರ್ ವಂದಿಸಿದರು. ಮುಕುಂದ್ ಮಾಸ್ಟರ್ ನಿರ್ವಹಿಸಿದರು.

See also  ನಟಿ ಶ್ವೇತಾ ಚಂಗಪ್ಪಗೆ ಕರೊನಾ ಪಾಸಿಟಿವ್​
Share This Article