ಸಾಹಸಮಯ ಕ್ರೀಡೆ ನಿರಂತರವಾಗಿರಲಿ

ಹೊನ್ನಾವರ: ದೋಣಿ ಸ್ಪರ್ಧೆಯು ಸಾಹಸಮಯ ಕ್ರೀಡೆ. ಇಂಥಹ ರೋಮಾಚಕಾರಿ ಕ್ರೀಡೆ ನಿರಂತರ ನಡೆಯಲಿ ಎಂದು ಅಕ್ಷಯ ಕೋ-ಆಪರೇಟಿವ್ಹ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಲುಕಾಸ್ ಫರ್ನಾಂಡಿಸ್ ಹೇಳಿದರು.

ತಾಲೂಕಿನ ಹಡಿನಬಾಳದಲ್ಲಿ ಸಂತ ಜೋನ್ ಬ್ಯಾಪ್ತಿಷ್ಟರ ಜನ್ಮದಿನದ ಅಂಗವಾಗಿ ಗುಂಡಬಾಳ ನದಿಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ 4ನೇ ವರ್ಷದ ದೋಣಿ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಕಾರವಾರದ ಇನ್ಸ್​ಪೆಕ್ಟರ್ ಜಾನ್ಸನ್ ಡಿಸೋಜಾ ಹಾಗೂ ಸಾಂತಾ ಪಾತ್ರೋಸ್ ಮಿರಾಂಡಾ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಜಿಪಂ ಸದಸ್ಯ ಕೃಷ್ಣ ಗೌಡ ಕ್ರೀಡಾ ನಿಯಮ ತಿಳಿಸಿದರು. ಉದ್ಯಮಿ ಜಿ.ಜಿ. ಶಂಕರ ಅಧ್ಯಕ್ಷತೆ ವಹಿಸಿದ್ದರು. ರಾಜೇಶ ಗೋಮ್್ಸ, ಸಾಮಾಜಿಕ ಕಾರ್ಯಕರ್ತ ಶ್ರೀಧರ ನಾಯ್ಕ, ಮಂಕಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ, ಗಣಪತಿ ಕೆ. ನಾಯ್ಕ ಇತರರು ಉಪಸ್ಥಿತರಿದ್ದರು. ಪ್ರಕಾಶ ಡಯಾಸ್ ಸ್ವಾಗತಿಸಿದರು. ಹೆಂಡ್ರಿಕ್ ರೊಡ್ರಗೀಸ್ ವರದಿ ವಾಚಿಸಿದರು. ಸುರೇಶ ಲೊಪೀಸ್ ನಿರ್ವಹಿಸಿದರು.

ಸ್ಪರ್ಧೆಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವರು. ಹಡಿನಬಾಳ ಸೇತುವೆಯಿಂದ ಪ್ರಾರಂಭವಾದ ಸ್ಪರ್ಧೆ ವಲ್ಕಿತಾರಿ ವರೆಗೆ ತೆರಳಿ ಪುನ: ಸೇತುವೆ ತಲುಪಿತು. ಸುಮಾರು 3 ಕಿಮೀ ದೂರ ಕ್ರಮಿಸುವಾಗ ನದಿಯ ಇಕ್ಕೆಲಗಳಲ್ಲಿ ಜನರು ಹುರಿದುಂಬಿಸಿದರು. ಸೇಂಟ್ ಫ್ರಾನ್ಸಿಸ್ ಎ ತಂಡ ಪ್ರಥಮ, ಸೇಂಟ್ ಜೋಸೆಫ್ ಎ ತಂಡ ದ್ವಿತೀಯ ಸ್ಥಾನ ಹಾಗೂ ಸೇಂಟ್ ಫ್ರಾನ್ಸಿಸ್ ಬಿ ತಂಡ ಮೂರನೇ ಸ್ಥಾನ ಪಡೆಯಿತು.

Leave a Reply

Your email address will not be published. Required fields are marked *