ಸಾವು ಗೆದ್ದು ಬಂದವರಿಗೆ ಚಿಕಿತ್ಸೆ

ಧಾರವಾಡ: ಕಟ್ಟಡ ಕುಸಿತದಲ್ಲಿ ಅವಶೇಷಗಳಡಿ ಸಿಲುಕಿ ಸಾವು ಗೆದ್ದು ಬಂದು ಗಾಯಗೊಂಡಿದ್ದ 22ಕ್ಕೂ ಹೆಚ್ಚು ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ತೀವ್ರವಾಗಿ ಗಾಯಗೊಂಡವರನ್ನು ಕಿಮ್್ಸ ಹಾಗೂ ಎಸ್​ಡಿಎಂ ಆಸ್ಪತ್ರೆಗೆ ಸೇರಿಸಲಾಯಿತು.

ಈ ಮಧ್ಯೆ ಸಂಬಂಧಿಕರು ಗಾಯಾಳುಗಳ ಪಟ್ಟಿಯಲ್ಲಿ ತಮ್ಮ ಸಂಬಂಧಿಯ ಹೆಸರು ಇದೆಯೇ ಎಂದು ತಿಳಿದುಕೊಳ್ಳಲು ವೈದ್ಯರ, ಪೊಲೀಸರ ಹಾಗೂ ಮಾಧ್ಯಮದವರಿಗೆ ದುಂಬಾಲು ಬೀಳುತ್ತಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳನ್ನು ಕಾಣಲು ಬಂದಿದ್ದ ಸಂಬಂಧಿಕರು, ಕಟ್ಟದ ಮಾಲೀಕರಿಗೆ ಹಿಡಿ ಶಾಪ ಹಾಕುತ್ತಾ ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲುಕುವಂತಿತ್ತು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿಗೀಹಳ್ಳಿಯಿಂದ ಮೂವರು ಕಟ್ಟಡ ಕಾರ್ವಿುಕರು ಬಂದಿದ್ದರು. ಅವರಲ್ಲಿ ಒಬ್ಬರು ಪಾರಾದರೆ, ಇಬ್ಬರು ಅವಶೇಷಗಳಡಿ ಇದ್ದಾರೆ. ಧಾರವಾಡ ತಾಲೂಕಿನ ತಡಕೋಡದ ಅಕ್ಬರ್ ಎಂಬ ಕಾರ್ವಿುಕ ಅವಶೇಷಗಳಡಿ ಇದ್ದಾರೆ ಎಂದು ಅವರನ್ನು ಕೆಲಸಕ್ಕೆ ಕರೆತಂದಿದ್ದ ಲಾಲಸಾಬ್ ದಾವಲನವರ ಮಾಹಿತಿ ನೀಡಿದರು. ಧಾರವಾಡದ ಜನ್ನತ್ ನಗರದ ಅಲ್ತಾಫ್ ಶೇಖ ಎಂಬುವರ ಕುಟುಂಬಸ್ಥರು, ಟಿ.ಆರ್. ನಗರದ ನವಲು ದಾಡು ಜೋರೆ, ವಾಗು ವಿಠ್ಠಲ ಜೋರೆ, ಸಾಹು ವಾಲು ಕೋಕರೆ ಅವರು ಗಾರೆ ಕೆಲಸಕ್ಕೆ ಹೋಗಿದ್ದರು. ರಾತ್ರಿ 12ರವರೆಗೂ ಅವರ ಮಾಹಿತಿ ಸಿಕ್ಕಿಲ್ಲ. ಸಂಬಂಧಿಗಳು ಆಸ್ಪತ್ರೆ ಎದುರು ಆತಂಕಿತರಾಗಿ ಕಾಯುತ್ತಿದ್ದಾರೆ.

ಗಾಯಗೊಂಡವರ ವಿವರ: ಧಾರವಾಡ ರಸೂಲಪೂರ ಓಣಿಯ ಮುನಾವರ್ ಬಸಾಪೂರ(32), ಮನಕಿಲ್ಲಾದ ಪೇಂಟಿಂಗ್ ಕೆಲಸಗಾರ ಹಜರತ್ ಕುಂದಗೋಳ, ಧಾರವಾಡದ ಮಂಜುನಾಥ ಬೇಂದ್ರೆ (27), ಕೆಂಪಗೇರಿಯ ಯಲ್ಲಪ್ಪ ಜೋಗಿನ (40), ಹಳೇ ಹುಬ್ಬಳ್ಳಿಯ ಟಿಪ್ಪುನಗರದ ಮಹ್ಮದಗೌಸ್ ಯಾದಗಿರಿ, ಹುಬ್ಬಳ್ಳಿಯ ಬೈರಿದೇವರಕೊಪ್ಪದ ಸಾಹಿಲ್ ಮಕಾಂದರ್ (23), ಧಾರವಾಡ ಕುರುಬರ ಓಣಿಯ ಸಾದಿಕ್ ಯಾಸೀನ್ (25), ಅಪೊಲೋ ಮಡಿಕಲ್ ಶಾಪ್ ಉದ್ಯೋಗಿ ಮಮತಾ ತಮ್ಮಳ್ಳಿ, ಹುಬ್ಬಳ್ಳಿ ಬಂಡೆಕಟ್ಟಿ ಓಣಿಯ ಮೆಹಬೂಬ್ ಹಂಚಿನಾಳ (45), ಹಳೇ ಹುಬ್ಬಳ್ಳಿ ಎಸ್.ಎಂ. ಕೃಷ್ಣಾನಗರದ ನೂರಅಹ್ಮದ್ ಮಕಾಂದರ (44), ಅಸೂಡೆ ಖಾನಾಪೂರದ ಸಂಗ್ರಾಮ ಅರಾಡೆ (45), ಧಾರವಾಡದ ಶ್ರೀರಾಮನಗರದ ಶಿವನಗೌಡ ನರಗುಂದ (31), ಕುಮಾರೇಶ್ವರ ನಗರದ ಸುರೇಂದ್ರ ಯಾದವ (19), ದೇನಾ ಬ್ಯಾಂಕ್ ಕಾಲನಿಯ ಸುನೀಲಕುಮಾರ (25), ಸುಲ್ತಾನಸಾಬ್ (38), ಮಲ್ಲಪ್ಪ ಗಡೆದವರ (28), ನಾಗರಾಜ ಶೀಲವಂತರ (24), ಚನ್ನಬಸು ಕಲಾದಗಿ (38), ಬಶೀರ್ ಕಲಾದಗಿ, ಅಬ್ದುಲ್​ರಸೂಲ್ ಬಿಜಾಪೂರ (35), ಅಲ್ತಾಪ್ ಶೇಖಸನದಿ (22), ಮಲ್ಲನಗೌಡ ಪಾಟೀಲ, ಮಹ್ಮದಗೌಸ್ ಮುಕ್ತಿಯಾರ್ ಹಾಗೂ ಇತರರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.