ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಆದ್ಯತೆ ನೀಡಿ

ತಿ.ನರಸೀಪುರ: ಜೀವನದಲ್ಲಿ ಆಡಂಬರಕ್ಕೆ ಒತ್ತು ನೀಡುವ ಬದಲು ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡುವಂತೆ ನಟ ನೀನಾಸಂ ಅಶ್ವತ್ಥ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಯನ ನಾಟ್ಯ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ದಸರಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನಾವು ಯಾರನ್ನೋ ಓಲೈಸಲು ಆಡಂಬರದ ಜೀವನಕ್ಕೆ ಒತ್ತು ನೀಡುತ್ತಿದ್ದೇವೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡುವ ಪ್ರವೃತ್ತಿ ಬಿಟ್ಟು ಸರಳ ಮದುವೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ವಿ.ವಿ. ಜಗದೀಶ್ ಮಾತನಾಡಿದರು. ಚಾಮರಾಜನಗರದ ಹಿರಿಯ ಗಾಯಕ ಸಿ.ಎಂ. ನರಸಿಂಹಮೂರ್ತಿ ಅವರನ್ನು ಗೌರವಿಸಲಾಯಿತು. ನಂಜನಗೂಡು ಶ್ರೀನಿವಾಸ್ ತಂಡದಿಂದ ಸುಗಮ ಸಂಗೀತ, ಕಲಾವಿದೆ ಎ.ಎಂ. ನಯನಾ ಭರತನಾಟ್ಯ ಪಸ್ತುತಪಡಿಸಿದರು.

ನನ್ನವ್ವ ಕಲಾ ತಂಡದ ಅಧ್ಯಕ್ಷ ವೈ.ಜಿ. ಮಹದೇವ್, ಬಾಲ ವಿಕಾಸ ಅಕಾಡೆಮಿ ಮಾಜಿ ಸದಸ್ಯ ನಟರಾಜು, ಪತ್ರಕರ್ತ ಆನಂದ್ ಕುಮಾರ್ ಇತರರಿದ್ದರು.

Leave a Reply

Your email address will not be published. Required fields are marked *