ತೀರ್ಥಹಳ್ಳಿ: ತಾಲೂಕಿನ ವಿದ್ಯಾರ್ಥಿಗಳಿಗೆ ಸಿಇಟಿ ಹಾಗೂ ನೀಟ್ ಉಚಿತ ತರಬೇತಿಗೆ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಪಿಯು ವಿಜ್ಞಾನ ಕಾಲೇಜುಗಳ ಪ್ರಾಚಾರ್ಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ತಾಂತ್ರಿಕ ತರಗತಿಗಳ ಪ್ರವೇಶಾರ್ಹತೆ ಅಗತ್ಯ. ಈ ಹಿನ್ನೆಲೆಯಲ್ಲಿ ನೀಟ್ ಮತ್ತು ಸಿಇಟಿ ತರಬೇತಿ ಆಯೋಜಿಸುವ ಬಗ್ಗೆ ಮೇ 14ರಂದು ಗೋಪಾಲ ಗೌಡ ರಂಗಮಂದಿರದಲ್ಲಿ ನಡೆಯುವ ಪಿಯು ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.
ತಹಸೀೕಲ್ದಾರ್ ಡಾ. ಎಸ್.ಬಿ.ಶ್ರೀಪಾದ ಮಾತನಾಡಿ, ತಾಲೂಕಿನಲ್ಲಿರುವ ಪಿಸಿಎಂಬಿ ವಿಷಯ ತಜ್ಞರ ಸಹಕಾರದೊಂದಿಗೆ ತರಬೇತಿ ಹೇಗೆ ನೀಡಬಹುದು ಎಂಬುದನ್ನು ನಿರ್ಧರಿಸಲು ಸಭೆ ಕರೆಯಲಾಗಿದೆ. ತಾಲೂಕಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಬೇರೆ ಊರುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೀಗ ತಾಲೂಕಿನಲ್ಲಿ ಇರುವವರೂ ಇದರ ಪ್ರಯೋಜನ ಪಡೆಯಬಹುದು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯ್್ಕ ತಾಪಂ ಇಒ ಆಶಾಲತಾ ಇತರರಿದ್ದರು.